ETV Bharat / sports

ಗೆಲುವಿನ ಸಂಭ್ರಮದಲ್ಲಿದ್ದ ಹೈದರಾಬಾದ್​ಗೆ ಆಘಾತ: ಇಬ್ಬರು ಪ್ರಮುಖ ಆಟಗಾರರಿಗೆ ಗಾಯ - ಗಾಯಗೊಂಡ ವಿಜಯ್ ಶಂಕರ್

ಡೆಲ್ಲಿ ತಂಡದ ವಿರುದ್ಧ ಸ್ಫೋಟಕ ಬ್ಯಾಟಿಂಗ್ ನಡೆಸಿದ್ದ ವೃದ್ಧಿಮಾನ್ ಸಹಾ ಗಾಯಗೊಂಡಿದ್ದಾರೆ ಎಂದು ಹೈದರಾಬಾದ್ ತಂಡದ ನಾಯಕ ಡೇವಿಡ್ ವಾರ್ನರ್ ಹೇಳಿದ್ದಾರೆ.

SunRisers Hyderabad
ಸನ್​ರೈಸರ್ಸ್ ಹೈದರಾಬಾದ್
author img

By

Published : Oct 28, 2020, 7:56 AM IST

Updated : Oct 28, 2020, 9:38 AM IST

ದುಬೈ: ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 88 ರನ್‌ಗಳ ಬೃಹತ್ ಗೆಲುವು ಸಾಧಿಸಿದ ಸನ್ ​ರೈಸರ್ಸ್ ಹೈದರಾಬಾದ್ ತಂಡಕ್ಕೆ ಆಘಾತ ಎದುರಾಗಿದ್ದು, ವೃದ್ಧಿಮಾನ್ ಸಹಾ ಮತ್ತು ವಿಜಯ ಶಂಕರ್ ಗಾಯಗೊಂಡಿದ್ದಾರೆ.

ಪಂದ್ಯ ಮುಗಿದ ಬಳಿಕ ಮಾತನಾಡಿದ ಹೈದರಾಬಾದ್ ತಂಡದ ನಾಯಕ ಡೇವಿಡ್ ವಾರ್ನರ್, ವೃದ್ಧಿಮಾನ್ ಸಹಾ ಮತ್ತು ವಿಜಯ್ ಶಂಕರ್ ಗಾಯಗೊಂಡಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಸಹಾ ತೊಡೆಸಂದು ನೋವಿಗೆ ತುತ್ತಾಗಿದ್ರೆ, ವಿಜಯ್ ಶಂಕರ್​ಗೆ ಮಂಡಿರುಜ್ಜು ಸಮಸ್ಯೆ ಕಾಣಿಸಿಕೊಂಡಿದೆ ಎಂದಿದ್ದಾರೆ.

Wriddhiman Saha
ವೃದ್ಧಿಮಾನ್ ಸಹಾ

"ದುರದೃಷ್ಟವಶಾತ್ ಸಹಾ ಅವರಿಗೆ ತೊಡೆಸಂದು ನೋವು ಕಾಣಿಸಿಕೊಂಡಿದೆ. ಆದರೆ ಅಷ್ಟೇನೂ ಗಂಭೀರವಾಗಿಲ್ಲ ಎಂದಿದ್ದಾರೆ. ಇತ್ತ ಶಂಕರ್ ಅವರಿಗೆ ಮಂಡಿರಜ್ಜು ಸಮಸ್ಯೆ ಇದೆ ಎಂದಿದ್ದಾರೆ. ಇದೇ ವೇಳೆ ರಶೀದ್ ಖಾನ್ ಬೌಲಿಂಗ್ ಬಗ್ಗೆ ಮಾತನಾಡಿದ ವಾರ್ನರ್, ರಶೀದ್ ಹೆಚ್ಚು ವಿಕೆಟ್ ಪಡೆದು ಕಡಿಮೆ ರನ್ ನೀಡುತ್ತಿದ್ದು, ಅದ್ಭುತವಾಗಿ ಸ್ಪೆಲ್ ಮಾಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Vijay Shankar
ವಿಜಯ್ ಶಂಕರ್

220 ರನ್​ಗಳ ಗುರಿ ಚೇಸ್ ಮಾಡಲು ವಿಫಲವಾದ ಡೆಲ್ಲಿ 131 ರನ್​​ಗಳಿಗೆ ಸರ್ವಪತನ ಕಂಡಿತು. ಹೈದರಾಬಾದ್ ಪರ ರಶೀದ್ ಖಾನ್ ಮೂರು ವಿಕೆಟ್ ಕಬಳಿಸಿದರೆ, ಸಂದೀಪ್ ಶರ್ಮಾ ಮತ್ತು ಟಿ.ನಟರಾಜನ್ ತಲಾ ಎರಡು ವಿಕೆಟ್ ಪಡೆದರು.

ಈ ಗೆಲುವಿನೊಂದಿಗೆ ಸನ್ ‌ರೈಸರ್ಸ್ ಹೈದರಾಬಾದ್ ಈಗ 12 ಪಂದ್ಯಗಳಿಂದ 10 ಅಂಕಗಳೊಂದಿಗೆ ಪಾಯಿಂಟ್ ಟೇಬಲ್‌ನಲ್ಲಿ ಆರನೇ ಸ್ಥಾನದಲ್ಲಿದೆ. ಮತ್ತೊಂದೆಡೆ ದೆಲ್ಲಿ ಕ್ಯಾಪಿಟಲ್ಸ್ 12 ಪಂದ್ಯಗಳಿಂದ 14 ಅಂಕಗಳೊಂದಿಗೆ ಮೂರನೇ ಸ್ಥಾನಕ್ಕೆ ಕುಸಿದಿದೆ.

Last Updated : Oct 28, 2020, 9:38 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.