ಚೆನ್ನೈ: ಮಿಲಿಯನ್ ಡಾಲರ್ ಟೂರ್ನಿ ಐಪಿಎಲ್ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದ್ದು ಶನಿವಾರ ಸಂಜೆ ಆರು ಗಂಟೆಗೆ ಚೆನ್ನೈನ ಎಂ.ಎ.ಚಿದಂಬರಂ ಸ್ಟೇಡಿಯಂನಲ್ಲಿ ಬಲಿಷ್ಠ ತಂಡಗಳಾದ ಆರ್ಸಿಬಿ ಹಾಗೂ ಸಿಎಸ್ಕೆ ಸೆಣಸಾಡಲಿವೆ.
ಈಗಾಗಲೇ ಐಪಿಎಲ್ ಟ್ರೋಫಿಯನ್ನು ಹಲವು ಬಾರಿ ಮುತ್ತಿಕ್ಕಿರುವ ಸಿಎಸ್ಕೆ ಹಾಗೂ ತಂಡ ಬಲಿಷ್ಠವಾಗಿದ್ದರೂ ಕೊನೇ ಕ್ಷಣದಲ್ಲಿ ಪ್ರಶಸ್ತಿಯನ್ನು ಮಿಸ್ ಮಾಡಿಕೊಳ್ಳುವ ಆರ್ಸಿಬಿ ತಂಡ ಈ ಆವೃತ್ತಿಯ ಟ್ರೋಫಿ ಗೆಲ್ಲುವ ಫೇವರೇಟ್ ತಂಡಗಳೆನಿಸಿಕೊಂಡಿವೆ.
The Challengers are off for the first #VIVOIPL 2019 match against CSK (2/2) #PlayBold pic.twitter.com/n5bn2d0q0J
— Royal Challengers (@RCBTweets) March 21, 2019 " class="align-text-top noRightClick twitterSection" data="
">The Challengers are off for the first #VIVOIPL 2019 match against CSK (2/2) #PlayBold pic.twitter.com/n5bn2d0q0J
— Royal Challengers (@RCBTweets) March 21, 2019The Challengers are off for the first #VIVOIPL 2019 match against CSK (2/2) #PlayBold pic.twitter.com/n5bn2d0q0J
— Royal Challengers (@RCBTweets) March 21, 2019
ಅಂಕಿ-ಅಂಶಗಳು ಹಾಗೂ ತವರು ನೆಲದ ಭರ್ಜರಿ ಬೆಂಬಲ ನಾಳಿನ ಪಂದ್ಯಕ್ಕೆ ಚೆನ್ನೈ ತಂಡಕ್ಕೆ ವರದಾನವಾಗಲಿದೆ. ಬಿಡ್ಡಿಂಗ್ನಲ್ಲಿ ಕೆಲ ಹೊಸ ಸೇರ್ಪಡೆಯಿಂದ ತಂಡವನ್ನು ಮತ್ತಷ್ಟು ಬಲಿಷ್ಠ ಮಾಡಿಕೊಂಡಿರುವ ಆರ್ಸಿಬಿ ಶನಿವಾರದ ಪಂದ್ಯದಲ್ಲಿ ಅಚ್ಚರಿಯ ಫಲಿತಾಂಶ ನೀಡುವ ಉತ್ಸಾಹದಲ್ಲಿದೆ.
ಚೆನ್ನೈ ತಂಡದಲ್ಲಿ ಫಾಫ್ ಡು ಪ್ಲೆಸಿಸ್, ಡ್ವೇನೆ ಬ್ರಾವೋ, ಶೇನ್ ವಾಟ್ಸನ್, ಡೇವಿಡ್ ವಿಲ್ಲಿ, ಸುರೇಶ್ ರೈನಾ, ರವೀಂದ್ರ ಜಡೇಜಾ ಹಾಗೂ ನಾಯಕ ಎಂ.ಎಸ್.ಧೋನಿ ಸ್ಟಾರ್ ಆಟಗಾರರಾಗಿದ್ದಾರೆ.
ಆರ್ಸಿಬಿ ತಂಡದಲ್ಲಿ ನಾಯಕ ವಿರಾಟ್ ಕೊಹ್ಲಿ, ಎಬಿಡಿ ವಿಲಿಯರ್ಸ್, ಶಿಮ್ರೋನ್ ಹೇಟ್ಮಯರ್, ಮೊಯೀನ್ ಅಲಿ, ನಥನ್ ಕೌಲ್ಟರ್ ನೀಲ್, ಯಜ್ವೇಂದ್ರ ಚಹಾಲ್, ಉಮೇಶ್ ಯಾದವ್ ಪ್ರಮುಖ ಆಟಗಾರರಾಗಿದ್ದಾರೆ.
#AnbuDen camp and the #Yellove scenes! #WhistlePodu #YelloveAgain 🦁💛 pic.twitter.com/zIxjWF5J8y
— Chennai Super Kings (@ChennaiIPL) March 21, 2019 " class="align-text-top noRightClick twitterSection" data="
">#AnbuDen camp and the #Yellove scenes! #WhistlePodu #YelloveAgain 🦁💛 pic.twitter.com/zIxjWF5J8y
— Chennai Super Kings (@ChennaiIPL) March 21, 2019#AnbuDen camp and the #Yellove scenes! #WhistlePodu #YelloveAgain 🦁💛 pic.twitter.com/zIxjWF5J8y
— Chennai Super Kings (@ChennaiIPL) March 21, 2019
ಮೇಲ್ನೋಟಕ್ಕೆ ಎರಡೂ ತಂಡಗಳು ಸಮತೋಲಿತವಾಗಿ ಕಂಡರೂ ಪ್ರಮುಖ ಪಂದ್ಯಗಳಲ್ಲಿ ಆರ್ಸಿಬಿ ಎಡವೋದೇ ಹೆಚ್ಚು. ಇದಕ್ಕೆ ಈ ಹಿಂದಿನ ಐಪಿಎಲ್ ಫಲಿತಾಂಶಗಳೇ ಸಾಕ್ಷಿ ಹೇಳುತ್ತವೆ. ಉಭಯ ತಂಡಗಳಲ್ಲೂ ಸ್ಟಾರ್ ಆಟಗಾರರಿದ್ದು ನಾಳಿನ ಪಂದ್ಯ ರೋಚಕತೆಯಿಂದ ಕೂಡಿರುವುದು ಪಕ್ಕಾ..!