ETV Bharat / sports

ನಂಬಿಕೆ ಉಳಿಸಿಕೊಳ್ಳುವುದು ನನ್ನ ಕರ್ತವ್ಯವಾಗಿತ್ತು: ಸ್ಫೋಟಕ ಬ್ಯಾಟಿಂಗ್ ಹಿಂದಿನ ರಹಸ್ಯ ಬಿಚ್ಚಿಟ್ಟ ತೆವಾಟಿಯಾ - ಪಿಎಲ್ 2020

ಮೊದಲ 23 ಎಸೆತಗಳಲಲ್ಲಿ ಕೇವಲ 17 ರನ್​ಗಳಿಸಿದ್ದ ತೆವಾಟಿಯಾ ರಾಜಸ್ಥಾನ ತಂಡದ ಸೋಲಿಗೆ ನೇರ ಕಾರಣವಾಗಹುದು ಎಂದು ಎಲ್ಲರ ಅಭಿಪ್ರಾಯವಾಗಿತ್ತು. ಆದರೆ, ಅವರು ಇನ್ನಿಂಗ್ಸ್​ನ 18ನೇ ಓವರ್​ನಲ್ಲಿ 5 ಸಿಕ್ಸರ್​ ಸಿಡಿಸಿ ಪಂದ್ಯದ ಗತಿಯನ್ನೇ ಬದಲಿಸಿದರು. ತೆವಾಟಿಯಾ ಕೊನೆಯ 8 ಎಸೆತಗಳಲ್ಲಿ 7 ಸಿಕ್ಸರ್​ ಸಹಿತ 36 ರನ್​​ ಗಳಿಸುವ ಮೂಲಕ ರಾಯಲ್ಸ್​ಗೆ ಗೆಲುವು ತಂದುಕೊಟ್ಟರು.

ರಾಜಸ್ಥಾನ್​ ರಾಯಲ್ಸ್​ ಹಾಗೂ ಪಂಜಾಬ್​
ರಾಜಸ್ಥಾನ್​ ರಾಯಲ್ಸ್​ ಹಾಗೂ ಪಂಜಾಬ್​
author img

By

Published : Sep 28, 2020, 6:42 PM IST

ಶಾರ್ಜಾ: ಒಂದೇ ಓವರ್​ನಲ್ಲಿ 5 ಸಿಕ್ಸರ್​ ಸಿಡಿಸಿ ಪಂದ್ಯದ ಗತಿಯನ್ನೇ ಬದಲಿಸಿದ ರಾಜಸ್ಥಾನ್​ ರಾಯಲ್ಸ್ ತಂಡದ ಆಲ್​ರೌಂಡರ್, ತಮ್ಮ ಸ್ಫೋಟಕ ಬ್ಯಾಟಿಂಗ್ ಹಿಂದಿನ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ.

ಮೊದಲ 23 ಎಸೆತಗಳಲ್ಲಿ ಕೇವಲ 17 ರನ್​ಗಳಿಸಿದ್ದ ತೆವಾಟಿಯಾ ರಾಜಸ್ಥಾನ ತಂಡದ ಸೋಲಿಗೆ ನೇರ ಕಾರಣವಾಗಹುದು ಎಂದು ಎಲ್ಲರ ಅಭಿಪ್ರಾಯವಾಗಿತ್ತು. ಆದರೆ, ಅವರು ಇನ್ನಿಂಗ್ಸ್​ನ 18ನೇ ಓವರ್​ನಲ್ಲಿ 5 ಸಿಕ್ಸರ್​ ಸಿಡಿಸಿ ಪಂದ್ಯದ ಗತಿಯನ್ನೇ ಬದಲಿಸಿದರು. ತೆವಾಟಿಯಾ ಕೊನೆಯ 8 ಎಸೆತಗಳಲ್ಲಿ 7 ಸಿಕ್ಸರ್​ ಸಹಿತ 36 ರನ್​ ​ ಗಳಿಸುವ ಮೂಲಕ ರಾಯಲ್ಸ್​ಗೆ ಗೆಲುವು ತಂದುಕೊಟ್ಟರು.

ಅಲ್ಲದೇ ಕ್ರಿಸ್​ ಗೇಲ್ ನಂತರ ಐಪಿಎಲ್​ನಲ್ಲಿ ಒಂದೇ ಓವರ್​ನಲ್ಲಿ 5 ಸಿಕ್ಸರ್​ ಸಿಡಿಸಿದ ಬ್ಯಾಟ್ಸ್​ಮನ್ ಎಂಬ ದಾಖಲೆಗೆ ಪಾತ್ರರಾದರು. ಅವರು ಈ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನಕ್ಕೆ ತಂಡ ಹಾಗೂ ನಾಯಕ ಇಟ್ಟಿದ್ದ ನಂಬಿಕೆಯೇ ಕಾರಣ ಎಂದಿದ್ದಾರೆ.

