ETV Bharat / sports

ನೋ ಚೀಯರ್​ ಗರ್ಲ್ಸ್​​, ಉದ್ಘಾಟನಾ ಸಮಾರಂಭವಿಲ್ಲ... ಹಿಂದಿನ &​ ಈ ಐಪಿಎಲ್ ನಡುವಿನ 10 ವಿಭಿನ್ನ ವಿಷಯ! - ಬಿಸಿಸಿಐ ಪ್ರೋಟೋಕಾಲ್​ಗಳಳು

ಈ ಹಿಂದಿನ ಎಲ್ಲ ಐಪಿಎಲ್​ ಆವೃತ್ತಿಗಳಿಗೂ ಮತ್ತು ಈ ವರ್ಷದ ಐಪಿಎಲ್​ಗೂ ಬಹಳ ವ್ಯತ್ಯಾಸವಿರಲಿದೆ. ಸಂಪೂರ್ಣ ಐಪಿಎಲ್​ ವಿದೇಶದಲ್ಲಿ ನಡೆಯಲಿದೆ. ಭಾರತದಲ್ಲಿ ಕೋವಿಡ್​-19 ಪ್ರಕರಣಗಳು ಹೆಚ್ಚಾದ ಕಾರಣ, ಶ್ರೀಮಂತ ಲೀಗ್‌ನ 13 ನೇ ಆವೃತ್ತಿಯನ್ನು ಯುನೈಟೆಡ್ ಅರಬ್ ಎಮಿರೇಟ್ಸ್‌ಗೆ ವರ್ಗಾಯಿಸಲಾಗಿದೆ. ಇದು ಅಬುಧಾಬಿ, ಶಾರ್ಜಾ ಮತ್ತು ದುಬೈನಲ್ಲಿ ನಡೆಯಲಿದೆ.

ಐಪಿಎಲ್​ 2020
ಐಪಿಎಲ್​ 2020
author img

By

Published : Sep 17, 2020, 11:49 PM IST

Updated : Sep 18, 2020, 6:59 AM IST

ಹೈದರಾಬಾದ್​: 2020ರ ಅತಿದೊಡ್ಡ ಕ್ರಿಕೆಟ್ ಇವೆಂಟ್​ ಆಗಿರುವ ಐಪಿಎಲ್​ ಸೆಪ್ಟೆಂಬರ್​ 19ರಿಂದ ಆರಂಭಗೊಳ್ಳುತ್ತಿದೆ. ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್​ ಮುಂಬೈ ಇಂಡಿಯನ್ಸ್​ ತಂಡ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್​ ವಿರುದ್ಧ ಕಣಕ್ಕಿಳಿಯುತ್ತಿದೆ.

ಇನ್ನು ಪ್ರತಿವರ್ಷ ವೈಭವ ಪೂರಿತ ಕಾರ್ಯಕ್ರಮಗಳ ಮೂಲಕ ಭರ್ಜರಿಯಾಗಿ ಉದ್ಘಾಟನೆಯಾಗುತ್ತಿದ್ದ ಶ್ರೀಮಂತ ಕ್ರಿಕೆಟ್​ ಲೀಗ್ ಈ ಬಾರಿ ಪ್ರೇಕಕ್ಷರಿಲ್ಲದ ಖಾಲಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಕೋವಿಡ್​ ಸಾಂಕ್ರಾಮಿಕ ವಿಶ್ವವನ್ನು ನಡುಗಿಸುತ್ತಿರುವುದಿರಂದ ಮುನ್ನಚ್ಚೆರಿಕೆ ಕ್ರಮವಾಗಿ ಹಲವಾರು ಪ್ರೋಟೋಕಾಲ್​ಗಳನ್ನು ರಚಿಸಿಕೊಂಡು ಬಯೋ ಸೆಕ್ಯೂರ್​ ವಾತಾವರಣದಲ್ಲಿ ಬಿಸಿಸಿಐ ಟೂರ್ನಿಯನ್ನು ಆಯೋಜಿಸುತ್ತಿದೆ. ಈ ಟೂರ್ನಿಯ ವೇಳೆ ಕೋವಿಡ್​ ಟೆಸ್ಟ್​ಗಾಗಿಯೇ ಬರೋಬ್ಬರಿ 10 ಕೋಟಿ ರೂ.ಗಳನ್ನು ಬಿಸಿಸಿಐ ವ್ಯಯಮಾಡುತ್ತಿದೆ.

