ನವದೆಹಲಿ: ಸೆಪ್ಟೆಂಬರ್ 19ರಿಂದ ನವೆಂಬರ್ 5ರವರೆಗೆ ಯುಎಇಯಲ್ಲಿ ಪ್ರಸಕ್ತ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ನಡೆಸಲು ನಿರ್ಧರಿಸಲಾಗಿದೆ. ಈ ಟೂರ್ನಿಗಾಗಿ ಎಲ್ಲ ಕ್ರಿಕೆಟ್ ತಂಡಗಳ ಫ್ರಾಂಚೈಸಿಗಳು ಈಗಿನಿಂದಲೇ ಭರದ ತಯಾರಿಯಲ್ಲಿ ತೊಡಗಿವೆ.
ಈ ನಿಟ್ಟಿನಲ್ಲಿ ಒಂದು ಹೆಜ್ಜೆ ಮುಂದಿಟ್ಟಿರುವ ದೆಹಲಿ ಕ್ಯಾಪಿಟಲ್ಸ್, ಪ್ಲೇಯರ್ಸ್ಗೆ ದೆಹಲಿಯಲ್ಲಿಯೇ ಶಿಬಿರ ಆಯೋಜಿಸಲು ನಿರ್ಧರಿಸಿದೆ. ಆದ್ರೆ, ಈ ಬಗ್ಗೆ ಇನ್ನೂ ಅಂತಿಮ ನಿರ್ಧಾರ ಕೈಗೊಂಡಿಲ್ಲ. ನಾಳೆ ಬಿಸಿಸಿಐ ಆಡಳಿತ ಮಂಡಳಿ ಸಭೆ ಸೇರಲಿದ್ದು, ಪಂದ್ಯಾವಳಿಯ ವೇಳಾಪಟ್ಟಿ ಬಿಡುಗಡೆ ಮಾಡುವ ಸಾಧ್ಯತೆ ಇದೆ. ಇದರ ಜತೆಗೆ ತಂಡಗಳ ಮಾಲೀಕರು ಯಾವೆಲ್ಲಾ ಕ್ರಮ ಕೈಗೊಳ್ಳಬಹುದು ಎಂಬ ಮಾಹಿತಿಯನ್ನೂ ನೀಡುವ ಸಾಧ್ಯತೆಯೂ ಇದೆ.
ದೆಹಲಿ ಕ್ಯಾಪಿಟಲ್ಸ್ ತನ್ನ ಬೇಡಿಕೆಯನ್ನು ನಾಡಿದ್ದು ನಡೆಯುವ ಐಪಿಎಲ್ ಗವರ್ನಿಂಗ್ ಸಭೆಯ ಮುಂದಿಡುವ ಸಾಧ್ಯತೆ ಇದೆ.
ಆಗಸ್ಟ್ 15ರಿಂದ ನಾವು ತಂಡದ ಭಾರತೀಯ ಆಟಗಾರರಿಗೆ (ಡೆಲ್ಲಿ ತಂಡದ ಪ್ಲೇಯರ್ಸ್) ಶಿಬಿರ ನಡೆಸಲು ನಿರ್ಧರಿಸಿದ್ದೇವೆ. ಐಪಿಎಲ್ ಸಭೆಯಲ್ಲಿ ನಡೆಯಲಿರುವ ತೆಗೆದುಕೊಳ್ಳುವ ನಿರ್ಧಾರದ ಮೇಲೆ ನಾವು ಕೂತೂಹಲ ಹೊಂದಿದ್ದೇವೆ ಎಂದು ಡೆಲ್ಲಿ ಕ್ಯಾಪಿಟಲ್ಸ್ ತಿಳಿಸಿದೆ.
ದೇಶಾದ್ಯಂತ ಲಾಕ್ಡೌನ್ ಜಾರಿಗೊಂಡಿರುವ ಕಾರಣ ಅನೇಕ ಪ್ಲೇಯರ್ಸ್ ತಮ್ಮ ಪ್ಲ್ಯಾಟ್ಗಳಲ್ಲಿ ಉಳಿದುಕೊಂಡಿದ್ದು, ಅವರಿಗೆ ಈಗಿನಿಂದಲೇ ಶಿಬಿರ ಆಯೋಜನೆ ಮಾಡಿದರೆ ನವೆಂಬರ್ ತಿಂಗಳ ವೇಳೆಗೆ ಕ್ರಿಕೆಟ್ನಲ್ಲಿ ಭಾಗಿಯಾಗಲು ಸಾಧ್ಯವಾಗುತ್ತದೆ ಎಂದು ಹೇಳಿದೆ.