ನಾನು ನೆಟ್​ನಲ್ಲಿ ಚೆನ್ನಾಗಿ ಚೆಂಡನ್ನು ಬಾರಿಸುವುದನ್ನ ನೋಡಿದ್ದ ಮ್ಯಾನೇಜ್​ಮೆಂಟ್ ಹಾಗೂ ನಾಯಕ ಸ್ಮಿತ್​ ಅಪಾರ ನಂಬಿಕೆಯಿಟ್ಟಿತ್ತು. ಆ ಪರಿಶುದ್ಧ ನಂಬಿಕೆಯನ್ನು ಉಳಿಸಿಕೊಳ್ಳುವ ಮನೋಬಲವೇ ಕಿಂಗ್ಸ್​ ಇಲೆವೆನ್ ಪಂಜಾಬ್ ವಿರುದ್ಧ ನನ್ನ ಪ್ರದರ್ಶನಕ್ಕೆ ಕಾರಣವಾಯಿತು ಎಂದು ತೆವಾಟಿಯಾ ಹೇಳಿದ್ದಾರೆ.

ನನ್ನನ್ನು ಅವರೆಲ್ಲರೂ(ಮ್ಯಾನೇಜ್ ಮೆಂಟ್ ಹಾಗೂ ಸ್ಮಿತ್) ಗೇಮ್​ಚೇಂಜರ್ ಎಂದು ಕರೆದಿದ್ದರು. ಇಡೀ ತಂಡವೇ ನನ್ನ ಮೇಲೆ ಸಾಕಷ್ಟು ನಂಬಿಕೆಯಿಟ್ಟಿತ್ತು. ಹಾಗಾಗಿ ಅದನ್ನು ಉಳಿಸಿಕೊಳ್ಳಬೇಕಾದದ್ದು ನನ್ನ ಕರ್ತವ್ಯವಾಗಿತ್ತು. ತಂಡ ಹಾಗೂ ನಾಯಕನ ಬೆಂಬಲ ಸಿಕ್ಕಿದರೆ ನಿಮಗೆ ಅರ್ಧ ಯಶಸ್ಸು ಸಿಕ್ಕಿದಂತಾಗುತ್ತದೆ. ಸ್ಮಿತ್​ ಅವರಂತಹ ನಾಯಕನಿದ್ದರೆ ಅರ್ಧ ಕೆಲಸ ಆದಂತೆಯೇ . ನಾನು ಇಂತಹ ತಂಡದಲ್ಲಿ ಭಾಗವಾಗಿರುವುದಕ್ಕೆ ಹೆಮ್ಮೆ ಪಡುತ್ತೇನೆ ಎಂದು ರಾಹುಲ್ ತೆವಾಟಿಯಾ ತಿಳಿಸಿದ್ದಾರೆ.

ಭಾನುವಾರದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ್ದ ಕಿಂಗ್ಸ್​ ಇಲೆವೆನ್ ಪಂಜಾಬ್​ ತಂಡ 20 ಓವರ್​ಗಳಲ್ಲಿ 2 ವಿಕೆಟ್​ ನಷ್ಟಕ್ಕೆ 223 ರನ್​ಗಳಿಸಿತ್ತು, ಅಗರ್​ವಾಲ್ 106 ಹಾಗೂ ರಾಹುಲ್ 69 ರನ್​ಗಳಿಸಿದ್ದರು. 224 ರನ್​ಗಳ ಬೃಹತ್ ಮೊತ್ತ ಬೆನ್ನಟ್ಟಿದ್ದ ರಾಜಸ್ಥಾನ ತಂಡ ನಾಯಕ ಸ್ಮಿತ್ 50, ಸಾಮ್ಸನ್​ 85 ಹಾಗೂ ತೆವಾಟಿಯ 53 ರನ್​ಗಳ ನೆರವಿನಿಂದ ಇನ್ನು ಮೂರು ಎಸೆತಗಳಿರುವಂತೆ ದಾಖಲೆಯ ಮೊತ್ತವನ್ನು ಬೆನ್ನಟ್ಟಿ ಜಯ ಸಾಧಿಸಿತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.