ಅಬುಧಾಬಿ : ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ದುಬೈನಲ್ಲಿ ನಡೆಯುತ್ತಿರುವ ಐಪಿಎಲ್ಗಾಗಿ 9 ಬ್ಯಾಟ್ಗಳನ್ನು ಕೊಂಡೊಯ್ದಿರುವುದಾಗಿ ಬಹಿರಂಗಪಡಿಸಿದ್ದಾರೆ.
ಚುಟುಕು ಕ್ರಿಕೆಟ್ ಆಡುವಾಗ ಒಂದು ಬ್ಯಾಟ್ನಲ್ಲಿ ಸುಮಾರು ಒಂದು ಅಥವಾ ಎರಡು ತಿಂಗಳು ಕಾಲ ಆಡಬಹುದು. ಆದರೆ, ಬ್ಯಾಟ್ ಅಗತ್ಯವಾದ ಸಂದರ್ಭದಲ್ಲಿ ದೊರೆಯದಿರಬಹುದು ಎಂಬ ಕಾರಣಕ್ಕೆ 9 ಬ್ಯಾಟ್ಗಳನ್ನು ತಮ್ಮ ಜೊತೆ ಕೊಂಡೊಯ್ದಿರುವುದಾಗಿ ರೋಹಿತ್ ಹೇಳಿದ್ದಾರೆ. ಬ್ಯಾಟ್ಗಳ ದೀರ್ಘಾಯುಷ್ಯ ನಾವು ಆಡುವ ಕ್ರಿಕಟ್ ಸ್ವರೂಪವನ್ನು ಅವಲಂಬಿಸಿರುತ್ತದೆ ಎಂದು ಮುಂಬೈ ಇಂಡಿಯನ್ಸ್ ನಾಯಕ ಅಭಿಪ್ರಾಯಪಟ್ಟಿದ್ದಾರೆ.
-
No boundary is too big when the Hitman gets going 💪💙#OneFamily #MumbaiIndians #MI #Dream11IPL @surya_14kumar @ImRo45 pic.twitter.com/hJbFaRODDB
— Mumbai Indians (@mipaltan) September 24, 2020 " class="align-text-top noRightClick twitterSection" data="
">No boundary is too big when the Hitman gets going 💪💙#OneFamily #MumbaiIndians #MI #Dream11IPL @surya_14kumar @ImRo45 pic.twitter.com/hJbFaRODDB
— Mumbai Indians (@mipaltan) September 24, 2020No boundary is too big when the Hitman gets going 💪💙#OneFamily #MumbaiIndians #MI #Dream11IPL @surya_14kumar @ImRo45 pic.twitter.com/hJbFaRODDB
— Mumbai Indians (@mipaltan) September 24, 2020
"ನಾನು ಉಪಯೋಗಿಸುವ ಬ್ಯಾಟ್ ತುಂಬಾ ದಿನಗಳವರೆಗೆ ಬರುತ್ತದೆ. ದೀರ್ಘ ಸಮಯದವರೆಗೆ, ಅಂದರೆ ನಾನು ನಾಲ್ಕೈದು ತಿಂಗಳು ಎಂದು ಹೇಳುತ್ತಿದ್ದೇನೆ. ಆದರೆ, ಬ್ಯಾಟ್ಗಳ ಆಯಸ್ಸು ನಾವು ಆಡುತ್ತಿರುವ ಕ್ರಿಕೆಟ್ನ ಸ್ವರೂಪದ ಮೇಲೆ ಅವಲಂಬಿತವಾಗಿರುತ್ತದೆ. ನೀವು ಟಿ20 ಕ್ರಿಕೆಟ್ ಆಡುತ್ತಿರುವಾಗ ಸಾಕಷ್ಟು ದೊಡ್ಡ ಹೊಡೆತಗಳನ್ನು ಪ್ರಯೋಗಿಸಬೇಕಾಗಿರುತ್ತದೆ.
