ಮುಂಬೈ: ವಿಶ್ವಕಪ್‌ಗೂ ಮೊದಲೇ IPL ಕ್ರಿಕೆಟ್ ಹಂಗಾಮಾಗೆ ಕ್ಷಣಗಣನೆ ಶುರುವಾಗಿದೆ. ವರ್ಲ್ಡ್‌ಕಪ್ ಹತ್ತಿರದಲ್ಲಿರುವ ಕಾರಣಕ್ಕೆ ಯುವ ಹಾಗೂ ಅನುಭವಿ ಪ್ಲೇಯರ್ಸ್ ಐಪಿಎಲ್‌ನಿಂದ ದೂರ ಉಳಿದು ವಿಶ್ರಾಂತಿ ಪಡೆಯುತ್ತಿದ್ದಾರೆ. ಗ್ಲೆನ್ ಮ್ಯಾಕ್ಸ್‌ವೆಲ್ ಹಾಗೂ ಮಿಚೆಲ್ ಸ್ಟಾರ್ಕ್ IPL ಹರಾಜಿನಲ್ಲಿ ಪಾಲ್ಗೊಂಡಿರಲೇ ಇಲ್ಲ. ಅಷ್ಟೇ ಅಲ್ಲ, ಐವರು ಸ್ಟಾರ್ ಪ್ಲೇಯರ್ಸ್‌ಗೆ 12ನೇ ಆವೃತ್ತಿ ಐಪಿಎಲ್ ಟೂರ್ನಿ ಕೊನೆಯದಾಗಲಿದೆ.
1. ಹರ್ಭಜನ್‌ಸಿಂಗ್ :
2019ರ 12ನೇ ಆವೃತ್ತಿಗೆ CSK ಫ್ರಾಂಚೈಸಿ ಹರ್ಭಜನ್ ಸಿಂಗ್‌ರನ್ನ ಉಳಿಸಿಕೊಂಡಿರುವುದು ಬಹುತೇಕರಿಗೆ ಅಚ್ಚರಿ ತರಿಸಿದೆ. ಲೆಜೆಂಡ್ ಸ್ಪಿನ್ ಬೌಲರ್ ಹರ್ಭಜನ್ ಇತ್ತೀಚಿನ ಐಪಿಎಲ್ ಆವೃತ್ತಿಗಳಲ್ಲಿ ಪ್ರಭಾವಿ ಪ್ರದರ್ಶನ ನೀಡಿಲ್ಲ. ಅದೇ ಕಾರಣ ಬಹುತೇಕ ತಂಡ ಭಜ್ಜಿ ಕೈಬಿಟ್ಟಿದ್ದವು. ಭಜ್ಜಿಗಿಂತ ಉತ್ತಮ ಪ್ಲೇಯರ್ಸ್ ಆ್ಯಕ್ಷನ್‌ನಲ್ಲಿದ್ದರು. ಆದರೂ ಸಿಎಸ್‌ಕೆ ಪಂಜಾಬ್ ಪುತ್ತರ್ ಭಜ್ಜಿಗೆ ಚಾನ್ಸ್ ಕೊಟ್ಟಿದೆ. ಕೇದಾರ್ ಜಾಧವ್ ಗಾಯದ ಸಮಸ್ಯೆಯಿಂದಾಗಿ ಟರ್ಬನೇಟರ್ ಕಳೆದ ಸಾರಿ ಹೆಚ್ಚು ಐಪಿಎಲ್ ಪಂದ್ಯ ಆಡಿದ್ದರು. ಆದರೆ, ಈಗ ಆಲ್‌ರೌಂಡರ್ ಕೇದಾರ್ ಸಂಪೂರ್ಣ ಫಿಟ್. ಹಾಗಾಗಿ ಅಂತಿಮ 11ರಲ್ಲಿ ಭಜ್ಜಿ ಸ್ಥಾನ ಗಿಟ್ಟಿಸಿಕೊಳ್ತಾರಾ ಅನ್ನೋದು ಆಶ್ಚರ್ಯಕರವಾಗಿದೆ. IPLನಲ್ಲಿ ಹರ್ಭಜನ್ ಉತ್ತಮ ಪ್ರದರ್ಶನ ನೀಡಿದ್ದಾರೆ. ಆದರೆ, ಒಳ್ಳೆಯದಕ್ಕೂ ಕೊನೆ ಅನ್ನೋದಿರಲ್ಲವೇ. ಹಾಗಾಗಿ ಟರ್ಬನೇಟರ್ ಭಜ್ಜಿಗಿದು ಈ ಐಪಿಎಲ್ ಬಹುತೇಕ ಕೊನೆಯದ್ದು ಕೂಡಾ .
