ETV Bharat / sports

ಕೆಕೆಆರ್​​ ವಿರುದ್ಧ 8 ವಿಕೆಟ್​ಗಳ ಸುಲಭ ಜಯ ಸಾಧಿಸಿ ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದ ಆರ್​ಸಿಬಿ

ಈ ಗೆಲುವಿನ ಮೂಲಕ ಆರ್​ಸಿಬಿ 14 ಅಂಕ ಪಡೆದು ಪಾಯಿಂಟ್ ಟೇಬಲ್​ನಲ್ಲಿ 2ನೇ ಸ್ಥಾನಕ್ಕೆ ಬಡ್ತಿ ಪಡೆಯಿತು. ಕೆಕೆಆರ್ 4ನೇ ಸ್ಥಾನದಲ್ಲೇ ಉಳಿಯಿತು.

ರಾಯಲ್​ ಚಾಲೆಂಜರ್ಸ್​ ಬೆಂಗಳೂರು
ರಾಯಲ್​ ಚಾಲೆಂಜರ್ಸ್​ ಬೆಂಗಳೂರು
author img

By

Published : Oct 21, 2020, 10:50 PM IST

ಅಬುಧಾಬಿ: ರಾಯಲ್​ ಚಾಲೆಂಜರ್ಸ್ ಬೆಂಗಳೂರು ತಂಡ ತನ್ನ ಬೌಲಿಂಗ್ ಹಾಗೂ ಬ್ಯಾಟಿಂಗ್​ನ ಸಂಘಟಿತ ಪ್ರದರ್ಶನದಿಂದ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ 8 ವಿಕೆಟ್​ಗಳ ಸುಲಭ ಜಯ ಸಾಧಿಸಿದೆ.

ಕೆಕೆಆರ್ ನೀಡಿದ 85 ರನ್​ಗಳ ಗುರಿಯನ್ನು 13. 3 ಓವರ್​ಗಳಲ್ಲಿ 2 ವಿಕೆಟ್ ಕಳೆದುಕೊಂಡು ತಲುಪುವುದರ ಮೂಲಕ 8 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿ ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೆ ಬಡ್ತಿಪಡಿದಿದೆ.

84 ರನ್​ಗಳ ಸುಲಭ ಗುರಿಯನ್ನ ಬೆನ್ನತ್ತಿದ ಆರ್​ಸಿಬಿ ಪರ ಆರಂಭಿಕ ಬ್ಯಾಟ್ಸ್​ಮನ್​ಗಳಾದ ದೇವದತ್​ ಪಡಿಕ್ಕಲ್​ 25, ಫಿಂಚ್ 16 ರನ್​ಗಳಿಸಿ ಔಟಾದರು. ಕೊಹ್ಲಿ(18) ಮತ್ತು ಗುರ್ಕಿರಾತ್​ ಸಿಂಗ್(21) ಮುರಿಯದ 3ನೇ ವಿಕೆಟ್​ಗೆ 39 ರನ್​ಗಳಿಸಿ ಗೆಲುವಿನ ದಡ ಸೇರಿಸಿದರು.

ಇದಕ್ಕು ಮೊದಲು ಬ್ಯಾಟಿಂಗ್ ನಡೆಸಿದ ಕೆಕೆಆರ್​ ಮೊಹಮ್ಮದ್ ಸಿರಾಜ್ ಬೌಲಿಂಗ್ ದಾಳಿಗೆ ತತ್ತರಿಸಿ 20 ಓವರ್​ಗಳಲ್ಲಿ 8 ವಿಕೆಟ್ ಕಳೆದುಕೊಂಡು 84 ರನ್​ಗಳಿಸುವ ಮೂಲಕ ಐಪಿಎಲ್​ನಲ್ಲಿ ತನ್ನ 2ನೇ ಕನಿಷ್ಠ ಮೊತ್ತ ದಾಖಲಿಸಿತು. ಇಯಾನ್ ಮಾರ್ಗನ್ 30 ರನ್​ಗಳಿಸಿ ಗರಿಷ್ಠ ಸ್ಕೋರರ್​ ಎನಿಸಿಕೊಂಡರು.

ಬೆಂಗಳೂರು ಪರ ಸಿರಾಜ್ 4 ಓವರ್​ಗಳಲ್ಲಿ 2 ಮೇಡನ್ ಸಹಿತ ಕೇವಲ 8 ರನ್​ ನೀಡಿ 3 ವಿಕೆಟ್ ಪಡೆದರೆ, ಚಹಾಲ್ 15 ರನ್​ ನೀಡಿ 2 ವಿಕೆಟ್, ಸೈನಿ 23 ರನ್​ ನೀಡಿ 1 ಹಾಗೂ ಸುಂದರ್ 14 ರನ್​ ನೀಡಿ 1 ವಿಕೆಟ್ ಪಡೆದು ಕೆಕೆಆರ್ ತಂಡವನ್ನು ಅಲ್ಪ ಮೊತ್ತಕ್ಕೆ ಕುಸಿಯುವಂತೆ ಮಾಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.