ETV Bharat / sports

ಅಗ್ರಸ್ಥಾನಕ್ಕಾಗಿ ಕಾದಾಟ: ಟಾಸ್​ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಡೆಲ್ಲಿ ಕ್ಯಾಪಿಟಲ್ಸ್​

ಯುವ ಆಟಗಾರರ ದಂಡನ್ನೇ ಹೊಂದಿರುವ ಡೆಲ್ಲಿ ತಂಡ ಆಡಿರುವ 6 ಪಂದ್ಯಗಳಲ್ಲಿ ಒಂದು ಸೋಲು ಹಾಗೂ 5 ಗೆಲುವಿನೊಂದಿಗೆ 10 ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದೆ. ಇಂದಿನ ಪಂದ್ಯದಲ್ಲಿ ಡೆಲ್ಲಿ ಎರಡು ಬದಲಾವಣೆ ಮಾಡಿಕೊಂಡಿದ್ದು, ರಿಷಭ್​ ಪಂತ್ ಜಾಗಕ್ಕೆ ಅಜಿಂಕ್ಯಾ ರಹಾನೆ ಹಾಗೂ ಹೆಟ್ಮೈರ್​ ಜಾಗಕ್ಕೆ ಅಲೆಕ್ಸ್​ ಕ್ಯಾರಿ ತಂಡ ಸೇರಿಕೊಂಡಿದ್ದಾರೆ.

author img

By

Published : Oct 11, 2020, 7:13 PM IST

ಡೆಲ್ಲಿ ಕ್ಯಾಪಿಟಲ್ಸ್​ vs ಮುಂಬೈ ಇಂಡಿಯನ್ಸ್​
ಡೆಲ್ಲಿ ಕ್ಯಾಪಿಟಲ್ಸ್​ vs ಮುಂಬೈ ಇಂಡಿಯನ್ಸ್​

ಅಬುಧಾಬಿ: ಟೂರ್ನಿಯಲ್ಲಿ ಕೇವಲ ಒಂದು ಸೋಲು ಕಂಡು ಅಗ್ರಸ್ಥಾನದಲ್ಲಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡ ಬಲಿಷ್ಠ ಮುಂಬೈ ತಂಡದ ವಿರುದ್ಧ ಟಾಸ್​ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ.

ಯುವ ಆಟಗಾರರ ದಂಡನ್ನೇ ಹೊಂದಿರುವ ಡೆಲ್ಲಿ ತಂಡ ಆಡಿರುವ 6 ಪಂದ್ಯಗಳಲ್ಲಿ ಒಂದು ಸೋಲು ಹಾಗೂ 5 ಗೆಲುವಿನೊಂದಿಗೆ 10 ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದೆ. ಇಂದಿನ ಪಂದ್ಯದಲ್ಲಿ ಡೆಲ್ಲಿ ಎರಡು ಬದಲಾವಣೆ ಮಾಡಿಕೊಂಡಿದ್ದು, ರಿಷಭ್​ ಪಂತ್ ಜಾಗಕ್ಕೆ ಅಜಿಂಕ್ಯಾ ರಹಾನೆ ಹಾಗೂ ಹೆಟ್ಮೈರ್​ ಜಾಗಕ್ಕೆ ಅಲೆಕ್ಸ್​ ಕ್ಯಾರಿ ತಂಡ ಸೇರಿಕೊಂಡಿದ್ದಾರೆ.

ಇನ್ನು ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್​ ತಂಡ ಟೂರ್ನಿಯಲ್ಲಿ 6 ಪಂದ್ಯಗಳಲ್ಲಿ 2 ಸೋಲು ಹಾಗೂ 4 ಗೆಲುವಿನೊಂದಿಗೆ 8 ಅಂಕ ಪಡೆದು 2ನೇ ಸ್ಥಾನದಲ್ಲಿದೆ. ಮುಂಬೈ ಇಂದಿನ ಪಂದ್ಯದಲ್ಲಿ ಯಾವುದೇ ಬದಲಾವಣೆಯಿಲ್ಲದೆ ಕಣಕ್ಕಿಳಿಯುತ್ತಿದೆ.

ಉಭಯ ತಂಡಗಳು ಇಲ್ಲಿಯವರೆಗೆ 24 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, 12 ಪಂದ್ಯಗಳಲ್ಲಿ ಮುಂಬೈ ತಂಡ ಗೆಲುವು ಕಂಡಿದ್ರೆ, 12 ಪಂದ್ಯಗಳಲ್ಲಿ ಡೆಲ್ಲಿ ತಂಡ ಜಯ ಸಾಧಿಸಿದೆ.

ಮುಂಬೈ ಇಂಡಿಯನ್ಸ್​: ರೋಹಿತ್ ಶರ್ಮಾ (ನಾಯಕ), ಕ್ವಿಂಟನ್ ಡಿ ಕಾಕ್ (ವಿಕೆ), ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ, ಕೀರನ್ ಪೊಲಾರ್ಡ್, ಕ್ರುನಾಲ್ ಪಾಂಡ್ಯ, ಜೇಮ್ಸ್ ಪ್ಯಾಟಿನ್ಸನ್, ರಾಹುಲ್ ಚಹಾರ್ , ಟ್ರೆಂಟ್ ಬೌಲ್ಟ್, ಜಸ್ಪ್ರೀತ್ ಬೂಮ್ರಾ.

ಡೆಲ್ಲಿ ಕ್ಯಾಪಿಟಲ್ಸ್​ : ಪೃಥ್ವಿ ಶಾ, ಶಿಖರ್ ಧವನ್, ಶ್ರೇಯಸ್ ಅಯ್ಯರ್ (ನಾಯಕ), ಅಜಿಂಕ್ಯಾ ರಹಾನೆ ಅಲೆಕ್ಸ್​ ಕ್ಯಾರಿ (ವಿಕೆ), ಮಾರ್ಕಸ್ ಸ್ಟೋಯ್ನಿಸ್, ಆಕ್ಸರ್ ಪಟೇಲ್, ಹರ್ಷಲ್ ಪಟೇಲ್, ಆರ್ ಅಶ್ವಿನ್, ಕಾಗಿಸೊ ರಬಾಡಾ, ಅನ್ರಿಕ್ ನಾರ್ಟ್ಜ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.