2. ಲಸಿಂತ್ ಮಾಲಿಂಗ :
ಯಾರ್ಕರ್ ಸ್ಪೆಷಲಿಸ್ಟ್ ಲಸಿತ್ ಮಲಿಂಗಾ IPL ಟೂರ್ನಿಗೆ ಮುಂಬೈ ಇಂಡಿಯನ್ಸ್ ಮತ್ತೆ ಆಯ್ಕೆ ಮಾಡಿರೋದು ಸರ್ಪ್ರೈಸ್. ಯಾಕಂದ್ರೇ, ಈವರೆಗಿನ IPLನಲ್ಲಿ ಒಳ್ಳೇ ಪರ್ಫಾಮೆನ್ಸ್ ನೀಡಿದ್ದರೂ ಲಂಕನ್ ಪ್ರೀಮಿಯರ್ ಲೀಗ್‌ನಲ್ಲಿ ಯಾವ ತಂಡಗಳೂ ಮಲಿಂಗಾ ಅವರನ್ನ ಆಯ್ದುಕೊಂಡಿರಲಿಲ್ಲ.ಮಲಿಂಗಾಮೂಲ ಬೆಲೆ ₹ 2 ಕೋಟಿಯಿತ್ತು. ಮುಸ್ತಾಫಿಜುರ್ ರೆಹಮಾನ್ ಆಯ್ದುಕೊಳ್ಳುವುದು ಮುಂಬೈ ಇಂಡಿಯನ್(MI) ಪ್ಲಾನ್ ಆಗಿತ್ತು. ಆದರೆ, ಅವರು 2018ರ ಹರಾಜಿನಲ್ಲಿ SLPL (ಶ್ರೀ ಲಂಕಾ ಪ್ರೀಮಿಯರ್ ಲೀಗ್) ನ ತಂಡಕ್ಕೇ ಸೇಲಾಗಿದ್ದರು. 2019ರ ವರ್ಲ್ಡ್‌ಕಪ್ ಬಳಿಕ ಮಾಲಿಂಗ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾಗುವ ರೂಮರ್ಸ್ ಇದೆ. ಹಾಗೇ IPLಗೂ ಗುಡ್‌ಬೈ ಹೇಳಿದರೂ ಅಚ್ಚರಿಯಿಲ್ಲ. 35 ವರ್ಷದ ಮಾಲಿಂಗ ಮುಂದಿನ IPL ಹರಾಜಿನಲ್ಲಿ ಬಿಕರಿಯಾಗದಿದ್ದರೇ, MI ಮತ್ತೊಬ್ಬ ಸುಲಭ ಬೆಲೆಗೆ ಸಿಗುವ ಯುವ ಪ್ಲೇಯರ್‌ಗೆ ಮಣೆ ಹಾಕಲಿದೆ. ಆಗ ರೆಕಾರ್ಡ್ ವಿಕೆಟ್ ಟೇಕರ್ ಮಾಲಿಂಗ MI ತಂಡದ ಮೆಂಟರ್ ಆಗಲಿದ್ದಾರೆ.
