ETV Bharat / sports

ಐಪಿಎಲ್​ 2020 ಹರಾಜು: ಈ ಐದು ವಿದೇಶಿ ಆಲ್​ರೌಂಡರ್​ಗಳಿಗೆ ಸಿಗಲಿದೆಯಾ ಭಾರಿ ಮೊತ್ತ? - 13ನೇ ಐಪಿಎಲ್​ ಆವೃತ್ತಿ

ಡಿಸೆಂಬರ್​ 19ರಂದು 13ನೇ ಐಪಿಎಲ್ ಆವೃತ್ತಿಗೆ​ ಹರಾಜು ಪ್ರಕ್ರಿಯೆಗೆ ನಡೆಯಲಿದ್ದು ವಿದೇಶಿ ಆಲ್​ರೌಂಡರರ್​ಗಳಿಗೆ ಭಾರಿ ಮೊತ್ತಕ್ಕೆ ಸಿಗುವ ನಿರೀಕ್ಷೆಯಿದೆ.

IPL 2020 Auction best all rounders
IPL 2020 Auction best all rounders
author img

By

Published : Dec 18, 2019, 1:54 PM IST

ಕೋಲ್ಕತ್ತಾ: ಬಹುನಿರೀಕ್ಷಿತ 13ನೇ ಐಪಿಎಲ್​ ಹರಾಜು ಪ್ರಕ್ರಿಯೆಗೆ ಇನ್ನೊಂದಿನ ಬಾಕಿಯಿದ್ದು, ಈಗಾಗಲೆ ಟಿ20 ಕ್ರಿಕೆಟ್​ನಲ್ಲಿ ಭಾರಿ ಸದ್ದು ಮಾಡಿರುವ ವಿದೇಶಿ ಆಲ್​ರೌಂಡರರ್​ಗಳು ಭಾರಿ ಮೊತ್ತಕ್ಕೆ ಬಿಕರಿಯಾಗುವ ನಿರೀಕ್ಷೆಯಿದೆ.

ಬೆನ್​ ಕಟಿಂಗ್

ಆಸ್ಟ್ರೇಲಿಯಾ ತಂಡದಲ್ಲಿರುವ ಬೆನ್​ಕಟಿಂಗ್​ ಕಳೆದ ಸೀಸನ್​ನಲ್ಲಿ ಮುಂಬೈ ತಂಡದಲ್ಲಿ ಆಡಿದ್ದರು. ಆದರೆ ಅವರು ಹೇಳಿಕೊಳ್ಳುವಂತಹ ಪ್ರದರ್ಶನ ತೋರದ ಕಾರಣ ಅವರನ್ನು ಮುಂಬೈ ಪ್ರಾಂಚೈಸಿ ತಂಡದಿಂದ ಕೈಬಿಟ್ಟಿದೆ.

ಆದರೆ 32 ವರ್ಷದ ಕಟಿಂಗ್​ ಪಾಕಿಸ್ತಾನ ಸೂಪರ್​ ಲೀಗ್​ನಲ್ಲಿ ಉತ್ತಮ ಪ್ರದರ್ಶನ ತೋರಿದ್ದರು. ಟಿ10 ಲೀಗ್​ನಲ್ಲೂ ಬ್ಯಾಟಿಂಗ್​ ಹಾಗೂ ಬೌಲಿಂಗ್​ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು. ಬೌಲಿಂಗ್​ ಜೊತೆಗೆ ಕೆಳ ಕ್ರಮಾಂಕದಲ್ಲಿ ಸ್ಫೋಟಕ ಬ್ಯಾಟಿಂಗ್​ ಪ್ರದರ್ಶನ ನೀಡುವ ಸಾಮರ್ಥ್ಯವಿರುವುದರಿಂದ ಬೆನ್ ​ಕಟಿಂಗ್​ ಈ ಐಪಿಎಲ್​ನಲ್ಲಿ ಉತ್ತಮ ಬೆಲೆ ಪಡೆಯಲಿದ್ದಾರೆ.

ಸಾಮ್​ ಕರ್ರನ್​

ಇಂಗ್ಲೆಂಡ್ ತಂಡದ ಉದಯೋನ್ಮುಖ ಆಲ್​ರೌಂಡರ್ ಸ್ಯಾಮ್​ ಕರ್ರನ್​ ತಮ್ಮ​ ಮೊದಲ ಐಪಿಎಲ್​ ಸೀಸ್​ನನಲ್ಲೇ 7.2 ಕೋಟಿಗೆ ಹರಾಜಾಗುವ ಮೂಲಕ ಎಲ್ಲರ ಹುಬ್ಬೇರಿಸಿದ್ದರು. ಅದೇ ರೀತಿ ಹ್ಯಾಟ್ರಿಕ್​ ವಿಕೆಟ್​ ಪಡೆದು ಮಿಂಚಿದ್ದರು. ಆದರೆ 7.2 ಕೋಟಿ ದುಬಾರಿಯಾಗಿದ್ದರಿಂದ ಕಿಂಗ್ಸ್​ ಇಲೆವೆನ್​ ಪಂಜಾಬ್​ ಅವರನ್ನು ಬಿಟ್ಟುಕೊಟ್ಟಿದೆ. ಕರ್ರನ್​ ಕೆಳಕ್ರಮಾಂಕದಲ್ಲಿ ಬ್ಯಾಟಿಂಗ್​ ನಡೆಸುವ ಸಾಮರ್ಥ್ಯವಿರುವುದರಿಂದ ಪ್ರಾಂಚೈಸಿಗಳು ಇವರ ಮೇಲೆ ಕಣ್ಣಿಟ್ಟಿದ್ದಾರೆ.

ಜೇಮ್ಸ್​ ನಿಶಾಮ್​

ಕಳೆದ ಸೀಸನ್​ನಲ್ಲಿ ಅನ್​ಸೋಲ್ಡ್​ ಆಗಿದ್ದ ನ್ಯೂಜಿಲ್ಯಾಂಡ್​ನ ಜೇಮ್ಸ್​ ನಿಶಾಮ್​ ಈ ಬಾರಿ ವಿಶ್ವಕಪ್​ನಲ್ಲಿ ಕಿವೀಸ್​ ಪರ ಉತ್ತಮ ಬ್ಯಾಡಿಂಗ್​ ಹಾಗೂ ಬೌಲಿಂಗ್​ ಪ್ರದರ್ಶನ ನೀಡಿದ್ದರು. ಅವರು ವಿಶ್ವಕಪ್​ನಲ್ಲಿ 232 ರನ್​ ಹಾಗೂ15 ವಿಕೆಟ್​ ಪಡೆದಿದ್ದರು. ಈಗಾಗಲೆ ಗಾಯಗೊಂಡು ರಾಷ್ಟ್ರೀಯ ತಂಡಗಳಿಂದ ಹೊರಬಿದ್ದಿರುವ ಹಾರ್ದಿಕ್​ ಪಾಂಡ್ಯ ಹಾಗೂ ಆ್ಯಂಡ್ರ್ಯೂ ರಸೆಲ್​ ಗಾಯದಿಂದ ಚೇತರಿಸಿಕೊಳ್ಳದಿದ್ದರೆ ನಿಶಾಮ್ ಅನ್ನು ಕೆಕೆಆರ್​ ಅಥವಾ ಮುಂಬೈ ಖರೀದಿಸುವ ನಿರೀಕ್ಷೆಯಿದೆ.​

ಕ್ರಿಸ್​ ಮೋರಿಸ್​

ದಕ್ಷಿಣ ಆಫ್ರಿಕಾ ತಂಡ ಆಲ್​ರೌಂಡರ್​ ಕ್ರಿಸ್​ ಮೋರಿಸ್​ 7.1 ಕೋಟಿ ಪಡೆದು ಪಡೆದಿದ್ದರು. ಬೌಲಿಂಗ್​ನಲ್ಲಿ 13 ವಿಕೆಟ್ ಪಡೆದಿದ್ದ ಅವರು ಗಳಿಸಿದ್ದ ಕೇವಲ 32 ರನ್​ ಮಾತ್ರ ಹಾಗಾಗಿ ಅವರನ್ನು ಡೆಲ್ಲಿಕ್ಯಾಪಿಟಲ್​ ತಂಡದಿಂದ ಕೈಬಿಟ್ಟಿದೆ. ಆದರೆ ಉತ್ತಮ ಬೌಲಿಂಗ್​ ಹಾಗೂ ಬ್ಯಾಟಿಂಗ್ ಮಾಡುವ ಸಾಮರ್ಥ್ಯ ವಿರುವ ಅವರಿಗೆ ಈ ಬಾರಿಯ ಐಪಿಎಲ್​ನಲ್ಲಿ ಭಾರಿ ಬೇಡಿಕೆ ಸಿಗುವ ನಿರೀಕ್ಷೆಯಿದೆ. ಅಲ್ಲದೆ ಡೆಲ್ಲಿ ಕ್ಯಾಪಿಟಲ್​ ಮತ್ತೆ ಮೋರಿಸ್​ಗಾಗಿ ಬಿಡ್​ ಮಾಡುವ ನಿರೀಕ್ಷೆಯಿದೆ.

ಕ್ರಿಸ್​ ಜೋರ್ಡಾನ್​

ಇಂಗ್ಲೆಂಡ್ ಟಿ20 ತಂಡದ ಖಾಯಂ ಸದಸ್ಯನಾಗಿರುವ ಕ್ರಿಸ್ ಜೋರ್ಡಾನ್​ ಕಳೆದ ಮೂರು ವರ್ಷಗಳಿಂದ ರಾಷ್ಟ್ರೀಯ ತಂಡದ ಪರ ಉತ್ತಮ ಪ್ರದರ್ಶನ ತೋರುತ್ತಿದ್ದಾರೆ. ಕಳೆದ ಬಾರಿ ಇವರನ್ನು ಯಾವುದೇ ಪ್ರಾಂಚೈಸಿ ಕೊಳ್ಳಲು ಮುಂದೆ ಬಂದಿರಲಿಲ್ಲ. ಆದರೆ ಈ ಬಾರಿ ಜೋರ್ಡಾನ್​ಗೆ ಉತ್ತಮ ಮೊತ್ತ ಸಿಗುವ ನಿರೀಕ್ಷೆಯಿದೆ.

ಇವರಲ್ಲದೆ ಮಿಚೆಲ್​ ಮಾರ್ಷ್​, ಡೇವಿಡ್​ ವಿಲ್ಲೆ, ತಿಸರಾ ಪರೆರಾ, ಮಾರ್ಕಸ್​ ಸ್ಟೋಯ್ನಿಸ್​, ಕಾಲಿನ್​ ಗ್ರಾಂಡ್​ಹೋಮ್​, ಕೋರಿ ಆ್ಯಂಡರ್ಸನ್​, ಡೇವಿಡ್​ ವೈಸ್​ ಆಲ್​ರೌಂಡರ್​ ಪಟ್ಟಿಯಲ್ಲಿದ್ದಾರೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.