ಶಾರ್ಜಾ: ಬೌಂಡರಿ-ಸಿಕ್ಸರ್ಗಳ ಸುರಿಮಳೆ ಕಂಡುಬಂದ ಕೆಕೆಆರ್ ಮತ್ತು ಡೆಲ್ಲಿ ಕ್ಯಾಪಿಟಲ್ ನಡುವಿನ ಪಂದ್ಯದಲ್ಲಿ ಅಂತಿಮವಾಗಿ ಡೆಲ್ಲಿ ಕ್ಯಾಪಿಟಲ್ಸ್ 18 ರನ್ಗಳ ರೋಚಕ ಜಯ ಸಾಧಿಸಿ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನದಕ್ಕೇರಿದ.
ಟಾಸ್ ಸೋತರು ಮೊದಲು ಬ್ಯಾಟಿಂಗ್ ನಡೆಸಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಚಿಕ್ಕದಾದ ಬೌಂಡರಿಯುಳ್ಳ ಮೈದಾನದ ಲಾಭ ಪಡೆದು ಆರಂಭದಿಂದ ಅಂತ್ಯದವರೆಗೂ ಅಬ್ಬರದ ಬ್ಯಾಟಿಂಗ್ ನಡೆಸಿ 228 ರನ್ಗಳಿಸಿತ್ತು. ನಾಯಕ ಶ್ರೇಯಸ್ ಅಯ್ಯರ್ 38 ಎಸೆತಗಳಲ್ಲಿ 88 ರನ್ಗಳಿಸಿದರೆ, ಯುವ ಆಟಗಾರ ಪೃಥ್ವಿ ಶಾ 41 ಎಸೆತಗಳಲ್ಲಿ 66 ರನ್ಗಳಿಸಿ ಬೃಹತ್ ಮೊತ್ತಕ್ಕೆ ನೆರವಾಗಿದ್ದರು.
-
That's that from Match 16 of #Dream11IPL as @DelhiCapitals win by 18 runs.#DCvKKR pic.twitter.com/JIyTe1zwdD
— IndianPremierLeague (@IPL) October 3, 2020 " class="align-text-top noRightClick twitterSection" data="
">That's that from Match 16 of #Dream11IPL as @DelhiCapitals win by 18 runs.#DCvKKR pic.twitter.com/JIyTe1zwdD
— IndianPremierLeague (@IPL) October 3, 2020That's that from Match 16 of #Dream11IPL as @DelhiCapitals win by 18 runs.#DCvKKR pic.twitter.com/JIyTe1zwdD
— IndianPremierLeague (@IPL) October 3, 2020
ಇನ್ನು ಡಿಸಿ ನೀಡಿದ 229 ರನ್ಗಳ ಬೃಹತ್ ಮೊತ್ತ ಬೆನ್ನಟ್ಟಿದ ಕೆಕೆಆರ್ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 210 ರನ್ಗಳಿಸಿ 18 ರನ್ಗಳ ಸೋಲುಂಡಿತು.
ಶುಬ್ಮನ್ ಗಿಲ್ 28, ನಿತೀಶ್ ರಾಣಾ 35 ಎಸೆತಗಳಲ್ಲಿ ತಲಾ 4 ಬೌಂಡರಿ ಹಾಗೂ ಸಿಕ್ಸರ್ ಸಹಿತ 58, ಇಯಾನ್ ಮಾರ್ಗ 18 ಎಸೆತಗಳಲ್ಲಿ 1 ಬೌಂಡರಿ ಹಾಗೂ 5 ಸಿಕ್ಸರ್ ಸಹಿತ 44 ಹಾಗೂ ರಾಹುಲ್ ತ್ರಿಪಾಠಿ 16 ಎಸೆತಗಳಲ್ಲಿ ತಲಾ ಮೂರು ಬೌಂಡರಿ ಹಾಗೂ ಸಿಕ್ಸರ್ ಸಹಿತ 36 ರನ್ಗಳಿಸಿ ಗೆಲುವಿಗಾಗಿ ಶತಪ್ರಯತ್ನ ನಡೆಸಿದರಾದರೂ 210 ರನ್ಗಳನ್ನಷ್ಟೇ ಗಳಿಸಲು ಶಕ್ತವಾದರು.
ಕೆಕೆಆರ್ ತಂಡದ ಆರಂಭಿಕ ನರೈನ್(3), ಆ್ಯಂಡ್ರೆ ರಸೆಲ್ (13), ದಿನೇಶ್ ಕಾರ್ತಿಕ್(6) ಪ್ಯಾಟ್ ಕಮ್ಮಿನ್ಸ್ (5) ಕಳಪೆ ಮೊತ್ತಕ್ಕೆ ವಿಕೆಟ್ ಒಪ್ಪಿಸಿದ್ದು ಕೆಕೆಆರ್ ಸೋಲಿಗೆ ಕಾರಣವಾಯಿತು.
ಅದ್ಭುತ ಬೌಲಿಂಗ್ ಪ್ರದರ್ಶನ ತೋರಿದ ದಕ್ಷಿಣ ಆಫ್ರಿಕಾದ ಆ್ಯನ್ರಿಚ್ ನಾರ್ಟ್ಜ್ 33 ರನ್ ನೀಡಿ 3 ವಿಕೆಟ್ ಪಡೆದು ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಇವರು ಮಾರ್ಗನ್,ಕಮ್ಮಿನ್ಸ್ ಹಾಗೂ ನರೈನ್ ವಿಕೆಟ್ ಪಡೆದರೆ, ಇವರಿಗೆ ಸಾಥ್ ನೀಡಿದ ಹರ್ಷಲ್ ಪಟೇಲ್ ನಿತೀಶ್ ರಾಣಾ ಹಾಗೂ ದಿನೇಶ್ ಕಾರ್ತಿಕ್ ವಿಕೆಟ್ ಪಡೆದರು. ರಬಾಡ, ರಸೆಲ್ ವಿಕೆಟ್ ಪಡೆದರಾದರೂ 51 ರನ್ ನೀಡಿ ದುಬಾರಿಯಾದರು. ಅಮಿತ್ ಮಿಶ್ರಾ 14 ರನ್ ನೀಡಿ 1 ಹಾಗೂ ಸ್ಟೋಯ್ನಿಸ್ 46 ರನ್ ನೀಡಿ ಒಂದು ವಿಕೆಟ್ ಪಡೆದು ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.