ಹೊಸ ಹೊಸ ಹೊಡೆತಗಳನ್ನು ಅಭ್ಯಾಸ ಮಾಡಬೇಕಾಗಿರುವುದರಿಂದ ಬ್ಯಾಟ್ಗಳು ಮುರಿಯುವ ಸಾಧ್ಯತೆಯಿದೆ" ಎಂದು ಮುಂಬೈ ಇಂಡಿಯನ್ಸ್ ಟ್ವಿಟರ್ನಲ್ಲಿ ಪೋಸ್ಟ್ ಮಾಡಿರುವ ವಿಡಿಯೋದಲ್ಲಿ ಹಿಟ್ಮ್ಯಾನ್ ಹೇಳಿದ್ದಾರೆ. "ಟಿ20 ಸ್ವರೂಪವಾಗಿರುವ ಐಪಿಎಲ್ ನಡೆಯುವಾಗ, ಸಾಮಾನ್ಯವಾಗಿ ನನ್ನ ಬ್ಯಾಟ್ ಒಂದು ಅಥವಾ ಎರಡು ತಿಂಗಳು ಬರುತ್ತದೆ. ಆದರೆ, ಈಗ ಕಠಿಣ ಪರಿಸ್ಥಿತಿಯಲ್ಲಿದ್ದೇವೆ. ಕೊರಿಯರ್ ಸಮಯಕ್ಕೆ ಸರಿಯಾಗಿ ತಲುಪುತ್ತದೆ ಎಂದು ನಮಗೆ ಗೊತ್ತಿಲ್ಲ. ಹಾಗಾಗಿ, ನನ್ನೊಂದಿಗೆ 9 ಬ್ಯಾಟ್ಗಳನ್ನು ತೆಗೆದುಕೊಂಡು ಬಂದಿದ್ದೇನೆ" ಎಂದು ರೋಹಿತ್ ಹೇಳಿದ್ದಾರೆ.
-
➡️ For how long does Hitman's bat last? 🗯️
— Mumbai Indians (@mipaltan) September 25, 2020 " class="align-text-top noRightClick twitterSection" data="
➡️ How many willows is he carrying for this season's #Dream11IPL? 🤔
Watch and find out!#OneFamily #MumbaiIndians #MI @ImRo45 pic.twitter.com/T3eNwl2WXq
">➡️ For how long does Hitman's bat last? 🗯️
— Mumbai Indians (@mipaltan) September 25, 2020
➡️ How many willows is he carrying for this season's #Dream11IPL? 🤔
Watch and find out!#OneFamily #MumbaiIndians #MI @ImRo45 pic.twitter.com/T3eNwl2WXq➡️ For how long does Hitman's bat last? 🗯️
— Mumbai Indians (@mipaltan) September 25, 2020
➡️ How many willows is he carrying for this season's #Dream11IPL? 🤔
Watch and find out!#OneFamily #MumbaiIndians #MI @ImRo45 pic.twitter.com/T3eNwl2WXq
ಉದ್ಘಾಟನಾ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸೋಲು ಕಂಡಿದ್ದ ಮುಂಬೈ ಇಂಡಿಯನ್ಸ್, ಎರಡನೇ ಪಂದ್ಯದಲ್ಲಿ ಕೆಕೆಆರ್ ವಿರುದ್ಧ ರೋಹಿತ್ ಅವರ 80 ರನ್ಗಳ ಸೂಪರ್ ಬ್ಯಾಟಿಂಗ್ ನೆರವಿನಿಂದ ಮೊದಲ ಜಯ ಸಾಧಿಸಿದೆ. ತನ್ನ ಮುಂದಿನ ಪಂದ್ಯದಲ್ಲಿ ರೋಹಿತ್ ಪಡೆ ಸೆಪ್ಟೆಂಬರ್ 28ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಕಾದಾಡಲಿದೆ.