ದುಬೈ: ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ನಾಯಕ ಕನ್ನಡಿಗ ರಾಹುಲ್ ಆರ್ಸಿಬಿ ವಿರುದ್ಧ ಸ್ಫೋಟಕ ಶತಕದೊಂದಿಗೆ ಐಪಿಎಲ್ ಇತಿಹಾಸದಲ್ಲಿ ಗರಿಷ್ಠ ರನ್ ಬಾರಿಸಿದ ಬ್ಯಾಟ್ಸ್ಮನ್ ಎಂಬ ಶ್ರೇಯಕ್ಕೆ ಪಾತ್ರರಾದರು.
69 ಎಸೆತಗಳಲ್ಲಿ 14 ಬೌಂಡರಿ ಹಾಗೂ 7 ಭರ್ಜರಿ ಸಿಕ್ಸರ್ ಸಹಿತ 132 ರನ್ಗಳಿಸಿದರು. ಈ ಮೂಲಕ ಐಪಿಎಲ್ ಇತಿಹಾಸದಲ್ಲಿ ವೈಯಕ್ತಿಕ ಗರಿಷ್ಠ ರನ್ ದಾಖಲಿಸಿ ಬ್ಯಾಟ್ಸ್ಮನ್ ಎನಿಸಿಕೊಂಡರು. ಈ ಹಿಂದೆ ಡೆಲ್ಲಿ ಕ್ಯಾಪಿಟಲ್ ತಂಡದ ರಿಷಭ್ ಪಂತ್ 2018ರಲ್ಲಿ 127 ರನ್ಗಳಿಸಿದ್ದು ಇಲ್ಲಿಯವರೆಗಿನ ವೈಯಕ್ತಿಕ ಗರಿಷ್ಠ ರನ್ ಆಗಿತ್ತು.
-
KL Rahul now has the highest score ever by an Indian in IPL.#Dream11IPL #KXIPvRCB pic.twitter.com/zu8r2kTeWW
— IndianPremierLeague (@IPL) September 24, 2020 " class="align-text-top noRightClick twitterSection" data="
">KL Rahul now has the highest score ever by an Indian in IPL.#Dream11IPL #KXIPvRCB pic.twitter.com/zu8r2kTeWW
— IndianPremierLeague (@IPL) September 24, 2020KL Rahul now has the highest score ever by an Indian in IPL.#Dream11IPL #KXIPvRCB pic.twitter.com/zu8r2kTeWW
— IndianPremierLeague (@IPL) September 24, 2020
ಒಟ್ಟಾರೆ ಐಪಿಎಲ್ನಲ್ಲಿ ವೈಯಕ್ತಿಕ ಗರಿಷ್ಠ ರನ್ ದಾಖಲೆ ವೆಸ್ಟ್ ಇಂಡೀಸ್ನ ಕ್ರಿಸ್ ಗೇಲ್ ಹೆಸರಿನಲ್ಲಿದೆ. ಅವರು 2013ರಲ್ಲಿ ಆರ್ಸಿಬಿ ಪರ ಆಡುವಾಗ ಪುಣೆ ವಾರಿಯರ್ಸ್ ವಿರುದ್ಧ 175 ರನ್ಗಳಿಸಿದ್ದರು. 2ನೇ ಸ್ಥಾನದಲ್ಲಿ ಬ್ರಂಡನ್ ಮೆಕ್ಕಲಮ್ ಇದ್ದು, ಅವರು ಮೊದಲ ಆವೃತ್ತಿಯಲ್ಲಿಯೇ ಆರ್ಸಿಬಿ ವಿರುದ್ಧವೇ 158 ರನ್ಗಳಿಸಿದ್ದರು. 3 ನೇ ಸ್ಥಾನದಲ್ಲಿ ಆರ್ಸಿಬಿಯ ಮತ್ತೊಬ್ಬ ಸ್ಟಾರ್ ಎಬಿಡಿ ವಿಲಿಯರ್ಸ್ 133 ಹಾಗೂ 129 ರನ್ಗಳಿಸು ಮೂಲಕ ಟಾಪ್ 5 ಪಟ್ಟಿಯಲ್ಲಿ ಎರಡು ಬಾರಿ ಕಾನಿಸಿಕೊಂಡಿದ್ದಾರೆ.
ಐಪಿಎಲ್ನ ವೈಯಕ್ತಿಕ ಗರಿಷ್ಠ ರನ್ ಸರದಾರರು
- ಕ್ರಿಸ್ ಗೇಲ್ - 175 *
- ಬ್ರೆಂಡನ್ ಮೆಕಲಮ್ - 158 *
- ಎಬಿ ಡಿ ವಿಲಿಯರ್ಸ್ - 133 *
- ಕೆಎಲ್ ರಾಹುಲ್ - 132 *
- ಎಬಿ ಡಿ ವಿಲಿಯರ್ಸ್ - 129 *
- ಕ್ರಿಸ್ ಗೇಲ್ - 128 *
- ರಿಷಭ್ ಪಂತ್ - 128 *
- ಮುರುಳಿ ವಿಜಯ್ - 127