ETV Bharat / sports

ರಾಜಸ್ಥಾನ್​ ರಾಯಲ್ಸ್​​​ ವಿರುದ್ಧದ ಪಂದ್ಯದಲ್ಲಿ ರೋಹಿತ್ ಹೆಸರಿಗೆ ಸೇರಲಿವೆ ಈ 3 ದಾಖಲೆಗಳು - MI vs RR live

ಐಪಿಎಲ್​ ಇತಿಹಾಸದಲ್ಲಿ ಎಂಎಸ್​ ಧೋನಿ 195 ಪಂದ್ಯಗಳನ್ನಾಡಿ ಮೊದಲ ಸ್ಥಾನದಲ್ಲಿದ್ದರೆ, ಸುರೇಶ್ ರೈನಾ 193 ಪಂದ್ಯಗಳನ್ನಾಡಿ ರೋಹಿತ್ ಜೊತೆ ಎರಡನೇ ಸ್ಥಾನ ಹಂಚಿಕೊಂಡಿದ್ದಾರೆ.

ರೋಹಿತ್ ಶರ್ಮಾ ದಾಖಲೆ
ರೋಹಿತ್ ಶರ್ಮಾ ದಾಖಲೆ
author img

By

Published : Oct 6, 2020, 5:47 PM IST

ಅಬುಧಾಬಿ: ಮುಂಬೈ ಇಂಡಿಯನ್ಸ್ ತಂಡ ಇಂದು ರಾಜಸ್ಥಾನ್​ ರಾಯಲ್ಸ್​ ಸವಾಲನ್ನು ಎದುರಿಸಲಿದೆ. ಈ ಪಂದ್ಯದಲ್ಲಿ ಮುಂಬೈ ತಂಡದ ನಾಯಕ ರೋಹಿತ್ ಶರ್ಮಾ 86 ರನ್​ಗಳಿಸಿದರೆ ತಮ್ಮ ತವರು ಫ್ರಾಂಚೈಸಿ ಪರ 4000 ರನ್​ ಪೂರೈಸಲಿದ್ದಾರೆ.

ಈಗಾಗಲೇ ಶ್ರೀಮಂತ ಕ್ರಿಕೆಟ್​ ಲೀಗ್​ನಲ್ಲಿ 5000 ರನ್​ ಪೂರೈಸಿದ್ದಾರೆ. ರೋಹಿತ್​ ಮೊದಲ 3 ಆವೃತ್ತಿಗಳಲ್ಲಿ ಡೆಕ್ಕನ್ ಚಾರ್ಜರ್ಸ್​​​​ ತಂಡವನ್ನು ಪ್ರತಿನಿಧಿಸಿದ್ದರು.

ರೋಹಿತ್ ಶರ್ಮಾ
ರೋಹಿತ್ ಶರ್ಮಾ

ಗರಿಷ್ಠ ಅರ್ಧಶತಕ ದಾಖಲೆ

ರೋಹಿತ್ ಈ ಪಂದ್ಯದಲ್ಲಿ ಅರ್ಧಶತಕ ದಾಖಲಿಸಿದರೆ ಐಪಿಎಲ್‌ನಲ್ಲಿ ಅತಿ ಹೆಚ್ಚು ಅರ್ಧ ಶತಕ ಬಾರಿಸಿದ ಭಾರತೀಯ ಆಟಗಾರ ಎನಿಸಿಕೊಳ್ಳಲಿದ್ದಾರೆ. ಪ್ರಸ್ತುತ ರೋಹಿತ್ ಹಾಗೂ ಸುರೇಶ್ ರೈನಾ 38 ಅರ್ಧಶತಕ ಸಿಡಿಸಿ ಜಂಟಿಯಾಗಿ ಮೊದಲ ಸ್ಥಾನದಲ್ಲಿದ್ದಾರೆ. ಒಟ್ಟಾರೆ ಐಪಿಎಲ್​ನಲ್ಲಿ ಈ ದಾಖಲೆ ಸನ್​ರೈಸರ್ಸ್​ ಹೈದರಾಬಾದ್ ತಂಡದ ನಾಯಕ ಡೇವಿಡ್​ ವಾರ್ನರ್​ ಹೆಸರಿನಲ್ಲಿದೆ. ಅವರು 131 ಪಂದ್ಯಗಳಲ್ಲಿ 45 ಅರ್ಧಶತಕ ದಾಖಲಿಸಿದ್ದಾರೆ.

ರೋಹಿತ್ ಶರ್ಮಾ ಐಪಿಎಲ್ ಅಂಕಿ ಅಂಶ
ರೋಹಿತ್ ಶರ್ಮಾ ಐಪಿಎಲ್ ಅಂಕಿ ಅಂಶ

ಟೂರ್ನಿಯಲ್ಲಿ ಅತಿ ಹೆಚ್ಚು ಪಂದ್ಯ

ರಾಜಸ್ಥಾನ್​ ರಾಯಲ್ಸ್​ ವಿರುದ್ಧದ ಪಂದ್ಯ ರೋಹಿತ್​ಗೆ 194 ನೇ ಐಪಿಎಲ್​ ಪಂದ್ಯವಾಗಲಿದೆ. ಈ ಮೂಲಕ ನಗದು ಸಮೃದ್ಧ ಲೀಗ್​ನ ಇತಿಹಾಸದಲ್ಲಿ ಅತಿ ಹೆಚ್ಚು ಪಂದ್ಯವನ್ನಾಡಿದ 2ನೇ ಆಟಗಾರ ಎಂಬ ದಾಖಲೆಗೆ ಪಾತ್ರರಾಗಲಿದ್ದಾರೆ.

ರೋಹಿತ್ ಶರ್ಮಾ
ರೋಹಿತ್ ಶರ್ಮಾ

ಎಂಎಸ್​ ಧೋನಿ 195 ಪಂದ್ಯಗಳನ್ನಾಡಿದ್ದರೆ, ಸುರೇಶ್ ರೈನಾ 193 ಪಂದ್ಯಗಳನ್ನಾಡಿ ಮೊದಲೆರಡು ಸ್ಥಾನಗಳಲ್ಲಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.