ಹಿಂದಿನ 12 ಐಪಿಎಲ್​ ಆವೃತ್ತಿಗಳಿಗೂ ಮತ್ತು ಈ ವರ್ಷದ ಐಪಿಎಲ್ ಬಹಳ ವ್ಯತ್ಯಾಸವಿರಲಿದೆ. ಸಂಪೂರ್ಣ ಐಪಿಎಲ್​ ವಿದೇಶದಲ್ಲಿ ನಡೆಯಲಿದೆ. ಭಾರತದಲ್ಲಿ ಕೋವಿಡ್​-19 ಪ್ರಕರಣಗಳು ಹೆಚ್ಚಾದ ಕಾರಣ, ಶ್ರೀಮಂತ ಲೀಗ್‌ನ 13 ನೇ ಆವೃತ್ತಿಯನ್ನು ಯುನೈಟೆಡ್ ಅರಬ್ ಎಮಿರೇಟ್ಸ್‌ಗೆ ವರ್ಗಾಯಿಸಲಾಗಿದೆ. ಇದು ಅಬುಧಾಬಿ, ಶಾರ್ಜಾ ಮತ್ತು ದುಬೈನಲ್ಲಿ ನಡೆಯಲಿದೆ.

ಪ್ರೇಕ್ಷಕರಿಲ್ಲದ ಪಂದ್ಯ

ಮುಂದೂಡಲ್ಪಟ್ಟಿದ್ದ ಐಪಿಎಲ್ ಪ್ರತಿವರ್ಷದಂತೆ ಅದ್ದೂರಿಯಾಗಿ ಉದ್ಘಾಟನೆಯಿಲ್ಲದೆ ಶನಿವಾರ ಪ್ರಾರಂಭವಾಗುತ್ತಿದೆ. ಚುಟುಕು ಕ್ರಿಕೆಟ್​ ತನ್ನ ಪ್ರೀತಿಯ ಅಭಿಮಾನಿಗಳಿಲ್ಲದೆ ಟಿ20 ಲೀಗ್​ ಇತಿಹಾಸದಲ್ಲಿ ಮೊದಲ ಬಾರಿಗೆ ಖಾಲಿ ಕ್ರೀಡಾಂಗಣದಲ್ಲಿ ನಡೆಯಲಿದೆ.

ಸಮಯದಲ್ಲಿ ಬದಲಾವಣೆ

ಹಲವು ನಿಯಾಮವಳಿಗಳ ಮಧ್ಯೆ ನಡೆಯುತ್ತಿರುವ ಐಪಿಎಲ್​ನಲ್ಲಿ ಈ ವರ್ಷ ರಾತ್ರಿ ಪಂದ್ಯಗಳಳು 8 ಗಂಟೆಗೆ ಪ್ರಾರಂಭವಾಗುವ ಬದಲು 7:30 ಕ್ಕೆ ಮಧ್ಯಾಹ್ನದ ಪಂದ್ಯಗಳು 4 ಗಂಟೆಗೆ ಬದಲಾಗಿ 3: 30 ಕ್ಕೆ ಪ್ರಾರಂಭವಾಗುತ್ತಿದೆ.

ಜೀವಾ ಸುರಕ್ಷಿತ ವಲಯ(ಬಯೋ ಸೆಕ್ಯೂರ್ ಬಬಲ್​)

