ETV Bharat / sports

ಚಹಾಲ್​, ಉದಾನ ಬೌಲಿಂಗ್​ಗೆ ತತ್ತರಿಸಿದ ರಾಜಸ್ಥಾನ್​: ಆರ್​ಸಿಬಿ ಗೆಲುವಿಗೆ ಬೇಕು 155 ರನ್​

ಯುವ ಬ್ಯಾಟ್ಸ್​ಮನ್ ಲಾಮ್ರರ್​ 47 ಹಾಗೂ ತೆವಾಟಿಯಾ ಅವರ 24 ರನ್​ಗಳ ನೆರವಿನಿಂದ ರಾಜಸ್ಥಾನ್ ರಾಯಲ್ಸ್​ 20 ಓವರ್​ಗಳಲ್ಲಿ 6 ವಿಕೆಟ್ ನಷ್ಟಕ್ಕೆ 155 ರನ್​ಗಳಿಸಿದೆ.

ಆರ್​ಸಿಬಿ ಮತ್ತು ರಾಜಸ್ಥಾನ್​
ಆರ್​ಸಿಬಿ ಮತ್ತು ರಾಜಸ್ಥಾನ್​
author img

By

Published : Oct 3, 2020, 5:36 PM IST

ಅಬುಧಾಬಿ: ಸ್ಟಾರ್​ ಸ್ಪಿನ್ನರ್​ ಯಜುವೇಂದ್ರ ಚಹಾಲ್​ ಮತ್ತು ವೇಗಿ ಇಸುರು ಉದಾನ ಬೌಲಿಂಗ್ ದಾಳಿಗೆ ತತ್ತರಿಸಿದ ರಾಜಸ್ಥಾನ್​ ರಾಯಲ್ಸ್​ 20 ಓವರ್​ಗಳಲ್ಲಿ 6 ವಿಕೆಟ್ ಕಳೆದುಕೊಂಡು 154 ರನ್​ಗಳಿಸಿದೆ.

ಟಾಸ್​ ಗೆದ್ದ ತಕ್ಷಣ ಬ್ಯಾಟಿಂಗ್ ಆಯ್ಕೆ ಆರ್​ಆರ್ ನಾಯಕ ಸ್ಟಿವ್ ಸ್ಮಿತ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಆದರೆ ಸ್ವತಃ ಸ್ಮಿತ್​ 5 ರನ್​ಗಳಿಸಿ 3ನೇ ಓವರ್​ನಲ್ಲಿ ಉದಾನಗೆ ವಿಕೆಟ್​ ಒಪ್ಪಿಸಿದರು. ಇವರನ ಬೆನ್ನಲ್ಲೇ 12 ಎಸೆತಗಳಲ್ಲಿ 22 ರನ್​ಗಳಿಸಿದ್ದ ಬಟ್ಲರ್​ ಸೈನಿಗೂ, 4 ರನ್​ಗಳಿಸಿದ ಸಂಜು ಸಾಮ್ಸನ್​ ಚಹಾಲ್​ಗೆ ವಿಕೆಟ್​ ಒಪ್ಪಿಸಿದರು.

ಆದರೆ ನಾಲ್ಕನೇ ವಿಕೆಟ್​ಗೆ ಒಂದಾದ ರಅಬಿನ್ ಉತ್ತಪ್ಪ ಹಾಗೂಯುವ ಬ್ಯಾಟ್ಸ್​ಮನ್​ ಮಹಿಪಾಲ್ ಲಾಮ್ರರ್​ 39 ರನ್​ಗಳ ಜೊತೆಯಾಟ ನಡೆಸಿ ಚೇತರಿಕೆ ನೀಡಿದರು. ರನ್​ಗಳಿಸಲು ಪರದಾಡಿದ ಉತ್ತಪ್ಪ 22 ಎಸೆತಗಳಲ್ಲಿ 17 ರನ್​ಗಳಿಸಿ ಚಹಾಲ್​ಗೆ 2ನೇ ಬಲಿಯಾದರು.

ಸ್ಪೋಟಕ ಬ್ಯಾಟಿಂಗ್ ಪ್ರದರ್ಶನ ತೋರಿದ ಯುವ ಬ್ಯಾಟ್ಸ್​ಮನ್​ ಲಾಮ್ರರ್​ 39 ಎಸೆಗಳಲ್ಲಿ 3 ಸಿಕ್ಸರ್​ ಹಾಗೂ ಒಂದು ಬೌಂಡರಿ ಸಹಿತ 47 ರನ್​ಗಳಿಸಿ ತಂಡದ ಮೊತ್ತವನ್ನು 100 ಗಡಿದಾಟಿಸಿ ಚಹಾಲ್​ ಬೌಲಿಂಗ್​ನಲ್ಲಿ ಪಡಿಕ್ಕಲ್ ಹಿಡಿದ ಅದ್ಭುತ ಕ್ಯಾಚ್​ಗೆ ಬಲಿಯಾದರು. ನಂತರ ಬಂದ ರಿಯಾನ್ ಪರಾಗ್ 18 ಎಸೆತಳನ್ನೆದುರಿಸಿ 16 ರನ್​ಗಳಿಸಿ ಔಟಾದರು.

ಕೊನೆಯ ಓವರ್​ಗಳಲ್ಲಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದ ತೆವಾಟಿಯಾ 12 ಎಸೆತಗಳಲ್ಲಿ 24 ಹಾಗೂ ಆರ್ಚರ್​ 10 ಎಸೆತಗಳಲ್ಲಿ 16ರನ್​ಗಳಿಸಿ 150ರ ಗಡಿದಾಟಿಸಿದರು.

ಯಜುವೇಂದ್ರ ಚಹಾಲ್​ 24ಕ್ಕೆ 3, ಉಡಾನ 41 ಕ್ಕೆ 2 ಹಾಗೂ ಸೈನಿ 37 ಕ್ಕೆ 1 ವಿಕೆಟ್ ಪಡೆದು ಮಿಂಚಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.