ಶಾರ್ಜಾ: ಐಪಿಎಲ್ನ 4ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಬ್ಯಾಟ್ಸ್ಮನ್ಗಳು ಚೆನ್ನೈ ಬೌಲರ್ಗಳನ್ನು ಮನ ಬಂದಂತೆ ದಂಡಿಸಿದ್ದು, 20 ಓವರ್ಗಳಲ್ಲಿ ಬರೋಬ್ಬರಿ 216 ರನ್ ಕಲೆ ಹಾಕಿದ್ದಾರೆ.
ಆರಂಭದಿಂದಲೇ ಸ್ಪೋಟಕ ಆಟ ಪ್ರದರ್ಶಿಸಿದ ಸಂಜು ಸಾಮ್ಸನ್ ಕೇವಲ 32 ಎಸೆತಗಳಲ್ಲಿ 9 ಸಿಕ್ಸರ್, ಒಂದು ಬೌಂಡರಿ ಸಹಿತ 74 ರನ್ ಸಿಡಿಸಿದರೆ, ಇವರಿಗೆ ಸಾಥ್ ನೀಡಿದ ನಾಯಕ ಸ್ಟಿವ್ ಸ್ಮಿತ್ 47 ಎಸೆತಗಳಲ್ಲಿ 4 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ 69 ರನ್ಗಳಿಸಿದರು.
ಆದರೆ, 9ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಬಂದ ಜೋಫ್ರಾ ಆರ್ಚರ್ ಕೇವಲ 8 ಎಸೆತಗಳಲ್ಲಿ 27 ರನ್ ಕಲೆ ಹಾಕಿದರು. ಅದರಲ್ಲೂ ಎಂಗಿಡಿ ಎಸೆದ ಕೊನೆಯ ಓವರ್ನಲ್ಲಿ ಟಾಮ್ ಕರನ್ ಜೊತೆ ಸೇರಿ 30 ರನ್ ಚಚ್ಚಿದರು. ಇದರಲ್ಲಿ ಆರ್ಚರ್ 26 ರನ್ಗಳಿಸಿದರೆ, ಕರ್ರನ್ ಒಂದು ರನ್ ಹಾಗೂ 3 ಇತರ ರನ್ ಮೂಲಕ ಬಂದಿತು.
2 ಬಾಲಿಗೆ 4 ಸಿಕ್ಸರ್
ಎಂಗಿಡಿ ಎಸೆದ ಮೊದಲ 3 ಎಸೆತಗಳಲ್ಲೂ ಆರ್ಚರ್ ಸಿಕ್ಸರ್ ಸಿಡಿಸಿದರು. ಆದರೆ, 3 ನೇ ಎಸೆತ ನೋಬಾಲ್ ಆಗಿದ್ದರಿಂದ ಫ್ರೀ ಹಿಟ್ ಎಸೆತದಲ್ಲೂ ಆರ್ಚರ್ ಸಿಕ್ಸರ್ ಸಿಡಿಸುವ ಮೂಲಕ 2 ಎಸೆತಗಳಲ್ಲಿ ಸತತ 4 ಸಿಕ್ಸರ್ ಹೊಡೆದ ದಾಖಲೆಗೆ ಆರ್ಚರ್ ಪಾತ್ರರಾದರೆ, ಕೇವಲ 2 ಎಸೆತಗಳಲ್ಲಿ 4 ಸಿಕ್ಸರ್ ಬಿಟ್ಟುಕೊಟ್ಟ ಕುಖ್ಯಾತಿಗೆ ಎಂಗಿಡಿ ಹೆಸರಾದರು. ಒಟ್ಟಾರೆ ಆ ಓವರ್ನಲ್ಲಿ 30 ರನ್ ಬಿಟ್ಟುಕೊಟ್ಟರು.
ಎಂಗಿಡಿ ಈ ಪಂದ್ಯದದಲ್ಲಿ 4 ಓವರ್ಗಳಲ್ಲಿ ಕೇವಲ 1 ವಿಕೆಟ್ ಪಡೆದುಕೊಂಡು 56 ರನ್ ಬಿಟ್ಟುಕೊಟ್ಟರು. ಅಲ್ಲದೇ ಕೊನೆಯ ಓವರ್ನಲ್ಲಿ 30 ರನ್ ಬಿಟ್ಟುಕೊಟ್ಟ 3ನೇ ಬೌಲರ್ ಆದರು. ಈವರಿಗೂ ಮೊದಲು ಅಶೋಕ್ ದಿಂಡಾ(2017) ಹಾಗೂ ಕ್ರಿಸ್ ಜೋರ್ಡಾನ್(2020)ರಲ್ಲಿ ಕೊನೆಯ ಓವರ್ನಲ್ಲಿ 30 ರನ್ ದಂಡಿಸಿಕೊಂಡ ಬೌಲರ್ಗಳಾಗಿದ್ದಾರೆ.