ಶಾರ್ಜಾ: ಸನ್ರೈಸರ್ಸ್ ಹೈದರಾಬಾದ್ (ಎಸ್ಆರ್ಎಚ್) ವೇಗಿ ಗಾಯದಿಂದಾಗಿ 13ನೇ ಆವೃತ್ತಿಯ ಐಪಿಎಲ್ನಿಂದ ಹೊರಗುಳಿದ ಕಾರಣ, ಆತನ ಸ್ಥಾನಕ್ಕೆ ಆಯ್ಕೆಯಾದ ಸಂದೀಪ್ ಶರ್ಮಾ ಅವರ ಕುರಿತು ಆಸ್ಟ್ರೇಲಿಯಾ ಮಾಜಿ ಆಟಗಾರ ಬ್ರಾಡ್ ಹಾಗ್ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.
ಸಂದೀಪ್ ಶರ್ಮಾ ಅವರ ಬೌಲಿಂಗ್ ನೋಡಿ ಪ್ರಭಾವಿತನಾಗಿದ್ದೇನೆ. ಎಸ್ಆರ್ಎಚ್ ಪರ ಬೌಲಿಂಗ್ ನಿರ್ವಹಣೆಯಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಬೌಲಿಂಗ್ನಲ್ಲಿ ಸಂಪೂರ್ಣ ಚಾಕಚಕ್ಯತೆ ಹೊಂದಿದ್ದಾರೆ ಎಂದು ಅವರು ಹೇಳಿದ್ದಾರೆ.
ಮಂಗಳವಾರ ರಾತ್ರಿ ಜರುಗಿದ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಮುಂಬೈ ವಿರುದ್ಧ ಎಸ್ಆರ್ಎಚ್ 10 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿತು. ಅದಕ್ಕೆ ಸಂದೀಪ್ ಅವರ ಅತ್ಯಂತ ಪ್ರಮುಖ. ಮೊದಲು ಬ್ಯಾಟ್ ಮಾಡಿದ ಮುಂಬೈನ ಆರಂಭಿಕ ಆಟಗಾರರನ್ನು ಸಂದೀಪ್ ಔಟ್ ಮಾಡುವ ಮೂಲಕ ಗರಿಷ್ಠ ಸ್ಕೋರ್ಗೆ ಕಡಿವಾಣ ಹಾಕಿದ್ದರು. ನಂತರ ಇಶಾನ್ ಕಿಶಾನ್ರನ್ನು ಬಲಿ ಪಡೆದರು.
ನಂತರ ಬಂದ ಬ್ಯಾಟ್ಸ್ಮೆನ್ಗಳ ಪೈಕಿ ಕಿರಾನ್ ಪೊಲಾರ್ಡ್ ಬಿಟ್ಟರೆ ಯಾರೊಬ್ಬರೂ ಅಬ್ಬರಿಸಿಲ್ಲ. ಎಲ್ಲ ಓವರ್ಗಳ ಮುಕ್ತಾಯಕ್ಕೆ ಮುಂಬೈ 8 ವಿಕೆಟ್ ಕಳೆದುಕೊಂಡು 149 ರನ್ ಗಳಿಸಲಷ್ಟೇ ಶಕ್ತವಾಯಿತು. ಸಾಧಾರಣ ಮೊತ್ತವನ್ನು ಬೆನ್ನಟ್ಟಿದ ಹೈದರಾಬಾದ್ 10 ವಿಕೆಟ್ಗಳ ರೋಚಕ ಗೆಲುವು ದಾಖಲಿಸಿ 2 ಪಾಯಿಂಟ್ಗಳನ್ನು ಪಡೆಯುವ ಮೂಲಕ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಲಗ್ಗೆ ಇಟ್ಟಿತು.
ಸೊಂಟದ ನೋವಿನಿಂದ ಐಪಿಎಲ್ನಿಂದ ಹೊರಗುಳಿದ ಕಾರಣ ಎಸ್‌ಆರ್‌ಎಚ್‌ಗೆ ಹೆಚ್ಚು ನಷ್ಟ ಉಂಟಾಗಿತ್ತು ಎನ್ನಲಾಗಿತ್ತು. ಆದರೆ, ಭುವನೇಶ್ವರ್ ಗಾಯದ ನಂತರ ಎಸ್‌ಆರ್‌ಎಚ್‌ಗೆ ಆಗಿದ್ದ ನಷ್ಟವನ್ನು ಸಂದೀಪ್ ಭರಿಸಿದ್ದಾರೆ. 'ಅಂಡರ್ರೇಟೆಡ್' ಆಟಗಾರನೊಬ್ಬ ಈ ಐಪಿಎಲ್‌ನಲ್ಲಿ ಅವರ ಸ್ಥಿರತೆಗೆ ಅತ್ಯಂತ ಪ್ರಭಾವಿತನಾಗಿದ್ದೇನೆ ಎಂದು ಹಾಗ್ ಟ್ವೀಟ್ ಮಾಡಿದ್ದಾರೆ.
ಮತ್ತೊಂದೆಡೆ ಎಲಿಮಿನೇಟರ್ ಪಂದ್ಯದಲ್ಲಿ ಎಸ್‌ಆರ್‌ಹೆಚ್ ತಂಡವು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡವನ್ನು ಎದುರಿಸಲಿದೆ.