ದುಬೈ: ಇಂಡಿಯನ್ ಪ್ರೀಮಿಯರ್ ಲೀಗ್ನ ಇಂದಿನ ಎರಡನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಪಂಜಾಬ್ ತಂಡ ಮುಖಾಮುಖಿಯಾಗಲಿದ್ದು, ಫ್ಲೇ-ಹಂತಕ್ಕೆ ತಲುಪಬೇಕಾದರೆ ಕೆಎಲ್ ಪಡೆ ಇಂದಿನ ಪಂದ್ಯದಲ್ಲಿ ಗೆಲುವು ಸಾಧಿಸಬೇಕಾದ ಅನಿವಾರ್ಯತೆಯಲ್ಲಿದೆ.
ಪಾಯಿಂಟ್ ಪಟ್ಟಿಯಲ್ಲಿ ಮುಂಬೈ ಇಂಡಿಯನ್ಸ್ ಎರಡನೇ ಸ್ಥಾನದಲ್ಲಿದ್ದರೆ, ಪಂಜಾಬ್ ಕೊನೆಯ ಸ್ಥಾನದಲ್ಲಿದೆ. ಬ್ಯಾಟಿಂಗ್ ವಿಭಾಗದಲ್ಲಿ ಬಲಿಷ್ಠವಾಗಿರುವ ಪಂಜಾಬ್ ತಂಡ ಕೆಲವೊಂದು ಪಂದ್ಯಗಳಲ್ಲಿ ತಾನು ಮಾಡಿರುವ ಸಣ್ಣ - ಪುಟ್ಟ ತಪ್ಪುಗಳಿಂದ ಪಂದ್ಯಗಳನ್ನ ಕೈಚೆಲ್ಲಿದೆ. ಜೊತೆಗೆ ಕೆಲಮೊಮ್ಮೆ ಅದೃಷ್ಟ ಕೂಡ ಕೈಕೊಟ್ಟಿರುವುದು ಇದಕ್ಕೆ ಸಾಕ್ಷಿಯಾಗಿದೆ.
ಈ ಹಿಂದಿನ ಆರ್ಸಿಬಿ ವಿರುದ್ಧದ ಪಂದ್ಯದಲ್ಲಿ ಪಂಜಾಬ್ ಕೊನೆ ಓವರ್ನಲ್ಲಿ ಗೆಲುವು ಸಾಧಿಸಿದ್ದು, ಇಂದಿನ ಪಂದ್ಯದಲ್ಲೂ ಅದೇ ಉತ್ಸಾಹದೊಂದಿಗೆ ಕಣಕ್ಕಿಳಿಯಲಿದೆ. ಜತೆಗೆ ತಂಡಕ್ಕೆ ಗೇಲ್ ಕಮ್ಬ್ಯಾಕ್ ಮಾಡಿರುವುದು ಆನೆಬಲ ಬಂದಿದೆ. ಇನ್ನು ಮಯಾಂಕ್ ಅಗರವಾಲ್, ಕೆ.ಎಲ್ ರಾಹುಲ್ ಆರ್ಭಟಿಸುತ್ತಿದ್ದು, ಇಂದಿನ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡುವ ಸಾಧ್ಯತೆ ಇದೆ.
ಮುಂಬೈ ಇಂಡಿಯನ್ಸ್ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಮೊದಲ ಪಂದ್ಯದಲ್ಲಿ ಸೋಲು ಕಾಣುವ ಮೂಲಕ ಅಭಿಯಾನ ಆರಂಭಿಸಿದರೂ, ನಂತರದ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿ ಸದ್ಯ ಅಂಕ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ. ಹಿಂದಿನ ಪಂದ್ಯದಲ್ಲಿ ಕ್ವಿಂಟನ್ ಡಿಕಾಕ್, ರೋಹಿತ್ ಶರ್ಮಾ ಅಬ್ಬರಿಸಿದ್ದು, ಮಧ್ಯಮ ಕ್ರಮಾಂಕದಲ್ಲಿ ಹಾರ್ದಿಕ್, ಕಿರನ್ ತಂಡಕ್ಕೆ ರನ್ ಮಳೆ ಹರಿಸಲಿದ್ದಾರೆ.
ಸಂಭವನೀಯ ತಂಡದ ಪ್ಲೇಯರ್ಸ್
ಮುಂಬೈ ಇಂಡಿಯನ್ಸ್: ಕ್ವಿಂಟನ್ ಡಿಕಾಕ್(ವಿ.ಕೀ), ರೋಹಿತ್ ಶರ್ಮಾ(ಕ್ಯಾಪ್ಟನ್),ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ, ಕಿರಣ್ ಪೋಲಾರ್ಡ್, ಕೃನಾಲ್ ಪಾಂಡ್ಯ, ನಾಥನ್ ಕೌಲ್ಟರ್ ನೇಲ್, ಬೋಲ್ಟ್, ಜಸ್ಪ್ರೀತ್ ಬುಮ್ರಾ
ಕಿಂಗ್ಸ್ ಇಲೆವೆನ್ ಪಂಜಾಬ್: ಕೆ.ಎಲ್ ರಾಹುಲ್(ವಿ,ಕೀ/ಕ್ಯಾಪ್ಟನ್), ಮಯಾಂಕ್ ಅಗರವಾಲ್, ಕ್ರಿಸ್ ಗೇಲ್, ನಿಕೊಲಸ್ ಪೂರನ್, ಮ್ಯಾಕ್ಸ್ವೆಲ್, ದೀಪಕ್ ಹೂಡಾ, ಕೆ.ಗೌತಮ್, ಕ್ರಿಸ್ ಜೋರ್ಡನ್, ರವಿ ಬಿಸ್ನೋಯ್, ಮೊಹಮ್ಮದ್ ಶಮಿ, ಅರ್ಷದೀಪ್ ಸಿಂಗ್