ETV Bharat / sports

ಡೆಲ್ಲಿ ವಿರುದ್ಧ ಮುಂಬೈಗೆ ಜಯ: ಪಂದ್ಯದ ಬಳಿಕ ರೋಹಿತ್​ ಶರ್ಮಾ ಹೇಳಿದ್ದೇನು? - ಇದು ನಮಗೆ ಪರಿಪೂರ್ಣ ದಿನ ಎಂದು ನಾಯಕ ರೋಹಿತ್ ಶರ್ಮಾ

ಹಾಲಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್​​ ತಂಡ ಭಾನುವಾರ ಡೆಲ್ಲಿ ಕ್ಯಾಪಿಟಲ್ಸ್​ ವಿರುದ್ಧ ಜಯ ಗಳಿಸಿದ್ದು, ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಇದರಿಂದ ಸಂತೋಷಗೊಂಡಿರುವ ನಾಯಕ ರೋಹಿತ್ ಶರ್ಮಾ, ತಮ್ಮ ತಂಡಕ್ಕೆ ಇದು "ಸರಿಯಾದ ದಿನ" ಎಂದಿದ್ದಾರೆ.

ನಾಯಕ ರೋಹಿತ್ ಶರ್ಮಾ
ನಾಯಕ ರೋಹಿತ್ ಶರ್ಮಾ
author img

By

Published : Oct 12, 2020, 8:23 AM IST

ಅಬುಧಾಬಿ: ಡೆಲ್ಲಿ ಕ್ಯಾಪಿಟಲ್ಸ್ ತಂಡದ ವಿರುದ್ಧ ಜಯ ಗಳಿಸಿರುವ ಮುಂಬೈ ಇಂಡಿಯನ್ಸ್​​, ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪಾಯಿಂಟ್ ಟೇಬಲ್‌ನಲ್ಲಿ ಅಗ್ರ ಸ್ಥಾನಕ್ಕೆ ಏರಿದೆ. ಇದರಿಂದ ಉಲ್ಲಾಸಗೊಂಡಿರುವ ನಾಯಕ ರೋಹಿತ್ ಶರ್ಮಾ ತಮ್ಮ ತಂಡಕ್ಕೆ ಇದು "ಸರಿಯಾದ ದಿನ" ಎಂದಿದ್ದಾರೆ.

ಈ ಪಂದ್ಯದಲ್ಲಿ ಕ್ವಿಂಟನ್ ಡಿ ಕಾಕ್ ಮತ್ತು ಸೂರ್ಯಕುಮಾರ್ ಯಾದವ್ ಅರ್ಧಶತಕ ಗಳಿಸಿದ್ದಾರೆ. ಡಿ ಕಾಕ್‌ 36 ಎಸೆತಗಳಲ್ಲಿ 3 ಸಿಕ್ಸರ್,‌ 4 ಬೌಂಡರಿ ಸಹಿತ 53 ರನ್‌ ಗಳಿಸಿದರೆ, ಯಾದವ್‌ 32 ಎಸೆತಗಳಲ್ಲಿ 6 ಬೌಂಡರಿ, 2 ಸಿಕ್ಸರ್‌ ಸಹಿತ 53 ರನ್‌ ಬಾರಿಸುವ ಮೂಲಕ ತಂಡವನ್ನು ಜಯದತ್ತ ಕೊಂಡೊಯ್ದರು.

ನಾಯಕ ರೋಹಿತ್ ಶರ್ಮಾ
ನಾಯಕ ರೋಹಿತ್ ಶರ್ಮಾ

"ನಾವು ಈಗ ಆಡಿರುವ ಆಟ ನಮಗೆ ಸಾಕಷ್ಟು ಆತ್ಮವಿಶ್ವಾಸವನ್ನು ನೀಡಿದೆ. ನಾವು ಇದೇ ರೀತಿ ಮುಂದೆಯೂ ಆಡಬೇಕಾಗಿರುವುದು ಬಹಳ ಮುಖ್ಯವಾಗಿದೆ. ಈ ದಿನ ನಮಗೆ ಒಂದು ಸರಿಯಾದ ದಿನವಾಗಿದೆ. ನಾವು ಅಂಕ ಪಟ್ಟಿಯಲ್ಲಿ ಪ್ರಥಮ ಸ್ಥಾನಕ್ಕೇರಿರುವುದು ಸಂತೋಷ ತಂದಿದೆ" ಎಂದು ಪಂದ್ಯದ ನಂತರ ಶರ್ಮಾ ಹೇಳಿದ್ದಾರೆ.

"ನಾವು ಎಲ್ಲಾ ರೀತಿಯಲ್ಲೂ ಸರಿಯಾಗಿ ಆಡಿದ್ದೇವೆ. ಆದರೆ ಇನ್ನೂ ಕೆಲವು ವಿಷಯಗಳಲ್ಲಿ ಸುಧಾರಿಸಬೇಕಿದೆ. ನಾವು ಬೌಲಿಂಗ್​ನಲ್ಲಿ ಉತ್ತಮವಾಗಿದ್ದೇವೆ. ಆದ್ರೆ ಬ್ಯಾಟಿಂಗ್​ನಲ್ಲಿ ಸುಧಾರಿಸಬೇಕಿದೆ. ನಮಗೆ ಒಬ್ಬ ಸೆಟ್​​ ಬ್ಯಾಟ್ಸ್​ಮನ್​ ಅಗತ್ಯವಿದೆ. ಕೆಲವು ಸೆಟ್ ಬ್ಯಾಟ್ಸ್‌ಮನ್‌ಗಳು ಇಂದು ಹೊರಬಂದರು. ಆದರೆ ನಾನು ಅವರನ್ನು ಬೆಟ್ಟು ಮಾಡಿ ತೋರಿಸುವುದಿಲ್ಲ" ಎಂದು ಶರ್ಮಾ ಹೇಳಿದ್ದಾರೆ.

ಮುಂಬೈ ಇಂಡಿಯನ್ಸ್ ಏಳು ಪಂದ್ಯಗಳನ್ನು ಆಡಿದ್ದು, 10 ಅಂಕಗಳನ್ನು ಪಡೆದಿದೆ. ಅಕ್ಟೋಬರ್ 16ರಂದು ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಆಡಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.