ಅಬುಧಾಬಿ: ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಅಬ್ಬರಿಸುತ್ತಿರುವ ಸ್ಫೋಟಕ ಬ್ಯಾಟ್ಸಮನ್ ಕ್ರಿಕಸ್ ಗೇಲ್ ನಿನ್ನೆ ರಾಜಸ್ಥಾನ ವಿರುದ್ಧದ ಪಂದ್ಯದಲ್ಲೂ ಆಕರ್ಷಕ ಬ್ಯಾಟಿಂಗ್ ಪ್ರದರ್ಶನ ನೀಡಿದರು.
41 ವರ್ಷದ ಗೇಲ್ ನಿನ್ನೆಯ ಪಂದ್ಯದಲ್ಲಿ 63 ಎಸೆತಗಳಲ್ಲಿ 6 ಬೌಂಡರಿ, 8 ಸಿಕ್ಸರ್ ಸೇರಿದಂತೆ 99ರನ್ಗಳಿಕೆ ಮಾಡಿದ್ದರು. ಶತಕ ಸಿಡಿಸಿ ಅಬ್ಬರಿಸುವುದಕ್ಕೂ ಮುಂಚಿತವಾಗಿ ವಿಕೆಟ್ ಒಪ್ಪಿಸಿದ್ದು ಅವರಲ್ಲಿ ನಿರಾಸೆ ಮೂಡಿಸುವಂತೆ ಮಾಡಿತು. 99ರನ್ಗಳಿಕೆ ಮಾಡಿದ್ದ ವೇಳೇ ಜೋಪ್ರಾ ಆರ್ಚರ್ ಎಸೆದ ಓವರ್ನಲ್ಲಿ ಬೌಲ್ಡ್ ಆದ ಗೇಲ್ ತಮ್ಮ ಆಕ್ರೋಶ ಹೊರಹಾಕಿದ್ದಾರೆ.
-
#IPL2020 #KXIPvRR #RRvsKXIP : #UniverseBoss Gayle vs Archer vs ends in handshake pic.twitter.com/xL6zdNuZKc
— IPL 2020 HIGHLIGHT (@ipl2020highlite) October 30, 2020 " class="align-text-top noRightClick twitterSection" data="
">#IPL2020 #KXIPvRR #RRvsKXIP : #UniverseBoss Gayle vs Archer vs ends in handshake pic.twitter.com/xL6zdNuZKc
— IPL 2020 HIGHLIGHT (@ipl2020highlite) October 30, 2020#IPL2020 #KXIPvRR #RRvsKXIP : #UniverseBoss Gayle vs Archer vs ends in handshake pic.twitter.com/xL6zdNuZKc
— IPL 2020 HIGHLIGHT (@ipl2020highlite) October 30, 2020
ಪ್ರಸಕ್ತ ಸಾಲಿನ ಐಪಿಎಲ್ನಲ್ಲಿ ಚೊಚ್ಚಲ ಶತಕ ಸಿಡಿಸುವ ತವಕದಲ್ಲಿದ್ದ ಗೇಲ್ ಔಟ್ ಆಗುತ್ತಿದ್ದಂತೆ ಆಕ್ರೋಶ ಹಾಗೂ ನಿರಾಸೆಯಿಂದ ಬ್ಯಾಟ್ ಎಸೆದಿದ್ದಾರೆ. ತದನಂತರ ಆರ್ಚರ್ ಅವರಿಗೆ ಹಸ್ತಲಾಘವ ನೀಡಿ, ತಾವು ಎಸೆದ ಬ್ಯಾಟ್ ಎತ್ತಿಕೊಂಡು ಪೆವಿಲಿಯನ್ ಕಡೆ ತೆರಳಿದ್ದಾರೆ.
ಪಂಜಾಬ್ ವಿರುದ್ಧ 7ವಿಕೆಟ್ಗಳ ಜಯ ಸಾಧಿಸಿ ಪ್ಲೇ-ಆಫ್ ರೇಸ್ನಲ್ಲಿ ಉಳಿದ ರಾಯಲ್ಸ್!
ದಂಡ ತೆತ್ತ ಕ್ರಿಸ್ ಗೇಲ್!
ಮೈದಾನದಲ್ಲೇ ಈ ರೀತಿಯಾಗಿ ನಡೆದುಕೊಂಡಿದ್ದಕ್ಕಾಗಿ ಪಂದ್ಯದ ಶುಲ್ಕದ ಶೇ. 10ರಷ್ಟು ದಂಡ ವಿಧಿಸಲಾಗಿದೆ. ಐಪಿಎಲ್ ನೀತಿ ಸಂಹಿತೆಯ ಲೆವೆಲ್ 1 ಅಪರಾದ ಆಗಿರುವ ಕಾರಣ ಅವರಿಗೆ ದಂಡ ವಿಧಿಸಲಾಗಿದೆ.