ಅಬುಧಾಬಿ : ಎಡಗಾಲು ಸ್ನಾಯು ಸೆಳೆತಕ್ಕೊಳಗಾಗಿರುವ ಮುಂಬೈ ತಂಡದ ನಾಯಕ ರೋಹಿತ್ ಶರ್ಮಾ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲೂ ಕಣಕ್ಕಿಳಿಯುವ ಸಾಧ್ಯತೆ ಕಡಿಮೆ ಎಂದು ತಿಳಿದು ಬಂದಿದೆ.
4 ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ಟೂರ್ನಿಯಲ್ಲಿ 10 ಪಂದ್ಯಗಳಲ್ಲಿ 7 ಗೆಲುವು ಹಾಗೂ 3 ಸೋಲುಗಳೊಂದಿಗೆ ಅಗ್ರಸ್ಥಾನದಲ್ಲಿದೆ. ಇಂದಿನ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಮುಂಬೈ ತಂಡ ಕಣಕ್ಕಿಲಿಯುತ್ತಿದೆ. ಆದರೆ, ಈ ಪಂದ್ಯದಲ್ಲಿ ರೋಹಿತ್ ಕಣಕ್ಕಿಳಿಯುವುದು ಅನುಮಾನ ಎನ್ನಲಾಗುತ್ತಿದೆ.
ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧದ ಪಂದ್ಯದ ವೇಳೆ ಸ್ನಾಯು ಸೆಳೆತಕ್ಕೆ ಒಳಗಾಗಿದ್ದರು. ಹಾಗಾಗಿ, ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಹೊರಗುಳಿದಿದ್ದರು. ಆ ಪಂದ್ಯದಲ್ಲಿ ಕೀರನ್ ಪೊಲಾರ್ಡ್ರಿಗೆ ನಾಯಕರಾಗಿದ್ದರು. ರೋಹಿತ್ ಬುಧವಾರ ನಡೆಯುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯಕ್ಕೆ 10 ದಿನಗಳ ನಂತರ ತಂಡಕ್ಕೆ ಮರಳುವ ಸಾಧ್ಯತೆಯಿದೆ.
-
🗣 Exclusive from the #MI Dressing Room 👉 Mahela and Zak address the team after last night’s 10-wicket win in Sharjah! 👌#OneFamily #MumbaiIndians #MI #Dream11IPL @MahelaJay @ImZaheer pic.twitter.com/5EpHIQgl4F
— Mumbai Indians (@mipaltan) October 24, 2020 " class="align-text-top noRightClick twitterSection" data="
">🗣 Exclusive from the #MI Dressing Room 👉 Mahela and Zak address the team after last night’s 10-wicket win in Sharjah! 👌#OneFamily #MumbaiIndians #MI #Dream11IPL @MahelaJay @ImZaheer pic.twitter.com/5EpHIQgl4F
— Mumbai Indians (@mipaltan) October 24, 2020🗣 Exclusive from the #MI Dressing Room 👉 Mahela and Zak address the team after last night’s 10-wicket win in Sharjah! 👌#OneFamily #MumbaiIndians #MI #Dream11IPL @MahelaJay @ImZaheer pic.twitter.com/5EpHIQgl4F
— Mumbai Indians (@mipaltan) October 24, 2020
ರೋಹಿತ್ ಆಸ್ಟ್ರೇಲಿಯಾ ವಿರುದ್ಧ ಪ್ರವಾಸದಲ್ಲಿ ಭಾರತ ತಂಡದ ತಂಡದ ಎಲ್ಲಾ ಮಾದರಿಯ ಪ್ರಮುಖ ಆಟಗಾರನಾಗಿರುವುದರಿಂದ ಅವರ ಗಾಯದ ನಿರ್ವಹಣೆ ಮುಖ್ಯವಾಗಿದೆ. ಏಕೆಂದರೆ, ಈ ವರ್ಷದ ಆರಂಭದಲ್ಲಿ ನ್ಯೂಜಿಲ್ಯಾಂಡ್ ವಿರುದ್ಧದ ಸರಣಿಯ ವೇಳೆ ರೋಹಿತ್ ಕಣಕಾಲು ಗಾಯಕ್ಕೊಳಗಾಗಿದ್ದರಿಂದ ಭಾರತ ತಂಡ ಟೆಸ್ಟ್ ಹಾಗೂ ಏಕದಿನ ಸರಣಿಯಲ್ಲಿ ಹೀನಾಯ ಸೋಲನುಭವಿಸಿತ್ತು. ಹಾಗಾಗಿ, ಅವರು ಸಂಪೂರ್ಣ ಗುಣಮುಖರಾಗುವುದು ಮುಂಬೈ ತಂಡಕ್ಕೆ ಎಷ್ಟು ಮುಖ್ಯವೋ ಅಷ್ಟೇ ಭಾರತ ತಂಡಕ್ಕೂ ಇದೆ.