ಅಬುಧಾಬಿ: ನಾಯಕ ರೋಹಿತ್ ಶರ್ಮಾ(80) ಹಾಗೂ ಸೂರ್ಯ ಕುಮಾರ್ ಯಾದವ್(47) ಅವರ ಅಬ್ಬರದ ಬ್ಯಾಟಿಂಗ್ ನೆರವಿನಿಂದ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್, ಕೆಕೆಆರ್ ತಂಡಕ್ಕೆ 196ರನ್ಗಳ ಬೃಹತ್ ಟಾರ್ಗೆಟ್ ನೀಡಿದೆ. ಇಂದೇ ಮೊದಲ ಪಂದ್ಯವಾಡುತ್ತಿರುವ ಕೆಕೆಆರ್ ಬೌಲರ್ಗಳನ್ನು ರೋಹಿತ್, ಸೂರ್ಯಕುಮಾರ್ ಹಾಗೂ ಪಾಂಡ್ಯ ಮೂಲೆಮೂಲೆಗಳಿಗೂ ಬೌಂಡರಿ ಸಿಕ್ಸರ್ ಸಿಡಿಸಿ ಹೈರಾಣಾಗಿಸಿದರು.
ಒಟ್ಟಾರೆ 20 ಓವರ್ಗಳಲ್ಲಿ ಮುಂಬೈ ಇಂಡಿಯನ್ಸ್ 5 ವಿಕೆಟ್ ಕಳೆದುಕೊಂಡು 195 ರನ್ಗಳಿಸಿದೆ.
ಟಾಸ್ ಸೋತು ಬ್ಯಾಟಿಂಗ್ ನಡೆಸಿದ ಮುಂಬೈ ಇಂಡಿಯನ್ಸ್ ಆರಂಭದಲ್ಲೇ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಕ್ವಿಂಟನ್ ಡಿಕಾಕ್(1) ವಿಕೆಟ್ ಕಳೆದುಕೊಂಡಿತು.
ಆದರೆ 2ನೇ ವಿಕೆಟ್ ಜೊತೆಯಾಟದಲ್ಲಿ ಒಂದಾದ ರೋಹಿತ್ ಹಾಗೂ ಸೂರ್ಯಕುಮಾರ್ ಯಾದವ್(47) 90 ರನ್ಗಳ ಜೊತೆ ಯಾಟ ನೀಡಿ ಆರಂಭಿಕ ಆಘಾತದಿಂದ ಪಾರು ಮಾಡಿದರು. 28 ಎಸೆತಗಳಲ್ಲಿ 6 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 47 ರನ್ಗಳಿಸಿದ್ದ ಯಾದವ್ ರನ್ಔಟ್ ಆದರು.
-
Innings Break!
— IndianPremierLeague (@IPL) September 23, 2020 " class="align-text-top noRightClick twitterSection" data="
A well made 80 by @ImRo45 , 47 by Surya and a quickfire 21 by Tiwary helps @mipaltan post a total of 195/5 on the board.
Will #KKR chase this down?#Dream11IPL #KKRvMI pic.twitter.com/GXxtH7FRsH
">Innings Break!
— IndianPremierLeague (@IPL) September 23, 2020
A well made 80 by @ImRo45 , 47 by Surya and a quickfire 21 by Tiwary helps @mipaltan post a total of 195/5 on the board.
Will #KKR chase this down?#Dream11IPL #KKRvMI pic.twitter.com/GXxtH7FRsHInnings Break!
— IndianPremierLeague (@IPL) September 23, 2020
A well made 80 by @ImRo45 , 47 by Surya and a quickfire 21 by Tiwary helps @mipaltan post a total of 195/5 on the board.
Will #KKR chase this down?#Dream11IPL #KKRvMI pic.twitter.com/GXxtH7FRsH
ನಂತರ ನಾಯಕ ಜೊತೆಯಾದ ಸೌರಬ್ ತಿವಾರಿ(21) ರನ್ಗಳಿಸಿ 3ನೇ ವಿಕೆಟ್ 51 ರನ್ ಸೇರಿಸಿ ನರೈನ್ ಬೌಲಿಂಗ್ನಲ್ಲಿ ಔಟಾದರು. ಅದ್ಭತ ಬ್ಯಾಟಿಂಗ್ ಪ್ರದರ್ಸನ ತೋರಿದ ರೋಹಿತ್ ಶರ್ಮಾ 54 ಎಸೆತಗಳಲ್ಲಿ 6 ಸಿಕ್ಸ್ ಹಾಗೂ 3 ಬೌಂಡರಿ ಸಹಿತ 80 ರನ್ಗಳಿಸಿ ಶಿವಂ ಮಾವಿಗೆ ವಿಕೆಟ್ ಒಪ್ಪಿಸಿದರು
ಇವರ ಬೆನ್ನಲ್ಲೇ ಹಾರ್ದಿಕ್ ಪಾಂಡ್ಯ ಕೂಡ 13 ಎಸೆತಗಳಲ್ಲಿ 18 ರನ್ಗಳಿಸಿ ರಸೆಲ್ ಬೌಲಿಂಗ್ನಲ್ಲಿ ಹಿಟ್ ವಿಕೆಟ್ ಮೂಲಕ ಪೆವಿಲಿಯನ್ ಸೇರಿಕೊಂಡರು. 150ನೇ ಪಂದ್ಯವಾಡುತ್ತಿರುವ ಕೀರನ್ ಪೊಲಾರ್ಡ್ ಔಟಾಗದೆ 13 ರನ್ಗಳಿಸಿದರು.
ಸಿಎಸ್ಕೆ ಪರ ಯುವ ಬೌಲರ್ ಶಿವಂ ಮಾವಿ 4 ಓವರ್ಗಳಲ್ಲಿ 32 ರನ್ ನೀಡಿ 2 ವಿಕೆಟ್ ಪಡೆದು ಯಶಸ್ವಿ ಬೌಲರ್ ಎನಿಸಿಕೊಂಡರೆ, ಸ್ಪಿನ್ ಲೆಜೆಂಡ್ ನರೈನ್ 22 ರನ್ 1 ವಿಕೆಟ್ ಹಾಗೂ ರಸೆಲ್ 17ರನ್ 1 ವಿಕೆಟ್ ಪಡೆದರು. 15.5 ಕೋಟಿಗೆ ಬಿಕರಿಯಾಗಿರುವ ಆಸ್ಟ್ರೇಲಿಯಾದ ಪ್ಯಾಟ್ ಕಮ್ಮಿನ್ಸ್ 3 ಓವರ್ಗಳಲ್ಲಿ 49 ರನ್ ಬಿಟ್ಟುಕೊಡುವ ಮೂಲಕ ದುಬಾರಿಯಾದರು.