3. ಇಮ್ರಾನ್ ತಾಹಿರ್ :
ವರ್ಲ್ಡ್‌ಕಪ್ 2019ರ ಬಳಿ ಹೆಚ್ಚು ಟಿ-20 ಕ್ರಿಕೆಟ್ ಆಡುವುದಾಗಿ ಸೌಥ್ ಆಫ್ರಿಕಾದ ಇಮ್ರಾನ್ ತಾಹಿರ್ ಹೇಳಿಕೊಂಡಿದ್ದರು. ಈಗ IPLನಲ್ಲಿ ಆಡ್ತಿರುವುದು ಹೆಚ್ಚೇನಲ್ಲ. ಟಿ - 20 ಪಂದ್ಯ ದೇಶಕ್ಕಾಗಿ ಆಡುವುದಾಗಿ ಸೌಥ್ ಆಫ್ರಿಕಾ ಕ್ರಿಕೆಟ್ ಬೋರ್ಡ್ ಜತೆ ತಾಹಿರ್ ಒಪ್ಪಂದ ಮಾಡಿಕೊಂಡಿದ್ದಾರೆ. ತಾಹಿರ್ ಬ್ರಿಲಿಯಂಟ್ ಬೌಲರ್, ಯಾವುದೇ ತಂಡಕ್ಕಾದರೂ ಅವರು ಆಸ್ತಿ. ಕಳೆದ ವರ್ಷದ IPLನಲ್ಲಿ CSK ಪರ ಆರು ಪಂದ್ಯ ಆಡಿ ಆರು ವಿಕೆಟ್ ಕಿತ್ತಿದ್ದರು. 9.09 ಎಕಾನಮಿಯಲ್ಲಿ ಬೌಲ್ ಮಾಡಿ 22.26 ಸರಾಸರಿ ಹೊಂದಿದ್ದರು. ಈಗ ಸಿಎಸ್‌ಕೆ ಭವಿಷ್ಯದ ದೃಷ್ಟಿಯಿಂದ ಯುವ ಆಟಗಾರರಿಗೆ ಅವಕಾಶ ಕಲ್ಪಿಸಲು ಮುಂದಾಗಲಿದೆ. ಇದೇ ತಿಂಗಳಲ್ಲಿ ತಾಹಿರ್ 40ರ ಹರೆಯಕ್ಕೆ ಕಾಲಿಡಲಿದ್ದಾರೆ. 6ನೇ ಬಾರಿಗೆ IPL ಟೂರ್ನಿ ಆಡ್ತಿರುವ ತಾಹಿರ್‌ಗೆ 2020ರ ಹರಾಜಿಗೂ ಮೊದಲೇ ಮನೆಗೆ ಕಳುಹಿಸೋದು ಪಕ್ಕಾ.
4. ಶೇನ್ ವ್ಯಾಟ್ಸನ್ :
ಆಸೀಸ್ ಆಲ್‌ರೌಂಡರ್ ಶೇನ್ ವ್ಯಾಟ್ಸನ್ ಇತ್ತೀಚೆಗೆ ಒಳ್ಳೇ ಫಾರ್ಮ್‌ನಲ್ಲಿದ್ದಾರೆ. ಆದರೆ, ಇನ್ಮುಂದೆ IPL ಆಡಬಾರದು ಅನ್ನೋದು ವ್ಯಾಟ್ಸನ್ ವೈಯಕ್ತಿಕ ನಿರ್ಧಾರ. ದಂಗುಬಡಿಸುವ ಆಟ ಪ್ರದರ್ಶಿಸಿದ್ದರಿಂದಲೇ ಕಳೆದ ವರ್ಷ CSK 11ನೇ ಆವೃತ್ತಿ ಚಾಂಪಿಯನಾಗಿತ್ತು. ಅಂತಾರಾಷ್ಟ್ರೀಯ ಪಂದ್ಯಗಳಿಗೆ ಈಗಾಗಲೇ ಶೇನ್ ನಿವೃತ್ತಿ ಘೋಷಿಸಿದ್ದಾರೆ. ಆದರೆ, ಈಗ ವಿಶ್ವದೆಲ್ಲೆಡೆ ಟಿ -20 ಕ್ರಿಕೆಟ್‌ನಲ್ಲಿ ಆಡುತ್ತಿದ್ದಾರೆ. 37 ವರ್ಷದ ವ್ಯಾಟ್ಸನ್‌ಗೆ ಈಗಲೂ ಸಾಕಷ್ಟು ಆಫರ್‌ಗಳಿವೆ. ಆದರೆ, ಅವರು ಜಗತ್ತು ಸುತ್ತೋದಕ್ಕೆ ಇಷ್ಟಪಡ್ತಾರೆ ಅನ್ನೋದೆ ಪ್ರಶ್ನೆ. ಏಕಾಂಗಿ ಫೈಟ್ ಮಾಡಿ ಪಂದ್ಯ ಗೆಲ್ಲಿಸುವ ಸಾಮರ್ಥ್ಯ ಇರುವ ಕಾರಣಕ್ಕೇ ಶೇನ್ ವ್ಯಾಟ್ಸನ್‌ರನ್ನ ಸಿಎಸ್‌ಕೆ ಹರಾಜಿನಲ್ಲಿ ಉಳಿಸಿಕೊಂಡಿದೆ.
