ದುಬೈ: ಕರ್ನಾಟಕದ ರನ್ ಮಷಿನ್ ದೇವದತ್ ಪಡಿಕ್ಕಲ್ ಹಾಗೂ ಆಸ್ಟ್ರೇಲಿಯಾದ ಯುವ ಬ್ಯಾಟ್ಸ್ಮನ್ ಜೋಶ್ ಫಿಲಿಪ್ಪೆ ಇಬ್ಬರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತನ್ನ ಮೊದಲ ಪಂದ್ಯದಲ್ಲಿ ಕಣಕ್ಕಿಳಿಸುತ್ತಿದೆ.
ಕಳೆದ ಆವೃತ್ತಿಯಲ್ಲಿ ಕೊನೆಯ ಸ್ಥಾನ ಪಡೆದಿದ್ದ ಕೊಹ್ಲಿ ಪಡೆ ಈ ಬಾರಿ ಅತ್ಯುತ್ತಮ ತಂಡವನ್ನು ಹೊಂದಿದ್ದು, 13ನೇ ಆವೃತ್ತಿಯಲ್ಲಿ ಟ್ರೋಫಿ ಎತ್ತಿ ಹಿಡಿಯುವ ಹಂಬಲದಲ್ಲಿದೆ. ತಂಡದಲ್ಲೂ ಅನೇಕ ಬದಲಾವಣೆಯನ್ನು ಮಾಡಿಕೊಂಡಿದ್ದು, ಇಂದಿನ ಪಂದ್ಯದಲ್ಲಿ ಫಿಂಚ್ ಜೊತೆಗೆ ದೇವದತ್ ಪಡಿಕ್ಕಲ್ ಹಾಗೂ ಜೋಶ್ ಫಿಲಿಪ್ಪೆಗೂ ಪದಾರ್ಪಣೆ ಮಾಡುವ ಅವಕಾಶ ಕಲ್ಪಿಸಿದೆ.
-
Bold Diaries | 3 Debutants for SRH v RCB
— Royal Challengers Bangalore (@RCBTweets) September 21, 2020 " class="align-text-top noRightClick twitterSection" data="
An age old tradition continued today with our debutants receiving the coveted RCB cap. 🥳#PlayBold #IPL2020 #WeAreChallengers #Dream11IPL pic.twitter.com/33L4lMsH15
">Bold Diaries | 3 Debutants for SRH v RCB
— Royal Challengers Bangalore (@RCBTweets) September 21, 2020
An age old tradition continued today with our debutants receiving the coveted RCB cap. 🥳#PlayBold #IPL2020 #WeAreChallengers #Dream11IPL pic.twitter.com/33L4lMsH15Bold Diaries | 3 Debutants for SRH v RCB
— Royal Challengers Bangalore (@RCBTweets) September 21, 2020
An age old tradition continued today with our debutants receiving the coveted RCB cap. 🥳#PlayBold #IPL2020 #WeAreChallengers #Dream11IPL pic.twitter.com/33L4lMsH15
ದೇವದತ್ ಪಡಿಕ್ಕಲ್ ಕಳೆದ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ 12 ಇನ್ನಿಂಗ್ಸ್ಗಳಲ್ಲಿ 176ರ ಸ್ಟ್ರೈಕ್ ರೇಟ್ನಲ್ಲಿ 580 ರನ್ಗಳಿಸಿದ್ದಾರೆ. ಇನ್ನು ಜೋಶ್ ಫಿಲಿಪ್ಪೆ ಬಿಗ್ಬ್ಯಾಶ್ನಲ್ಲಿ ಅತ್ಯತ್ತಮ ಪ್ರದರ್ಶನ ತೋರಿದ್ದರು. ಅವರು 16 ಪಂದ್ಯಗಳಲ್ಲಿ 487 ರನ್ ಸಿಡಿಸಿದ್ದರು. ಜೊತೆಗೆ ವಿಕೆಟ್ ಕೀಪರ್ ಜವಾಬ್ದಾರಿಯನ್ನು ನಿರ್ವಹಿಸಲಿದ್ದಾರೆ.
ಇದೇ ಪಂದ್ಯದಲ್ಲಿ ಎಸ್ ಆರ್ಹೆಚ್ ಕೂಡ ಅಂಡರ್ 19 ತಂಡದ ನಾಯಕ ಪ್ರಿಯಂ ಗರ್ಗ್ಗೆ ಅವಕಾಶ ನೀಡಿದೆ.