ETV Bharat / sports

ಐಪಿಎಲ್​ನ ವೇಗದ ಎಸೆತದ ವೀರ ಆ್ಯನ್ರಿಚ್ ನಾರ್ಟ್ಜ್​ ಮುಂದಿನ ಗುರಿ ಅಖ್ತರ್​ ದಾಖಲೆ ಮುರಿಯುವುದಂತೆ!

author img

By

Published : Oct 17, 2020, 10:02 PM IST

ನಾರ್ಟ್ಜ್​ 155.21 ಮತ್ತು154. 74 ರ ವೇಗದಲ್ಲಿ ಬೌಲಿಂಗ್​ ಮಾಡುವ ಮೂಲಕ ಐಪಿಎಲ್​ನಲ್ಲಿ ಟಾಪ್​ ವೇಗದ ಎಸೆತಗಳ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ಇದೀಗ ಪಾಕಿಸ್ತಾನದ ಶೋಯಬ್ ಅಖ್ತರ್​ ದಾಖಲೆಯನ್ನು ಮುರಿಯುವ ಆಶಯ ವ್ಯಕ್ತಪಡಿಸಿದ್ದಾರೆ.

ಆ್ಯನ್ರಿಚ್ ನಾರ್ಟ್ಜ್
ಆ್ಯನ್ರಿಚ್ ನಾರ್ಟ್ಜ್

ಶಾರ್ಜಾ: ಐಪಿಎಲ್​ನಲ್ಲಿ 156.22 km/h ವೇಗದಲ್ಲಿ ಬೌಲಿಂಗ್ ಮಾಡುವ ಮೂಲಕ ದಾಖಲೆ ಬರೆದಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿರುವ ದಕ್ಷಿಣ ಆಫ್ರಿಕಾದ ವೇಗಿ ಆ್ಯನ್ರಿಚ್​ ನಾರ್ಟ್ಜ್ ಪಾಕಿಸ್ತಾನದ ಅಖ್ತರ್​ ಹೆಸರಿನಲ್ಲಿರುವ ದಾಖಲೆ ಮೇಲೆ ಕಣ್ಣಿಟ್ಟಿದ್ದಾರೆ.

ನಾರ್ಟ್ಜ್​ 155.21 ಮತ್ತು154. 74 ರ ವೇಗದಲ್ಲಿ ಬೌಲಿಂಗ್​ ಮಾಡುವ ಮೂಲಕ ಐಪಿಎಲ್​ನಲ್ಲಿ ಟಾಪ್​ ವೇಗದ ಎಸೆತಗಳ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ಇದೀಗ ಪಾಕಿಸ್ತಾನದ ಶೋಯಬ್ ಅಖ್ತರ್​ ದಾಖಲೆಯನ್ನು ಮುರಿಯುವ ಆಶಯ ವ್ಯಕ್ತಪಡಿಸಿದ್ದಾರೆ.

ನಾರ್ಟ್ಜ್​ ವೇಗದ ಎಸೆತಗಳು
ನಾರ್ಟ್ಜ್​ ವೇಗದ ಎಸೆತಗಳು

ಶೋಯಬ್ ಅಖ್ತರ್​ ಪ್ರಸ್ತುತ ವಿಶ್ವ ಕ್ರಿಕೆಟ್​ನಲ್ಲಿ ಅತ್ಯಂತ ವೇಗದ ಎಸೆತವನ್ನು ಮಾಡಿರುವ ದಾಖಲೆ ಹೊಂದಿದ್ದಾರೆ. ಅವರು 2003 ರ ವಿಶ್ವಕಪ್​ನಲ್ಲಿ ಇಂಗ್ಲೆಂಡ್​ ವಿರುದ್ಧ 161.3 km/h ವೇಗದಲ್ಲಿ ಬೌಲಿಂಗ್ ಮಾಡಿದ್ದರು.

" ಆಶಾದಾಯಕವಾಗಿ ಇದು(ವೇಗದ ಎಸೆತದ ಗೌರವ) ನನಗೆ ಸಿಕ್ಕಿದೆ. ಮತ್ತು ಖಂಡಿತವಾಗಿಯೂ ನಾನು ಅಖ್ತರ್​ ದಾಖಲೆಯನ್ನು ಮುರಿಯಲು ಬಯಸುತ್ತೇನೆ" ಎಂದು ಡೆಲ್ಲಿ ತಂಡದ ಸಹ ಆಟಗಾರ ಆರ್​ ಅಶ್ವಿನ್​ರ ಯೂಟ್ಯೂಬ್ ಚಾನೆಲ್​ನಲ್ಲಿ ಮಾತನಾಡುವ ವೇಳೆ ತಿಳಿಸಿದ್ದಾರೆ.

ಬಹುಶಃ ಉತ್ತಮ ವಿಕೆಟ್​, ಸಾಕಷ್ಟು ಬಲ ಮತ್ತು ಉತ್ತಮ ಸಂಯೋಜನೆ ಸಿಕ್ಕರೆ ನಾನು ಐಪಿಎಲ್​ನಲ್ಲೇ ಅದನ್ನು ಮಾಡುತ್ತೇನೆ ಅಥವಾ ಭವಿಷ್ಯದಲ್ಲಿ ಮಾಡಬಹುದು ಎಂದು ನಾರ್ಟ್ಜ್ ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.