ETV Bharat / sports

ಎಬಿಡಿ ಫಾರ್ಮ್​ಲಿದ್ದರೆ ಎಷ್ಟೇ ದೊಡ್ಡ ಮೊತ್ತದ ಟಾರ್ಗೆಟ್​ ಕೂಡ ಲೆಕ್ಕಕ್ಕಿಲ್ಲ: ಕ್ರಿಸ್ ಮೋರಿಸ್​ - ಐಪಿಎಲ್ 2020 ಲೇಟೆಸ್ಟ್​ ನ್ಯೂಸ್​

ರಾಜಸ್ಥಾನ್ ರಾಯಲ್ಸ್​ ವಿರುದ್ಧ 178 ರನ್​ಗಳ ಟಾರ್ಗೆಟ್ ಬೆನ್ನಟ್ಟಿ ಆರ್​ಸಿಬಿ ಕೊನೆಯ 2 ಓವರ್​ಗಳಲ್ಲಿ 35 ರನ್​ಗಳಿಸಬೇಕಿತ್ತು. ಎಬಿ ಡಿ ವಿಲಿಯರ್ಸ್​ ಅಬ್ಬರದ ಬ್ಯಾಟಿಂಗ್ ಪದರ್ಶನ ತೋರಿ ಕೇವಲ 22 ಎಸೆತಗಳಲ್ಲಿ 55 ರನ್​ ಚಚ್ಚುವ ಮೂಲಕ ಆರ್​ಸಿಬಿಗೆ ಟೂರ್ನಿಯಲ್ಲಿ 6ನೇ ಜಯ ತಂದುಕೊಟ್ಟರು. ಈ ಮೂಲಕ ಟೂರ್ನಿಯಲ್ಲಿ 3ನೇ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.

ಕ್ರಿಸ್ ಮೋರಿಸ್​
ಕ್ರಿಸ್ ಮೋರಿಸ್​
author img

By

Published : Oct 18, 2020, 5:56 PM IST

ದುಬೈ: ರಾಜಸ್ಥಾನ್ ರಾಯಲ್ಸ್​ ವಿರುದ್ಧ ಆರ್​ಸಿಬಿ 7 ವಿಕೆಟ್​ಗಳ ಜಯ ಸಾಧಿಸಿದೆ. ಈ ಜಯಕ್ಕೆ ಕಾರಣರಾದ ಎಬಿ ಡಿ ವಿಲಿಯರ್ಸ್​ ಕುರಿತು ಮೆಚ್ಚುಗೆ ವ್ಯಕ್ತಪಡಿಸಿರುವ ಆರ್​ಸಿಬಿ ಆಲ್​ರೌಂಡರ್​ ಕ್ರಿಸ್​ ಮೋರಿಸ್,​ ಎಬಿಡಿ ಈ ರೀತಿಯ ಪ್ರಚಂಡ ಫಾರ್ಮ್​ಲಿದ್ದರೆ ಯಾವುದೇ ಗುರಿಯಾದರು ಎದುರಾಳಿಗೆ ಸುರಕ್ಷಿತ ಎನಿಸುವುದಿಲ್ಲಎಂದಿದ್ದಾರೆ.

ರಾಜಸ್ಥಾನ್ ರಾಯಲ್ಸ್​ ವಿರುದ್ಧ 178 ರನ್​ಗಳ ಟಾರ್ಗೆಟ್ ಬೆನ್ನಟ್ಟಿ ಆರ್​ಸಿಬಿ ಕೊನೆಯ 2 ಓವರ್​ಗಳಲ್ಲಿ 35 ರನ್​ಗಳಿಸಬೇಕಿತ್ತು. ಎಬಿ ಡಿ ವಿಲಿಯರ್ಸ್​ ಅಬ್ಬರದ ಬ್ಯಾಟಿಂಗ್ ಪದರ್ಶನ ತೋರಿ ಕೇವಲ 22 ಎಸೆತಗಳಲ್ಲಿ 55 ರನ್​ ಚಚ್ಚುವ ಮೂಲಕ ಆರ್​ಸಿಬಿಗೆ ಟೂರ್ನಿಯಲ್ಲಿ 6ನೇ ಜಯ ತಂದುಕೊಟ್ಟರು. ಈ ಮೂಲಕ ಟೂರ್ನಿಯಲ್ಲಿ 3ನೇ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.

ಎಬಿ ಡಿ ವಿಲಿಯರ್ಸ್
ಎಬಿ ಡಿ ವಿಲಿಯರ್ಸ್

" ಎಬಿಡಿ ಇಂತಹ ಮನಸ್ಥಿತಿಯಲ್ಲಿದ್ದರೆ, ಆ ಮನುಷ್ಯನಿಗೆ ಬೌಲಿಂಗ್ ಮಾಡುವುದು ಅತ್ಯಂತ ಕಷ್ಟದ ಕೆಲಸ, ಅವರ ಈ ಸ್ಥಿರ ಪ್ರದರ್ಶನವನ್ನು ನೋಡುತ್ತಿದ್ದರೆ, ಅವರ ಎದುರು ಯಾವುದೇ ಮೊತ್ತವು ಸುರಕ್ಷಿತವಾಗಿರುವುದಿಲ್ಲ. ನಾನು ಇದುವರೆಗ ಸ್ಪರ್ಧಾತ್ಮಕ ಕ್ರಿಕೆಟ್​ನಲ್ಲಿ ಅವರನ್ನು ಔಟ್​ ಮಾಡಲಾಗಿಲ್ಲ. ಆದರೆ ನೆಟ್​ನಲ್ಲಿ ಅವರ ವಿಕೆಟ್ ಪಡೆದರೂ ಸಹಾ ತುಂಬಾ ಸಂಭ್ರಮಿಸುತ್ತೇನೆ. ಆದರೆ ನಾನು ಅವರಿಗೆ ಬೌಲಿಂಗ್ ಮಾಡಬೇಕೆಂದರೆ ಯಾವುದೇ ಯೋಜನೆಯೊಂದಿಗೆ ಹೋಗುವುದಿಲ್ಲ" ಎಂದು ಯುಜವೇಂದ್ರ ಚಹಾಲ್ ಜೊತೆಗಿನ ಸಂವಾದದ ವೇಳೆ ಹೇಳಿಕೊಂಡಿದ್ದಾರೆ.

ಪ್ರಸ್ತುತ ಆರ್​ಸಿಬಿ ಆಡಿರುವ 8 ಪಂದ್ಯಗಳಿಂದ 6 ಗೆಲುವು ಹಾಗೂ 2 ಸೋಲು ಕಂಡಿದ್ದು 12 ಅಂಕಗಳೊಡನೆ 3ನೇ ಸ್ಥಾನದಲ್ಲಿದೆ. ಅಬುಧಾಬಿಯಲ್ಲಿ ಕೋಲ್ಕತ್ತಾ ನೈಟ್​ ರೈಡರ್ಸ್ ವಿರುದ್ಧ ಅಕ್ಟೋಬರ್ 21 ರಂದು ತನ್ನ ಮುಂದಿನ ಪಂದ್ಯವನ್ನಾಡಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.