ETV Bharat / sports

ಶಂಕಾಸ್ಪದ ಬೌಲಿಂಗ್ ಶೈಲಿ ಆರೋಪ: ನರೈನ್ ಜಾಗಕ್ಕೆ ಬಂದವರೂ ನಿಷೇಧಿತ ಬೌಲರ್!! - Big Bash League

ಮುಂಬೈ ಇಂಡಿಯನ್ಸ್​ ವಿರುದ್ಧದ ಪಂದ್ಯದ ವೇಳೆ ನರೈನ್​ ಜಾಗಕ್ಕೆ ಕ್ರಿಸ್ ಗ್ರೀನ್​ ಕೆಕೆಆರ್ ತಂಡದ ಪರ ಕಣಕ್ಕಿಳಿದಿದ್ದರು. ಆದರೆ, ಕಳೆದ ವರ್ಷ ಬಿಬಿಎಲ್ ಲೀಗ್​ ವೇಳೆ ಅಂಪೈರ್ ಅವ​ರಿಂದ ಅಕ್ರಮ ಬೌಲಿಂಗ್​ ಆ್ಯಕ್ಷನ್ ವರದಿಯಾದ ಬಳಿಕ ಆಸ್ಟ್ರೇಲಿಯಾ ಕ್ರಿಕೆಟ್ ಬೋರ್ಡ್​ ಅವರನ್ನು 90 ದಿನಗಳ ಕಾಲ ಬೌಲಿಂಗ್​ನಿಂದ ನಿಷೇಧಿಸಿದೆ. ಆದರೆ ಅದೇ ಬೌಲರ್​ನನ್ನು ಕೆಕೆಆರ್​ ಕಣಕ್ಕಿಳಿಸುವ ಮೂಲಕ ಎಲ್ಲರ ಅಚ್ಚರಿಗೆ ಕಾರಣವಾಗಿದೆ.

ಕೆಕೆಆರ್ ತಂಡದ ಕ್ರಿಸ್ ಗ್ರೀನ್
ಕೆಕೆಆರ್ ತಂಡದ ಕ್ರಿಸ್ ಗ್ರೀನ್
author img

By

Published : Oct 17, 2020, 8:14 PM IST

ದುಬೈ: ಕಿಂಗ್ಸ್​ ಇಲೆವೆನ್ ಪಂಜಾಬ್ ವಿರುದ್ಧದ ಪಂದ್ಯದ ವೇಳೆ ಅನುಮಾನಾಸ್ಪದ ಬೌಲಿಂಗ್ ಶೈಲಿ ಅನುಸರಿಸಿದ ಆರೋಪಕ್ಕೆ ಗುರಿಯಾಗಿರುವ ಸುನೀಲ್ ನರೈನ್ ಜಾಗಕ್ಕೆ ಕ್ರಿಸ್​ ಗ್ರೀನ್​ರನ್ನು ಕೆಕೆಆರ್ ಆಯ್ಕೆ ಮಾಡಿದೆ. ಆಶ್ಚರ್ಯ ಎಂದರೆ ಎಂದರೆ ಗ್ರೀನ್​ ಅವರು ಪ್ರತಿನಿಧಿಸುವ ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿಯಿಂದಲೇ ಈಗಾಗಲೆ ಅನುಮಾನಾಸ್ಪದ ಬೌಲಿಂಗ್​ ಆರೋಪ ಎದುರಿಸುತ್ತಿದ್ದಾರೆ.

