ಅಬುಧಾಬಿ: 13ನೇ ಆವೃತ್ತಿ ಇಂಡಿಯನ್ ಪ್ರೀಮಿಯರ್ ಲೀಗ್ ದಿನದಿಂದ ದಿನಕ್ಕೆ ರೋಚಕತೆ ಪಡೆದುಕೊಳ್ಳುತ್ತಿದ್ದು, ಪ್ರಶಸ್ತಿಗೆ ಮುತ್ತಿಕ್ಕುವ ಉದ್ದೇಶದೊಂದಿಗೆ ಎಲ್ಲ ತಂಡದ ಪ್ಲೇಯರ್ಸ್ ಅದ್ಭುತ ಪ್ರದರ್ಶನ ನೀಡ್ತಿದ್ದಾರೆ. ಟೂರ್ನಿಯಲ್ಲಿ ಇಲ್ಲಿಯವರೆಗೆ ಬ್ಯಾಟಿಂಗ್ ಹಾಗೂ ಬೌಲಿಂಗ್ನಲ್ಲಿ ಮಿಂಚಿರುವ ಇಬ್ಬರು ಪ್ಲೇಯರ್ ಬಳಿ ಆರೆಂಜ್ ಹಾಗೂ ಪರ್ಪಲ್ ಕ್ಯಾಪ್ಗಳಿವೆ.
ಕಿಂಗ್ಸ್ ಇವೆಲೆನ್ ಪಂಜಾಬ್ ತಂಡದ ಆರಂಭಿಕ ಆಟಗಾರ, ಕನ್ನಡಿಗ ಮಯಾಂಕ್ ಅಗರವಾಲ್ ಬಳಿ ಆರೆಂಜ್ ಕ್ಯಾಪ್ ಇದ್ದು, ವೇಗಿ ಮೊಹಮ್ಮದ್ ಶಮಿ ಪರ್ಪಲ್ ಕ್ಯಾಪ್ಗೆ ಮುತ್ತಿಕ್ಕಿದ್ದಾರೆ.
ನಾಲ್ಕು ಪಂದ್ಯಗಳಿಂದ 246ರನ್ಗಳಿಕೆ ಮಾಡಿರುವ ಮಯಾಂಕ್ ಇಲ್ಲಿಯವರೆಗೆ ಅತಿ ಹೆಚ್ಚು ರನ್ಗಳಿಕೆ ಮಾಡಿದ್ದು, ಇದೇ ತಂಡದ ವೇಗದ ಬೌಲರ್ ಮೊಹಮ್ಮದ್ ಶಮಿ ನಾಲ್ಕು ಪಂದ್ಯಗಳಿಂದ 8ವಿಕೆಟ್ ಪಡೆದುಕೊಂಡು ಪರ್ಪಲ್ ಕ್ಯಾಪ್ ಪಡೆದುಕೊಂಡಿದ್ದಾರೆ. ನಂತರದ ಲಿಸ್ಟ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ನ ಕಗಿಸೋ ರಬಾಡಾ(7ವಿಕೆಟ್), ಮುಂಬೈ ಇಂಡಿಯನ್ಸ್ ತಂಡದ ರಾಹುಲ್ ಚಹಾರ್(6ವಿಕೆಟ್) ಇದ್ದಾರೆ.
ಇನ್ನು ರನ್ ವಿಭಾಗದಲ್ಲಿ ಮತ್ತೋರ್ವ ಕನ್ನಡಿಗ ಕೆ.ಎಲ್ ರಾಹುಲ್ 239ರನ್ಗಳಿಸಿ ಎರಡನೇ ಸ್ಥಾನ ಹಾಗೂ ಸಿಎಸ್ಕೆ ತಂಡದ ಡುಪ್ಲೆಸಿ 173 ರನ್ಗಳಿಸಿ ಮೂರನೇ ಸ್ಥಾನದಲ್ಲಿದ್ದಾರೆ. ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಹೊಡೆಯುವ ಹಾಗೂ ಹೆಚ್ಚು ವಿಕೆಟ್ ಗಳಿಸುವ ಪ್ಲೇಯರ್ ಆರೆಂಜ್ ಹಾಗೂ ಪರ್ಪಲ್ ಕ್ಯಾಪ್ ಪಡೆದುಕೊಳ್ಳುತ್ತಾರೆ.