ETV Bharat / sports

ಐಪಿಎಲ್​ ನಡೆಯಲು ಸಾಧ್ಯವಾದ ಎಲ್ಲ ಸಿಬ್ಬಂದಿಗೆ ಶಹಬ್ಬಾಸ್​ಗಿರಿ ನೀಡಿದ ಧೋನಿ... ವಿಡಿಯೋ - ಸಿಎಸ್​ಕೆ ತಂಡ

ಕೊರೊನಾ ವೈರಸ್​ ಸಂಕಷ್ಟದ ನಡುವೆ ಕೂಡ 13ನೇ ಆವೃತ್ತಿ ಇಂಡಿಯನ್​ ಪ್ರೀಮಿಯರ್​ ಲೀಗ್​ ನಡೆಸಲಾಗುತ್ತಿದ್ದು, ಟೂರ್ನಿ ನಡೆಯಲು ಸಾಧ್ಯವಾಗಿರುವ ಎಲ್ಲ ಸಿಬ್ಬಂದಿಗಳಿಗೂ ಧೋನಿ ಅಭಿನಂದನೆ ಸಲ್ಲಿಕೆ ಮಾಡಿದ್ದಾರೆ.

MS dhoni
MS dhoni
author img

By

Published : Sep 20, 2020, 4:08 AM IST

ಅಬುಧಾಬಿ: ಅನೇಕ ತೊಂದರೆ, ಕೊರೊನಾ ವೈರಸ್​ ಸಂಕಷ್ಟದ ನಡುವೆ ಪ್ರಸಕ್ತ ಸಾಲಿನ ಇಂಡಿಯನ್​ ಪ್ರೀಮಿಯರ್​ ಲೀಗ್​ ದುಬೈನಲ್ಲಿ ಆರಂಭಗೊಂಡಿದೆ. ಮೊದಲ ಪಂದ್ಯ ಯಶಸ್ವಿಯಾಗಿ ಮುಕ್ತಾಯಗೊಂಡಿದ್ದು, ಆರಂಭಿಕ ಪಂದ್ಯದಲ್ಲೇ ಮುಂಬೈ ವಿರುದ್ಧ ಧೋನಿ ಪಡೆ ಗೆಲುವು ದಾಖಲು ಮಾಡಿದೆ.

ಚೆನ್ನೈ ಸೂಪರ್​ ಕಿಂಗ್ಸ್​ ತಂಡ ಗೆಲುವು ದಾಖಲು ಮಾಡುತ್ತಿದ್ದಂತೆ ಮಾತನಾಡಿರುವ ಧೋನಿ ಎಲ್ಲ ಸಿಬ್ಬಂದಿಗೆ ಶಹಬ್ಬಾಸ್​ಗಿರಿ ನೀಡಿದ್ದಾರೆ. ಐಪಿಎಲ್​​​ ನಡೆಯಲು ಇದರಲ್ಲಿ ಭಾಗಿಯಾಗಿರುವ ಪ್ರತಿಯೊಬ್ಬ ಸಿಬ್ಬಂದಿಗೆ ನಾನು ಧನ್ಯವಾದ ಹೇಳುತ್ತೇನೆ. ಅವರು ಅದ್ಭುತ ಕೆಲಸ ಮಾಡಿದ್ದಾರೆ ಎಂದಿದ್ದಾರೆ.

ಸಿಎಸ್​​ಕೆ ತಂಡದ ಕ್ಯಾಪ್ಟನ್​ ಆಗಿ 100ನೇ ಪಂದ್ಯ ಗೆದ್ದ ದಾಖಲೆ ನಿರ್ಮಿಸಿದ ಧೋನಿ!

ಕೆಲವೊಂದು ಸಂದರ್ಭಗಳಲ್ಲಿ ನಾವು ಸಿಬ್ಬಂದಿಗಳನ್ನ ಸುಲಭವಾಗಿ ವಿಮರ್ಶೆ ಮಾಡುತ್ತೇವೆ. ಆದರೆ ಇಂತಹ ಪರಿಸ್ಥಿತಿಯಲ್ಲಿ ಅವರು ನಿಜಕ್ಕೂ ಅದ್ಭುತ ಕೆಲಸ ಮಾಡಿದ್ದಾರೆ. ಅನೇಕ ತಿಂಗಳ ಬಳಿಕ ನಾವು ಕ್ರಿಕೆಟ್ ಆಡಲು ಇಲ್ಲಿಗೆ ಆಗಮಿಸಿದ್ದೇವೆ. ಅಭ್ಯಾಸ ಮಾಡದೇ ಮೈದಾನಕ್ಕಿಳಿಯಲು ಸಾಧ್ಯವಿಲ್ಲ. ಅದಕ್ಕಾಗಿ ಎಲ್ಲ ರೀತಿಯ ಸೌಲಭ್ಯ, ವ್ಯವಸ್ಥೆ ಒದಗಿಸಿಕೊಡಲಾಗಿದೆ ಎಂದು ಧೋನಿ ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.