ETV Bharat / sports

2020ರ ಐಪಿಎಲ್​ನಲ್ಲಿ ಅತಿ ಹೆಚ್ಚು ರನ್​ ಬಿಟ್ಟುಕೊಟ್ಟು ಕುಖ್ಯಾತಿಗೆ ಪಾತ್ರರಾದ ಬೌಲರ್​ಗಳು

author img

By

Published : Oct 26, 2020, 4:30 PM IST

Updated : Oct 26, 2020, 7:19 PM IST

2020ರ ಐಪಿಎಲ್​ನಲ್ಲಿ ಬ್ಯಾಟ್ಸ್​ಮನ್​ಗಳೇ ಹೆಚ್ಚು ಪ್ರಾಬಲ್ಯ ಸಾಧಿಸುತ್ತಿದ್ದಾರೆ. ರಬಾಡ, ಬುಮ್ರಾ, ಆರ್ಚರ್ ರಂತಹ ಕೆಲವು ಹೆಸರಾಂತ ಬೌಲರ್​ಗಳನ್ನು ಬಿಟ್ಟರೆ ಉಳಿದ ಬೌಲರ್​ಗಳು ಬ್ಯಾಟ್ಸ್​ಮನ್​ಗಳಿಂದ ದಂಡನೆಗೊಳಗಾಗುತ್ತಿದ್ದು, ಈ ಐಪಿಎಲ್​ನಲ್ಲಿ ಒಂದೇ ಪಂದ್ಯದಲ್ಲಿ ಹೆಚ್ಚು ರನ್​ ಬಿಟ್ಟು ಕೊಟ್ಟಿರುವ ಟಾಪ್ 5 ಬೌಲರ್​ಗಳ ವಿವರ ಇಲ್ಲಿದೆ.

ಡೇಲ್ ಸ್ಟೈನ್
ಡೇಲ್ ಸ್ಟೈನ್

ನವದೆಹಲಿ: ಯುಎಇಯಲ್ಲಿ ನಡೆಯುತ್ತಿರುವ ಐಪಿಎಲ್​ನಲ್ಲಿ ಕಗಿಸೋ ರಬಾಡ, ಆರ್ಚರ್​, ಬುಮ್ರಾ, ಎನ್ರಿಚ್ ನೋಕಿಯಾ, ದೀಪಕ್ ಚಹರ್ ಅಂತಹ ಬೆರಳೆಣಿಕೆಯಷ್ಟು ಬೌಲರ್​ಗಳು ಮಿಂಚುತ್ತಿದ್ದಾರೆ. ಆದರೆ, ಕೆಲವು ಬೌಲರ್​ಗಳು ಅತ್ಯಂತ ಕೆಟ್ಟ ಪ್ರದರ್ಶನದ ಮೂಲಕ ಹೆಚ್ಚು ರನ್​ ಬಿಟ್ಟುಕೊಡುವ ಮೂಲಕ ತಂಡದಲ್ಲಿ ಅವಕಾಶವನ್ನೇ ಕಳೆದು ಕೊಳ್ಳುತ್ತಿದ್ದಾರೆ.

ಐಪಿಎಲ್​ನಲ್ಲಿ ಇಲ್ಲಿಯವರೆಗೆ 45 ಪಂದ್ಯಗಳು ನಡೆದಿದ್ದು, ಅದರಲ್ಲಿ ಒಂದೇ ಪಂದ್ಯದಲ್ಲಿ 55 ಕ್ಕಿಂತ ಹೆಚ್ಚು ರನ್ ಬಿಟ್ಟುಕೊಟ್ಟ ಬೌಲರ್​ಗಳು.

ಸಿದ್ಧಾರ್ಥ್​ ಕೌಲ್(ಸನ್​ರೈಸರ್ಸ್ ಹೈದರಾಬಾದ್​)

ಸಿದ್ಧಾರ್ಥ್ ಕೌಲ್
ಸಿದ್ಧಾರ್ಥ್ ಕೌಲ್

ಸಿದ್ಧಾರ್ಥ್​ ಕೌಲ್​ ಮೊದಲೆರಡು ಪಂದ್ಯಗಳಲ್ಲಿ ಅವಕಾಶ ಪಡೆದಿರಲಿಲ್ಲ. ಅಕ್ಟೋಬರ್​ 4 ರಂದು ನಡೆದಿದ್ದ ಮುಂಬೈ ವಿರುದ್ಧದ ಪಂದ್ಯದಲ್ಲಿ ಕೌಲ್ 4 ಓವರ್​ಗಳಲ್ಲಿ 64 ರನ್​ ಬಿಟ್ಟುಕೊಟ್ಟು ದುಬಾರಿಯಾಗಿದ್ದರು. ಮುಂಬೈ ಇಂಡಿಯನ್ಸ್ 20 ಓವರ್​ಗಳಲ್ಲಿ 208 ರನ್​ಗಳಿಸಿತ್ತು ಮತ್ತು ಈ ಪಂದ್ಯವನ್ನು 34 ರನ್​ಗಳಿಂದ ಗೆದ್ದು ಬೀಗಿತ್ತು.