5. ಯುವರಾಜ್ ಸಿಂಗ್ :
ಸಿಕ್ಸರ್ ಕಿಂಗ್ ಯುವರಾಜ್ ಸಿಂಗ್‌ಗೆ ಖಂಡಿತಾ ಇದೇ ಕೊನೆಯ IPL. ಯಾಕಂದ್ರೇ, ಈ ಬಾರಿಯ ಹರಾಜು ಪ್ರಕ್ರಿಯೆಯಲ್ಲಿ ಎಡಗೈ ಬ್ಯಾಟ್ಸ್‌ಮೆನ್ ಯುವಿ ಯಾವ ತಂಡಕ್ಕೂ ಬೇಕಾಗಿರಲಿಲ್ಲ. CSK ಖರೀದಿಸುತ್ತೆ ಅಂತಾ ಮೊದಲೇ ಹೇಳಲಾಗಿತ್ತಾದರೂ, ಹರಾಜಿನಲ್ಲಿ ಒಂದೇ ಸಾರಿಯೂ ಕೂಗಿರಲಿಲ್ಲ. ಕೊನೆಗೆ MI ತಂಡ ಯುವಿ ಆಯ್ದುಕೊಂಡಿತ್ತು. IPLನ 12 ಆವೃತ್ತಿ ಸೇರಿ ಆರು ತಂಡಗಳ ಪರ ಆಡಿದ್ದಾರೆ. ಈ ಬಾರಿ ಏನಾದರೂ ಅವರು ಇಂಪ್ರೆಸ್ ಮಾಡದಿದ್ದರೇ ಅದೇ ಸೀಸನ್ ಯುವಿಗೆ ಕೊನೆಯಾಗಲಿದೆ. ಅಷ್ಟೇನೂ ಜಾದು ಮಾಡಲಿಲ್ಲ ಎಂಬ ಕಾರಣಕ್ಕೇ ಕಿಂಗ್ಸ್ ಇಲೆವೆನ್ ಪಂಜಾಬ್ ಯುವಿನ ಡ್ರಾಪ್ ಮಾಡಿತ್ತು. 2018ರ ಐಪಿಎಲ್‌ನಲ್ಲಿ 8 ಪಂದ್ಯ ಆಡಿದ್ದ ಯುವಿ ಬರೀ 65 ರನ್ ಪೇರಿಸಿದ್ದರು. 89.04 ಸ್ಟ್ರೈಕ್‌ರೇಟ್‌ನಡಿ ಅತೀ ಹೆಚ್ಚು ಸ್ಕೋರ್ ಅಂದ್ರೇ ಬರೀ 20 ರನ್. 2 ಓವರ್ ಹಾಕಲು ಅವಕಾಶ ಪಡೆದಿದ್ದ ಯುವಿ 23 ರನ್ ನೀಡಿದ್ದರು.