ಯುಎಇಗೆ ಬಂದಿಳಿದಾಗಿನಿಂದಲೂ ಎಲ್ಲಾ ಎಂಟು ತಂಡಗಳು ಜೈವಿಕ ಸುರಕ್ಷಿತಾ ವಲಯದಲ್ಲಿವೆ. ಯುಎಇಗೆ ತೆರಳುವ ಮೊದಲು ಎಲ್ಲಾ ಆಟಗಾರರು ಮತ್ತು ಸಹಾಯಕ ಸಿಬ್ಬಂದಿ ಅನೇಕ ಬಾರಿ ಕೋವಿಡ್​ ಟೆಸ್ಟ್​ಗೆ ಒಳಗಾಗಿದ್ದರು. ಅಲ್ಲಿಗೆ ತೆರಳಿದ ನಂತರವೂ 6 ದಿನಗಳ ಕ್ವಾರಂಟೈನ್​ ಜೊತೆಗೆ, 3 ಬಾರಿ ಕೋವಿಡ್​ ಪರೀಕ್ಷೆಗೆ ಒಳಗಾಗಿ ನಂತರ ತರಬೇತಿ ಆರಂಭಿಸಿದ್ದವು. ಇಷ್ಟಲ್ಲದೆ ಟೂರ್ನಿ ಮುಗಿಯುವವರೆಗೂ ಇದೇ ಸುರಕ್ಷಿತ ವಲಯದಲ್ಲಿ ಎಲ್ಲಾ ಆಟಗಾರರು ಮತ್ತು ಸಿಬ್ಬಂದಿಗಳು ಇರಬೇಕಾಗಿದೆ.

ಸಾಮಾಜಿಕ ಅಂತರ

ಟೂರ್ನಿ ಆರಂಭಕ್ಕೂ ಮುನ್ನವೇ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಎಲ್ಲಾ ಎಂಟು ತಂಡಗಳು ಅನುಸರಿಸಬೇಕಾದ ಸುರಕ್ಷತಾ ಪ್ರೋಟೋಕಾಲ್‌ಗಳ ಪಟ್ಟಿ ನೀಡಿದೆ. ಈ ಪ್ರೋಟೋಕಾಲ್‌ಗಳು ಯುಎಇಗೆ ಚಾರ್ಟೆಡ್​ ವಿಮಾನ ಹತ್ತಿದ ದಿನದಿಂದ ಟೂರ್ನಮೆಂಟ್​ನ ಕೊನೆಯ ದಿನದ ಕೊನೆಯ ಎಸೆತದವರೆಗೂ ಅನ್ವಯವಾಗಿರಲಿದೆ.

ಈ ಪ್ರೋಟೋಕಾಲ್​ಗಳ ಪ್ರಕಾರ ಒಬ್ಬ ಆಟಗಾರ ಮತ್ತೊಬ್ಬ ಆಟಗಾರನ ಹೋಟೆಲ್​ ಕೋಣೆಗೆ ಭೇಟಿಯಾಗುವ ಆಗಿಲ್ಲ. ಅವರ ಪಂದ್ಯದ ಬಗ್ಗೆ ಚರ್ಚಿಸಲು ಸೇರುವ ಸಂದರ್ಭದಲ್ಲೂ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಬೇಕಾಗಿದೆ.

ದೀರ್ಘವಾದ ಐಪಿಎಲ್​ ಆವೃತ್ತಿ

ಮುಂಬರುವ ನಗದು ಸಮೃದ್ಧ ಲೀಗ್​ ಸೆಪ್ಟೆಂಬರ್​ 19ರಿಂದ ನವೆಂಬರ್​ 10ರವರೆಗೆ 53 ದಿನಗಳ ಕಾಲ ನಡೆಯಲಿದೆ. ಲೀಗ್​ನಲ್ಲಿ ಕೇವಲ 10 ದಿನ ಮಾತ್ರ 2 ಪಂದ್ಯಗಳಿರುತ್ತವೆ. ಇನ್ನು 40 ದಿನಗಳು ಕೇವಲ ದಿನಕ್ಕೊಂದು ಪಂದ್ಯ ಮಾತ್ರ ನಡೆಯಲಿದೆ.

