ETV Bharat / sports

ವರುಣ್ ಚಕ್ರವರ್ತಿ 5 ವಿಕೆಟ್​: ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 59 ರನ್​ಗಳ ಜಯ ಸಾಧಿಸಿದ ಕೆಕೆಆರ್​

author img

By

Published : Oct 24, 2020, 7:46 PM IST

ಮೊದಲು ಬ್ಯಾಟಿಂಗ್ ನಡೆಸಿದ ಕೆಕೆಆರ್ ನಿತೀಶ್ ರಾಣಾ(81) ಹಾಗೂ ಸುನೀಲ್ ನರೈನ್(64) ಅವರ ಭರ್ಜರಿ ಅರ್ಧಶತಕದ ನೆರವಿನಿಂದ 20 ಓವರ್​ಗಳಲ್ಲಿ 6 ವಿಕೆಟ್ ಕಳೆದುಕೊಂಡು 194 ರನ್​ಗಳಿಸಿತ್ತು. ಇದಕ್ಕುತ್ತರವಾಗಿ ಡೆಲ್ಲಿ ತಂಡ 20 ಓವರ್​ಗಳಲ್ಲಿ 8 ವಿಕೆಟ್ ಕಳೆದುಕೊಂಡು133 ರನ್​ಗಳಿಸಿ 59 ರನ್​ಗಳ ಹೀನಾಯ ಸೋಲು ಕಂಡಿತು.

ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 59 ರನ್​ಗಳ ಜಯ ಸಾಧಿಸಿದ ಕೆಕೆಆರ್​
ವರುಣ್ ಚಕ್ರವರ್ತಿ 5 ವಿಕೆಟ್

ಅಬುಧಾಬಿ: ನಿತೀಶ್ ರಾಣಾ ಅಬ್ಬರದ ಬ್ಯಾಟಿಂಗ್ ಹಾಗೂ ವರುಣ್ ಚಕ್ರವರ್ತಿ, ಕಮ್ಮಿನ್ಸ್​ ಅವರ ಅದ್ಭುತ ಬೌಲಿಂಗ್ ನೆರವಿನಿಂದ ಕೋಲ್ಕತ್ತಾ ನೈಟ್​ ರೈಡರ್ಸ್ ತಂಡ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು 59 ರನ್​ಗಳ ಅಂತರದಿಂದ ಮಣಿಸಿದೆ.

ಮೊದಲು ಬ್ಯಾಟಿಂಗ್ ನಡೆಸಿದ ಕೆಕೆಆರ್ ನಿತೀಶ್ ರಾಣಾ(81) ಹಾಗೂ ಸುನೀಲ್ ನರೈನ್(64) ಅವರ ಭರ್ಜರಿ ಅರ್ಧಶತಕದ ನೆರವಿನಿಂದ 20 ಓವರ್​ಗಳಲ್ಲಿ 6 ವಿಕೆಟ್ ಕಳೆದುಕೊಂಡು 194 ರನ್​ಗಳಿಸಿತ್ತು. ಇದಕ್ಕುತ್ತರವಾಗಿ ಡೆಲ್ಲಿ ತಂಡ 20 ಓವರ್​ಗಳಲ್ಲಿ 8 ವಿಕೆಟ್ ಕಳೆದುಕೊಂಡು133 ರನ್​ಗಳಿಸಿ 59 ರನ್​ಗಳ ಹೀನಾಯ ಸೋಲು ಕಂಡಿತು.

195 ರನ್​ಗಳ ಗುರಿ ಪಡೆದ ಡೆಲ್ಲಿ ಕಳಪೆ ಆರಂಭ ಪಡೆಯಿತು. ಅಜಿಂಕ್ಯಾ ರಹಾನೆ ಡಕ್​ ಔಟಾದರೆ, ಕಳೆದೆರಡು ಪಂದ್ಯಗಳಲ್ಲಿ ಶತಕ ಸಿಡಿಸಿದ್ದ ಧವನ್ 6 ರನ್​ಗಳಿಸಿ ಪ್ಯಾಟ್ ಕಮ್ಮಿನ್ಸ್​ಗೆ ವಿಕೆಟ್ ನೀಡಿದರು.

ಆದರೆ 3ನೇ ವಿಕೆಟ್​ಗೆ 63 ರನ್​ಗಳ ಜೊತೆಯಾಟ ನೀಡಿದ ನಾಯಕ ಶ್ರೇಯಸ್​ ಅಯ್ಯರ್ ಹಾಗೂ ಪಂತ್ ಚೇತರಿಕೆ ನೀಡಿದರಾದರು ನಿರ್ಣಾಯಕ ಹಂತದಲ್ಲಿ ಇಬ್ಬರು ವಿಕೆಟ್ ಒಪ್ಪಿಸಿದರು. ನಿಧಾನಗತಿ ಆಟವಾಡಿದ ಪಂತ್ 33 ಎಸೆತಗಳಲ್ಲಿ 27 ರನ್​ಗಳಿಸಿದರು. ನಂತರ ಬಂದ ಹೆಟ್ಮೈರ್ 10 ರನ್​ ಹಾಗೂ 38 ಎಸೆತಗಳಲ್ಲಿ 47 ರನ್​ಗಳಿಸಿದ್ದ ಅಯ್ಯರ್ ಬ್ಯಾಕ್ ಟು​ ಬ್ಯಾಕ್ ಎಸೆತಗಳಲ್ಲಿ ವರುಣ್​ ವಕ್ರವರ್ತಿಗೆ ವಿಕೆಟ್ ಒಪ್ಪಿಸಿದರು.

ನಂತರ ಬಂದಂತಹ ಸ್ಟೋಯ್ನಿಸ್ 6, ಅಕ್ಷರ್ ಪಟೇಲ್ 9, ರಬಾಡ 9 ತುಷಾರ್ ದೇಶಪಾಂಡೆ 1 ರನ್​ಗಳಿಗೆ ಔಟಾದರು. ಅಶ್ವಿನ್ 14 ರನ್​ಗಳಿಸಿ ಔಟಾಗದೆ ಉಳಿದರು.

ಕೋಲ್ಕತ್ತಾ ನೈಟ್ ರೈಡರ್ಸ್ ಪರ ವರುಣ್ ಚಕ್ರವರ್ತಿ 20 ರನ್​ ನೀಡಿ 5 ವಿಕೆಟ್ ಪಡೆದರೆ, ಪ್ಯಾಟ್ ಕಮ್ಮಿನ್ಸ್​ 17 ರನ್​ ನೀಡಿ 3 ವಿಕೆಟ್ ಪಡೆದರು. ಲೂಕಿ ಫರ್ಗ್ಯಷನ್ 1 ವಿಕೆಟ್ ಪಡೆದು ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.