ಮುಂಬೈ ಇಂಡಿಯನ್ಸ್​ ವಿರುದ್ಧದ ಪಂದ್ಯದ ವೇಳೆ ನರೈನ್​ ಜಾಗಕ್ಕೆ ಕ್ರಿಸ್ ಗ್ರೀನ್​ ಕೆಕೆಆರ್ ತಂಡದ ಪರ ಕಣಕ್ಕಿಳಿದಿದ್ದರು. ಆದರೆ, ಕಳೆದ ವರ್ಷ ಬಿಬಿಎಲ್ ಲೀಗ್​ ವೇಳೆ, ಅಂಪೈರ್ ಅವ​ರಿಂದ ಅಕ್ರಮ ಬೌಲಿಂಗ್​ ಆ್ಯಕ್ಷನ್ ವರದಿಯಾದ ಬಳಿಕ ಆಸ್ಟ್ರೇಲಿಯಾ ಕ್ರಿಕೆಟ್ ಬೋರ್ಡ್​ ಅವರನ್ನು 90 ದಿನಗಳ ಕಾಲ ಬೌಲಿಂಗ್​ನಿಂದ ನಿಷೇಧಿಸಿದೆ. ಆದರೆ ಅದೇ ಬೌಲರ್​ನನ್ನು ಕೆಕೆಆರ್​ ಕಣಕ್ಕಿಳಿಸುವ ಮೂಲಕ ಎಲ್ಲರ ಅಚ್ಚರಿಗೆ ಕಾರಣವಾಗಿದೆ.

ಕ್ರಿಸ್ ಗ್ರೀನ್​
ಕ್ರಿಸ್ ಗ್ರೀನ್​

ಬಿಗ್​ಬ್ಯಾಶ್​ನಲ್ಲಿ ಅಕ್ರಮ ಬೌಲಿಂಗ್ ಶೈಲಿಯಂದು ವರದಿಯಾದ ಬಳಿಕ ದಕ್ಷಿಣ ಆಫ್ರಿಕಾ ಮೂಲದ ಆಸೀಸ್ ಕ್ರಿಕೆಟಿಗ ಆಸ್ಟ್ರೇಲಿಯಾದ ರಾಷ್ಟ್ರೀಯ ಕ್ರಿಕೆಟ್ ಕೇಂದ್ರದಲ್ಲಿ ಪರೀಕ್ಷೆಗಾಗಿ ಒಳಗಾಗಿದ್ದರು. ಜನವರಿ 5 ರಂದು ನಡೆದ ಪರೀಕ್ಷೆಯ ಫಲಿತಾಂಶ ಗ್ರೀನ್‌ ಬೌಲಿಂಗ್ ಶೈಲಿ ಕಾನೂನುಬಾಹಿರ ಎಂದು ಎತ್ತಿ ಹಿಡಿದಿತ್ತು. ನಂತರ ಅವರನ್ನು ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿಯ ಯಾವುದೇ ಕ್ರಿಕೆಟ್​ನಲ್ಲಿ ಬೌಲಿಂಗ್ ಮಾಡದಂತೆ ಅಮಾನತುಗೊಳಿಸಲಾಗಿತ್ತು.

ಆದರೆ, ಕೆರಿಬಿಯನ್ ಪ್ರೀಮಿಯರ್​ ಲೀಗ್​ನಲ್ಲಿ ಕ್ರಿಸ್ ಗ್ರೀನ್ ಗಯಾನ ಅಮೆಜಾನ್ ವಾರಿಯರ್ಸ್ ತಂಡದ ನಾಯಕನಾಗಿ ಹಾಗೂ ಪ್ರಧಾನ ಬೌಲರ್​ ಆಗಿ ಗುರುತಿಸಿಕೊಂಡಿದ್ದರಿಂದ 2019ರ ಡಿಸೆಂಬರ್​ನಲ್ಲಿ ನಡೆದ ಹರಾಜಿನಲ್ಲಿ ಕೆಕೆಆರ್​ 20 ಲಕ್ಷ ರೂ.ಗೆ ಖರೀದಿಸಿತ್ತು.

ಅಕ್ಟೋಬರ್​​ 10 ರಂದು ನರೈಗೆ ವಾರ್ನಿಂಗ್ ಪಡೆದ ನಂತರ ಕಳೆದ ಎರಡು ಪಂದ್ಯಗಳಿಂದ ತಂಡದಿಂದ ಹೊರಗುಳಿದಿದ್ದಾರೆ. ಈಗಾಗಲೆ ತಮ್ಮ ಬೌಲಿಂಗ್​ ಶೈಲಿಯನ್ನು ಸರಿಪಡಿಸಿಕೊಳ್ಳಲು ಕಠಿಣ ಪರಿಶ್ರಮ ಪಡುತ್ತಿದ್ದಾರೆ ಎಂದು ಕೆಕೆಆರ್ ವರದಿ ಮಾಡಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.