ಚಿಯರ್​ ಲೀಡರ್ಸ್​
ಚಿಯರ್​ ಲೀಡರ್ಸ್​

ಚಿಯರ್​ ಲೀಡರ್ಸ್​ ಅಲಭ್ಯತೆ

ಈ ಬಾರಿ ವಿಶ್ವದ ಶ್ರೀಮಂತ ಟಿ 20 ಲೀಗ್‌ಗೆ ಯಾವುದೇ ರೀತಿಯ ಉದ್ಘಾಟನಾ ಸಮಾರಂಭ ಇರುವುದಿಲ್ಲ. ಮತ್ತು ಪಂದ್ಯದ ನಡುವೆ ಬೌಂಡರಿ- ಸಿಕ್ಸರ್​ ಹಾಗೂ ವಿಕೆಟ್​ ಬಿದ್ದಾಗ ನೃತ್ಯ ಮಾಡುತ್ತಿದ್ದ ಚಿಯರ್​ ಲೀಡರ್​ಗಳು ಇರುವುದಿಲ್ಲ. ವರದಿಗಳ ಪ್ರಕಾರ ಟೂರ್ನಿಯ ಮಧ್ಯಂತರದಲ್ಲಿ ಕೆಲವು ವೀಕ್ಷಕರಿಗೆ ಅವಕಾಶ ನೀಡಬಹುದು ಎನ್ನಲಾಗಿದೆ. ಇದರ ಬಗ್ಗೆ ಖಚಿತ ಮಾಹಿತಿಯಿಲ್ಲ.

ವರ್ಚುವಲ್​ ಕಾಮೆಂಟರಿ

ಟಿವಿ ಮಾಧ್ಯಮಗಳಲ್ಲಿನ ನೇರಪ್ರಸಾರದ ವೇಳೆ "ವರ್ಚುವಲ್ ಕಾಮೆಂಟರಿ"ಯನ್ನು ಪರಿಚಯಿಸಲು ಐಪಿಎಲ್ ಪ್ರಸಾರಕರು ಆಲೋಚಿಸುತ್ತಿದ್ದಾರೆ. ಇದರನ್ವಯ ಕಾಮೆಂಟೇಟರ್​ಗಳು ತಮ್ಮ ಮನೆಯಲ್ಲಿ ಅಥವಾ ಸ್ಟುಡಿಯೋಗಳಲ್ಲಿ ಕುಳಿತು ಯುಎಇನಲ್ಲಿ ನಡೆಯುವ ಪಂದ್ಯಗಳ ಕಾಮೆಂಟರಿ ನೀಡಲಿದ್ದಾರೆ. ಈಗಾಗಲೆ ಇರ್ಫಾನ್​ ಪಠಾಣ್ ಇದರ ಪ್ರಯೋಗದಲ್ಲಿ ಯಶಸ್ವಿಯಾಗಿದ್ದಾರೆ.

ಹೊಸ ಟೈಟಲ್​ ಸ್ಪಾನ್ಸರ್​ಶಿಪ್​

5 ವರ್ಷಗಳ ಟೈಟಲ್​ ಪ್ರಾಯೋಜಕತ್ವದ ಒಪ್ಪಂದದಲ್ಲಿದ್ದ ಚೀನಾ ಮೂಲದ ವಿವೋ ಮೊಬೈಲ್ ಕಂಪನಿಯ ಬದಲಾಗಿ ಫ್ಯಾಂಟಸಿ ಗೇಮ್​ ಕಂಪನಿಯಾದ ಡ್ರೀಮ್​ ಇಲೆವೆನ್​ 13ನೇ ಆವೃತ್ತಿಯ ಟೈಟಲ್ ಪ್ರಾಯೋಜಕತ್ವ ಪಡೆದುಕೊಂಡಿದೆ.

ಸಲೈವಾ ಬ್ಯಾನ್​

ಕೋವಿಡ್​ 19 ಸ್ಥಗಿತದ ನಂತರ ಕ್ರಿಕೆಟ್​ ಪುನರಾರಂಭಗೊಳ್ಳುವ ಮೊದಲು, ಐಸಿಸಿ ಆಟಗಾರರಿಗೆ ಕೆಲವು ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿತ್ತು. ಇದರ ಪ್ರಕಾರ ಬೌಲರ್​ಗಳು ಚೆಂಡಿನ ಹೊಳಪಿಗಾಗಿ ಸಲೈವಾ(ಲಾಲಾರಸ ಅಥವಾ ಎಂಜಲು) ಹಚ್ಚುವುದನ್ನು ನಿಷೇಧಿಸಿದೆ. ಇದೇ ನಿಯಮವನ್ನು ಐಪಿಎಲ್​ನಲ್ಲೂ ಜಾರಿಗೆ ತರಲಾಗಿದೆ.

Last Updated : Sep 18, 2020, 6:59 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.