ETV Bharat / sports

ಐಪಿಎಲ್​ ದಿನಾಂಕ ಫಿಕ್ಸ್​... ಸೆಪ್ಟಂಬರ್​ನಲ್ಲಿ ಶುರುವಾಗಿ ನವೆಂಬರ್​ನಲ್ಲಿ ಮುಕ್ತಾಯ!

ಬಹುನಿರೀಕ್ಷಿತ ಇಂಡಿಯನ್​ ಪ್ರೀಮಿಯರ್ ಲೀಗ್​ ವಿದೇಶದಲ್ಲಿ ನಡೆಯುವುದಕ್ಕೆ ಮುಹೂರ್ತ ಫಿಕ್ಸ್​ ಆಗಿದೆ. 51 ದಿನಗಳ ಕಾಲ ದುಬೈನಲ್ಲಿ ಐಪಿಎಲ್​ ಘೋಷಣೆ ಮೊಳಗಲಿದೆ.

IPL 2020 date announce, IPL 2020 date announce news, IPL 2020 date news, IPL 2020 date latest news, ಐಪಿಎಲ್​ 2020 ದಿನಾಂಕ ಪ್ರಕಟ, ಐಪಿಎಲ್​ 2020 ದಿನಾಂಕ ಪ್ರಕಟ ಸುದ್ದಿ, ಐಪಿಎಲ್​ 2020 ದಿನಾಂಕ, ಐಪಿಎಲ್​ 2020 ದಿನಾಂಕ ಸುದ್ದಿ,
ಸೆಪ್ಟಂಬರ್​ನಲ್ಲಿ ಶುರುವಾಗಿ ನವೆಂಬರ್​ನಲ್ಲಿ ಮುಕ್ತಾಯ
author img

By

Published : Jul 24, 2020, 4:58 AM IST

ನವದೆಹಲಿ: ಪ್ರಸಕ್ತ ಸಾಲಿನ ಇಂಡಿಯನ್​ ಪ್ರೀಮಿಯರ್​ ಲೀಗ್ ದಿನಾಂಕ ಪ್ರಕಟವಾಗಿದ್ದು, ಸೆಪ್ಟಂಬರ್​ನಲ್ಲಿ ಶುರುವಾಗಿ ನವೆಂಬರ್​ನಲ್ಲಿ ಮುಕ್ತಾಯಗೊಳ್ಳಲಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

ನವೆಂಬರ್​-ಡಿಸೆಂಬರ್​ ತಿಂಗಳಲ್ಲಿ ನಡೆಯಬೇಕಾಗಿದ್ದ ಟಿ-20 ವಿಶ್ವಕಪ್ ಟೂರ್ನಮೆಂಟ್​​​ ಮುಂದೂಡಿಕೆಯಾಗಿದ್ದು, ಹೀಗಾಗಿ ವಿದೇಶದಲ್ಲಿ ಐಪಿಎಲ್​ ಟೂರ್ನಿ ನಡೆಸಲು ನಿರ್ಧರಿಸಲಾಗಿತ್ತು. ಅದರಂತೆ ದುಬೈನಲ್ಲಿ ಪ್ರಸಕ್ತ ಸಾಲಿನ ಐಪಿಎಲ್​ ನಡೆಸಲು ಈಗಾಗಲೇ ಬಹುತೇಕ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಬ್ರಿಜೇಶ್​ ಪಟೇಲ್​ ಈ ಹಿಂದೆ ತಿಳಿಸಿದ್ದರು.

IPL 2020 date announce, IPL 2020 date announce news, IPL 2020 date news, IPL 2020 date latest news, ಐಪಿಎಲ್​ 2020 ದಿನಾಂಕ ಪ್ರಕಟ, ಐಪಿಎಲ್​ 2020 ದಿನಾಂಕ ಪ್ರಕಟ ಸುದ್ದಿ, ಐಪಿಎಲ್​ 2020 ದಿನಾಂಕ, ಐಪಿಎಲ್​ 2020 ದಿನಾಂಕ ಸುದ್ದಿ,
ಸೆಪ್ಟಂಬರ್​ನಲ್ಲಿ ಶುರುವಾಗಿ ನವೆಂಬರ್​ನಲ್ಲಿ ಮುಕ್ತಾಯ

ಪ್ರಸಕ್ತ ವರ್ಷದ ಐಪಿಎಲ್​ ಮಾರ್ಚ್​ 29ರಿಂದ ಆರಂಭಗೊಳ್ಳಬೇಕಾಗಿತ್ತು. ಆದರೆ ಕೊರೊನಾ ಕಾರಣ ಮುಂದೂಡಿಕೆ ಮಾಡಲಾಗಿತ್ತು. ಇಲ್ಲಿಯವರೆಗೆ ವೇಳಾಪಟ್ಟಿ ರಿಲೀಸ್​ ಆಗಿಲ್ಲ. ಆದರೆ ವಿದೇಶದಲ್ಲಿ ನಡೆಸಲು ಕೊನೆಯದಾಗಿ ನಿರ್ಧರಿಸಿ, ಅಂತಿಮ ನಿರ್ಧಾರ ಹೊರಹಾಕಲು ಕೇಂದ್ರ ಸರ್ಕಾರದ ಅನುಮತಿಗೋಸ್ಕರ ಕಾಯಲಾಗುತ್ತಿದೆ ಎಂದಿದ್ದರು.

ಈಗ ಸೆಪ್ಟಂಬರ್​ 19ರಂದು ಐಪಿಎಲ್​ ಶುರುವಾಗಲಿದ್ದು, ಫೈನಲ್​ ಪಂದ್ಯ ನವೆಂಬರ್​ 8ರಂದು ನಡೆಯಲಿದೆ. ವಿದೇಶಿ ನೆಲದಲ್ಲಿ 51 ದಿನಗಳ ಕಾಲ ಐಪಿಎಲ್​ ಮನರಂಜಿಸಲಿದೆ ಎಂದು ಬಿಸಿಸಿಐ ಮೂಲಗಳು ನ್ಯೂಸ್​ ಏಜೆನ್ಸಿಗಳಿಗೆ ತಿಳಿಸಿವೆ. ಆದ್ರೆ ಐಪಿಎಲ್​ ದಿನಾಂಕದ ಬಗ್ಗೆ ಬಿಸಿಸಿಐನಿಂದ ಯಾವುದೇ ಅಧಿಕೃತ ಮಾಹಿತಿ ಪ್ರಕಟವಾಗಿಲ್ಲ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.