ಶಾರ್ಜಾ: ಇಂಡಿಯನ್ ಪ್ರೀಮಿಯರ್ ಲೀಗ್ನ 4ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ತಂಡ ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡಿದೆ.
ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಧೋನಿ ಬಳಗ ಮತ್ತೊಂದು ಚೇಸಿಂಗ್ ಮಾಡಲು ನಿರ್ಧರಿಸಿದೆ.
-
Match 4. Chennai Super Kings win the toss and elect to field https://t.co/Fyhhx5FSSC #RRvCSK #Dream11IPL #IPL2020
— IndianPremierLeague (@IPL) September 22, 2020 " class="align-text-top noRightClick twitterSection" data="
">Match 4. Chennai Super Kings win the toss and elect to field https://t.co/Fyhhx5FSSC #RRvCSK #Dream11IPL #IPL2020
— IndianPremierLeague (@IPL) September 22, 2020Match 4. Chennai Super Kings win the toss and elect to field https://t.co/Fyhhx5FSSC #RRvCSK #Dream11IPL #IPL2020
— IndianPremierLeague (@IPL) September 22, 2020
ಇನ್ನು ಇಂದೇ ಮೊದಲ ಪಂದ್ಯವಾಡುತ್ತಿರುವ ರಾಜಸ್ಥಾನ್ ರಾಯಲ್ಸ್ ತಂಡದಿಂದ ನಾಯಕ ಸ್ಟಿವ್ ಸ್ಮಿತ್ ಸೇರಿಂತೆ ಜೋಫ್ರಾ ಆರ್ಚರ್, ಟಾಮ್ ಕರ್ರನ್, ಡೇವಿಡ್ ಮಿಲ್ಲರ್ ವಿದೇಶಿಯರ ವಿಭಾಗದಿಂದ ಕಣಕ್ಕಿಳಿಯುತ್ತಿದ್ದಾರೆ. ಜೋಸ್ ಬಟ್ಲರ್ ಕ್ವಾರಂಟೈನ್ನಲ್ಲಿರುವುದರಿಂದ ಇಂದಿನ ಪಂದ್ಯದಿಂದ ಹೊರಗುಳಿಯಲಿದ್ದು, ಸಂಜು ಸಾಮ್ಸನ್ ವಿಕೆಟ್ ಕೀಪಿಂಗ್ ಜವಾಬ್ದಾರಿ ನಿರ್ವಹಿಸಲಿದ್ದಾರೆ.
ಅಂಡರ್ 19 ಸ್ಟಾರ್ ಯಶಸ್ವಿ ಜೈಸ್ವಾಲ್ ಐಪಿಎಲ್ಗೆ ಪದಾರ್ಪಣೆ ಮಾಡುತ್ತಿದ್ದಾರೆ. ಡೇವಿಡ್ ಮಿಲ್ಲರ್ ಕಳೆದ ಆವೃತ್ತಿಯಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದಲ್ಲಿ ಆಡಿದ್ದರು. ಮೊದಲ ಬಾರಿಗೆ ರಾಜಸ್ಥಾನ್ ತಂಡದಲ್ಲಿ ಕಣಕ್ಕಿಳಿಯುತ್ತಿದ್ದಾರೆ.
3 ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡ ಕೇವಲ ಒಂದು ಬದಲಾವಣೆಯೊಂದಿಗೆ ಕಣಕ್ಕಿಳಿಯುತ್ತಿದೆ. ಕಳೆದ ಪಂದ್ಯದ ಹೀರೋ ಅಂಬಾಟಿ ರಾಯುಡು ಬದಲು ಯುವ ಆಟಗಾರ ಋತುರಾಜ್ ಗಾಯಕ್ವಾಡ್ ಕಣಕ್ಕಿಳಿಯುತ್ತಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್: ಎಂ.ಎಸ್. ಧೋನಿ (ನಾಯಕ / ವಿಕೆಟ್ ಕೀಪರ್), ಶೇನ್ ವ್ಯಾಟ್ಸನ್, ಋತುರಾಜ್ ಗಾಯಕ್ವಾಡ್, ಡು ಪ್ಲೆಸಿಸ್, ಮುರಳಿ ವಿಜಯ್, ಕೇದಾರ್ ಜಾಧವ್, ರವೀಂದ್ರ ಜಡೇಜಾ, ಪಿಯೂಷ್ ಚಾವ್ಲಾ, ಸ್ಯಾಮ್ ಕರ್ರನ್,ದೀಪಕ್ ಚಹಾರ್, ಲುಂಗಿ ಎಂಗಿಡಿ
ರಾಜಸ್ಥಾನ್ ರಾಯಲ್ಸ್: ಸ್ಟೀವ್ ಸ್ಮಿತ್(ನಾಯಕ), ರಾಬಿನ್ ಉತ್ತಪ್ಪ ,ಸಂಜು ಸ್ಯಾಮ್ಸನ್, ಯಶಸ್ವಿ ಜೈಸ್ವಾಲ್, ಡೇವಿಡ್ ಮಿಲ್ಲರ್, ರಿಯಾನ್ ಪರಾಗ್, ಜೋಫ್ರಾ ಆರ್ಚರ್, ಶ್ರೇಯಸ್ ಗೋಪಾಲ್, ರಾಹುಲ್ ತೇವಾಟಿಯಾ,ಜಯದೇವ್ ಉನಾದ್ಕಟ್, ಟಾಮ್ ಕರ್ರನ್