ಅಬುಧಾಬಿ: ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸೋತು ಫೈನಲ್ ತಲುಪುವುದಕ್ಕೆ ವಿಫಲವಾಗಲು ಫೀಲ್ಡಿಂಗ್ನಲ್ಲಿ ಆಟಗಾರರು ತೋರಿದ ಕೆಟ್ಟ ಪ್ರದರ್ಶನವೇ ಕಾರಣ ಎಂದು ಸನ್ರೈಸರ್ಸ್ ಹೈದರಾಬಾದ್ ತಂಡದ ನಾಯಕ ಡೇವಿಡ್ ವಾರ್ನರ್ ಹೇಳಿದ್ದಾರೆ.
ಭಾನುವಾರ ನಡೆದ ಪಂದ್ಯದಲ್ಲಿ ನಾವು ಬ್ಯಾಟಿಂಗ್ ಮತ್ತು ಬೌಲಿಂಗ್ನಲ್ಲಿ ಉತ್ತಮ ಪ್ರದರ್ಶನ ತೋರಿದ್ದೆವು. ಆದರೆ ಫೀಲ್ಡಿಂಗ್ ತುಂಬಾ ಕಳಪೆಯಾಗಿತ್ತು ಎಂದು ಅವರು ಹೇಳಿದ್ದಾರೆ.
" ಟೂರ್ನಿ ಆರಂಭದಲ್ಲಿ ನಮಗೆ ಯಾರೂ ಅವಕಾಶ ನೀಡಲಿಲ್ಲ. ಎಲ್ಲರೂ ಬಿಗ್ 3 ಗಳಾದ ಮುಂಬೈ ಆರ್ಸಿಬಿ ಹಾಗೂ ಡೆಲ್ಲಿ ಬಗ್ಗೆ ಮಾತನಾಡುತ್ತಿದ್ದರು. ಆದರೆ ಟೂರ್ನಿಯಲ್ಲಿ ಕಮ್ಬ್ಯಾಕ್ ಮಾಡಿದ ರೀತಿ ನನಗೆ ಹೆಮ್ಮೆಯಿದೆ. ನಟರಾಜನ್, ರಶೀದ್, ಮನೀಶ್ ಪಾಂಡೆ ಟೂರ್ನಿಯಲ್ಲಿ ಸಾಕಷ್ಟು ಸಕಾರಾತ್ಮಕವಾಗಿ ಆಡಿದ್ದಾರೆ".
ಟೂರ್ನಮೆಂಟ್ನ ಅರ್ಧದಷ್ಟು ಭಾಗ ನಾವು ಆಟವನ್ನು ಹೇಗೆ ಇಷ್ಟುಪಡುತ್ತೇವೆ ಎಂಬುದರ ಮೇಲೆ ನಿಂತಿರುತ್ತದೆ. ನೀವು ಕ್ಯಾಚ್ಗಳನ್ನು ಕೈಚೆಲ್ಲುವುದರಿಂದ ಟೂರ್ನಮೆಂಟ್ ಗೆಲ್ಲಲು ಸಾಧ್ಯವಾಗುವುದಿಲ್ಲ. ನನ್ನ ಪ್ರಕಾರ ಬ್ಯಾಟ್ ಮತ್ತು ಬೌಲಿಂಗ್ನಲ್ಲಿ ಕೆಟ್ಟ ಆರಂಭದ ಹೊರತಾಗಿಯೂ ಸುಧಾರಣೆ ಕಂಡು ಬಂದಿತು. ಆದರೆ, ಫೀಲ್ಡಿಂಗ್ನಲ್ಲಿನ ನಮ್ಮ ವರ್ತನೆಯೇ ನಮ್ಮನ್ನು ಮಂಡಿಯೂರುವಂತೆ ಮಾಡಿತು ಎಂದು ವಾರ್ನರ್ ಬೇಸರ ವ್ಯಕ್ತಪಡಿಸಿದರು.
ಆದರೆ, ಟೂರ್ನಿಯಲ್ಲಿ ಗಾಯದ ಕಾರಣ ಪ್ರಮುಖ ಆಟಗಾರರನ್ನು ಕಳೆದುಕೊಂಡರೂ, ನಮಗೆ ಲಭ್ಯವಾದ ಆಟಗಾರರಿಂದಲೇ ಈ ಹಂತಕ್ಕೆ ಬಂದಿದ್ದು ನನಗೆ ಹೆಮ್ಮೆಯನ್ನಿಸುತ್ತಿದೆ ಎಂದು ವಾರ್ನರ್ ತಿಳಿಸಿದ್ದಾರೆ.
ನಿನ್ನೆಯ ಪಂದ್ಯದಲ್ಲಿ 190 ರನ್ಗಳನ್ನು ಬೆನ್ನಟ್ಟಿ ಮೊದಲ 3 ವಿಕೆಟ್ಗಳನ್ನು ಬೇಗ ಕಳೆದುಕೊಂಡರೂ ವಿಲಿಯಮ್ಸನ್ 67 ಹಾಗೂ ಸಮದ್ 33 ರನ್ಗಳಿಸಿ ಪಂದ್ಯವನ್ನು ತೀರ ಹತ್ತಿರ ತಂದಿದ್ದರು. ಆದರೆ ನಿರ್ಣಾಯಕ ಹಂತದಲ್ಲಿ ಇಬ್ಬರು ಔಟಾಗಿದ್ದರಿಂದ ಸನ್ರೈಸರ್ಸ್ ಸೋಲು ಕಾಣಬೇಕಾಯಿತು ಎಂದು ಬೇಸರ ವ್ಯಕ್ತಪಡಿಸಿದರು.