ಅಂಕಿತ್ ರಜಪೂತ್​(ರಾಜಸ್ಥಾನ್ ರಾಯಲ್ಸ್​)

ಅಕ್ಟೋಬರ್​ 25 ರಂದು ನಡೆದ ಮುಂಬೈ ಇಂಡಿಯನ್ಸ್​ ವಿರುದ್ಧದ ಪಂದ್ಯದಲ್ಲೇ ರಾಜಸ್ಥಾನ್ ತಂಡದ ಅಂಕಿತ್ ರಜಪೂತ್​ 60 ರನ್​ ಬಿಟ್ಟುಕೊಟ್ಟು ದುಬಾರಿಯಾದರು. ಆದರೆ, ಬೆನ್​ಸ್ಟೋಕ್ಸ್ ಸಿಡಿಸಿದ ಅಜೇಯ ಶತಕದ ನೆರವಿನಿಂದ ರಾಜಸ್ಥಾನ್​ ಮುಂಬೈ ನೀಡಿದ್ದ 196 ರನ್​ಗಳ ಗುರಿಯನ್ನ ಇನ್ನು 10 ಎಸೆತಗಳಿರುವಂತೆ ಗೆದ್ದು ಬೀಗಿತ್ತು.

ಡೇಲ್ ಸ್ಟೈನ್(ಆರ್​ಸಿಬಿ)

ಡೇಲ್ ಸ್ಟೈನ್
ಡೇಲ್ ಸ್ಟೈನ್

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅನುಭವಿ ಬೌಲರ್​ ಡೇಲ್ ಸ್ಟೈನ್ ಕಿಂಗ್ಸ್​ ಇಲೆವೆನ್ ಪಂಜಾಬ್ ವಿರುದ್ಧದ ಪಂದ್ಯದಲ್ಲಿ 57 ರನ್ ​ಬಿಟ್ಟುಕೊಟ್ಟಿದ್ದರು. ಪಂಜಾಬ್ ತಂಡದ ನಾಯಕ ರಾಹುಲ್ ಅಜೇಯ 132 ರನ್​ಗಳಿಸಿದ್ದರು. ಆದರೆ, ಆರ್​ಸಿಬಿ 109 ರನ್​ಗಳಿಗೆ ಆಲೌಟ್ ಆಗಿ ಹೀನಾಯ ಸೋಲುಕಂಡಿತ್ತು.

ಕ್ರಿಸ್ ಜೋರ್ಡನ್(ಕಿಂಗ್ಸ್​ ಇಲೆವೆನ್ ಪಂಜಾಬ್)

ಕ್ರಿಸ್ ಜೋರ್ಡಾನ್
ಕ್ರಿಸ್ ಜೋರ್ಡಾನ್

ಐಪಿಎಲ್ 2020ರ 2ನೇ ಪಂದ್ಯದಲ್ಲೇ ಪಂಜಾಬ್ ತಂಡದ ಕ್ರಿಸ್ ಜೋರ್ಡನ್ 56 ರನ್​ ಬಿಟ್ಟುಕೊಟ್ಟು ದುಬಾರಿ ಬೌಲರ್ ಎನಿಸಿದ್ದರು. ಈ ಪಂದ್ಯದಲ್ಲಿ ಡೆಲ್ಲಿ 157 ರನ್​ಗಳಿಸಿತ್ತು. ಇದಕ್ಕುತ್ತರವಾಗಿ ಪಂಜಾಬ್ ಕೂಡ 157 ರನ್​ಗಳಿಸಿ ಟೈ ಸಾಧಿಸಿತ್ತು. ರಬಾಡ ಅವರ ಅದ್ಭುತ ಬೌಲಿಂಗ್ ದಾಳಿಯ ನೆರವಿನಿಂದ ಡೆಲ್ಲಿ ತಂಡದ ಗೆದ್ದು ಬೀಗಿತ್ತು.

ಲುಂಗಿ ಎಂಗಿಡಿ(ಚೆನ್ನೈ ಸೂಪರ್ ಕಿಂಗ್ಸ್)

ಐಪಿಎಲ್​ನ 4ನೇ ಪಂದ್ಯದಲ್ಲಿ ಸಿಎಸ್​ಕೆ ಬೌಲರ್​ ಲುಂಗಿ ಎಂಗಿಡಿ 4 ಓವರ್​ಗಳಲ್ಲಿ 56 ರನ್​ ಬಿಟ್ಟುಕೊಟ್ಟಿದ್ದರು. ರಾಯಲ್ಸ್ ಈ ಪಂದ್ಯದಲ್ಲಿ 216 ರನ್​ಗಳಿಸಿದ್ದರೆ, ಇದಕ್ಕುತ್ತರವಾಗಿ ಚೆನ್ನೈ 200 ರನ್​ಗಳಿಸಿ 16 ರನ್​ಗಳ ಸೋಲುಕಂಡಿತ್ತು.

Last Updated : Oct 26, 2020, 7:19 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.