ಅಬುಧಾಬಿ: 13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ನ 11 ನೇ ಪಂದ್ಯದಲ್ಲಿ ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ ನಾಯಕ ಶ್ರೇಯಸ್ ಅಯ್ಯರ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.
ಸತತ ಎರಡು ಗೆಲುವು ಪಡೆದು ಮುನ್ನುಗ್ಗುತ್ತಿರುವ ಡೆಲ್ಲಿ ಕ್ಯಾಪಿಟಲ್ ತಂಡ ಸನ್ರೈಸರ್ಸ್ ವಿರುದ್ಧವೂ ತನ್ನ ಜಯದ ಓಟವನ್ನು ಮುಂದುವರಿಸುವ ಬಯಕೆಯಲ್ಲಿದೆ. ಈ ಪಂದ್ಯದಲ್ಲಿ ಅವೇಶ್ ಖಾನ್ ಬದಲಿಗೆ ಅನುಭವಿ ವೇಗಿ ಇಶಾಂತ್ ಶರ್ಮಾರನ್ನು ತಂಡಕ್ಕೆ ಸೇರ್ಪಡೆ ಮಾಡಿಕೊಂಡಿದೆ.
-
Delhi Capitals have won the toss and they will bowl first in Match 11 of #Dream11IPL.#DCvSRH pic.twitter.com/27LdfDett8
— IndianPremierLeague (@IPL) September 29, 2020 " class="align-text-top noRightClick twitterSection" data="
">Delhi Capitals have won the toss and they will bowl first in Match 11 of #Dream11IPL.#DCvSRH pic.twitter.com/27LdfDett8
— IndianPremierLeague (@IPL) September 29, 2020Delhi Capitals have won the toss and they will bowl first in Match 11 of #Dream11IPL.#DCvSRH pic.twitter.com/27LdfDett8
— IndianPremierLeague (@IPL) September 29, 2020
ಇತ್ತ ಮೊದಲೆರಡು ಪಂದ್ಯಗಳಲ್ಲಿ ಆರ್ಸಿಬಿ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಸೋಲು ಕಂಡಿರುವ ಸನ್ರೈಸರ್ಸ್ ತಂಡ ಮೊದಲ ಗೆಲುವಿನ ನಿರೀಕ್ಷೆಯಲ್ಲಿದೆ. ಹೈದರಾಬಾದ್ ತಂಡ ಈ ಪಂದ್ಯದಲ್ಲಿ 2 ಬದಲಾವಣೆಗಳನ್ನು ಮಾಡಿಕೊಂಡಿದೆ. ನಬಿ ಬದಲಿಗೆ ಕೇನ್ ವಿಲಿಯಮ್ಸನ್ ಮತ್ತು ವೃದ್ಧಿಮಾನ್ ಸಹಾ ಬದಲಿಗೆ ಅಬ್ಧುಲ್ ಸಮದ್ರನ್ನು ಆಯ್ಕೆ 11ರ ಬಳಗಕ್ಕೆ ಸೇರಿಸಿಕೊಂಡಿದೆ.
-
A look at the Playing XI for #DCvSRH
— IndianPremierLeague (@IPL) September 29, 2020 " class="align-text-top noRightClick twitterSection" data="
Live - https://t.co/doLGBBdMRq #Dream11IPL pic.twitter.com/AN9vwZn382
">A look at the Playing XI for #DCvSRH
— IndianPremierLeague (@IPL) September 29, 2020
Live - https://t.co/doLGBBdMRq #Dream11IPL pic.twitter.com/AN9vwZn382A look at the Playing XI for #DCvSRH
— IndianPremierLeague (@IPL) September 29, 2020
Live - https://t.co/doLGBBdMRq #Dream11IPL pic.twitter.com/AN9vwZn382
ಎರಡು ತಂಡಗಳು ಇಲ್ಲಿಯವರೆಗೆ 15 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, ಡೆಲ್ಲಿ 6 ಬಾರಿ ಪಂದ್ಯ ಗೆದ್ದಿದ್ದರೆ, ಹೈದರಾಬಾದ್ 9 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ.
ಡೆಲ್ಲಿ ಕ್ಯಾಪಿಟಲ್ : ಶಿಖರ್ ಧವನ್, ಪೃಥ್ವಿ ಶಾ, ಶ್ರೇಯಸ್ ಅಯ್ಯರ್, ರಿಷಭ್ ಪಂತ್, ಶಿಮ್ರಾನ್ ಹೆಟ್ಮಿಯರ್, ಮಾರ್ಕಸ್ ಸ್ಟೊಯಿನಿಸ್, ಆಕ್ಸರ್ ಪಟೇಲ್, ಕಗಿಸೊ ರಬಡಾ, ಅನ್ರಿಕ್ ನಾರ್ಟ್ಜೆ, ಅಮಿತ್ ಮಿಶ್ರಾ, ಇಶಾಂತ್ ಶರ್ಮಾ
ಸನ್ರೈಸರ್ಸ್ ಹೈದರಾಬಾದ್: ಡೇವಿಡ್ ವಾರ್ನರ್, ಜಾನಿ ಬೈರ್‌ಸ್ಟೋವ್, ಮನೀಶ್ ಪಾಂಡೆ, ಕೇನ್ ವಿಲಿಯಮ್ಸನ್ , ಅಬ್ಧುಲ್ ಸಮದ್, ಪ್ರಿಯಮ್ ಗರ್ಗ್, ಅಭಿಷೇಕ್ ಶರ್ಮಾ, ರಶೀದ್ ಖಾನ್, ಭುವನೇಶ್ವರ್ ಕುಮಾರ್, ಟಿ ನಟರಾಜನ್, ಖಲೀಲ್ ಅಹ್ಮದ್