ದುಬೈ: ಭಾರತ ತಂಡದ ಸ್ಫೋಟಕ ಬ್ಯಾಟ್ಸ್ಮನ್ ಕೆಎಲ್ ರಾಹುಲ್ ಇದೇ ಮೊದಲ ಬಾರಿಗೆ ಐಪಿಎಲ್ನಲ್ಲಿ ನಾಯಕರಾಗಿದ್ದಾರೆ. ಕರ್ನಾಟಕದ ಸ್ಟಾರ್ ಬ್ಯಾಟ್ಸ್ಮನ್ ಈ ಬಾರಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವನ್ನು ಮುನ್ನಡೆಸುತ್ತಿದ್ದಾರೆ. ಲೀಗ್ನಲ್ಲಿ ಏಕೈಕ ಭಾರತೀಯ ಕೋಚ್ ಆಗಿರುವ ಅನಿಲ್ ಕುಂಬ್ಳೆ ತಮ್ಮ ನಾಯಕತ್ವದ ಜವಾಬ್ದಾರಿಯನ್ನು ತುಂಬಾ ಸುಲಭ ಮಾಡಲಿದ್ದಾರೆ ಎಂದು ಅವರು ರಾಹುಲ್ ತಿಳಿಸಿದ್ದಾರೆ.
ಅನಿಲ್ ಭಾಯ್ ನನಗೆ ಅಪಾರ ನೆರವಾಗುತ್ತಾರೆ. ಏಕೆಂದರೆ ನಾವಿಬ್ಬರು ಒಂದೇ ರಾಜ್ಯದಿಂದ ಬಂದಿರುವ ಕಾರಣ, ನಮ್ಮ ನಡುವೆ ಉತ್ತಮ ಬಾಂಧವ್ಯವನ್ನು ಹಂಚಿಕೊಂಡಿದ್ದೇವೆ. ಇದು ನನಗೆ ನಾಯಕನನ್ನಾಗಿ ಸುಲಭವಾಗಿಸಿದೆ. ಅವರು ತಂಡಕ್ಕಾಗಿ ಹೆಚ್ಚಿನ ಯೋಜನೆಗಳನ್ನು ಮಾಡುತ್ತಾರೆ, ನಾನು ಅದನ್ನು ಮೈದಾನದಲ್ಲಿ ನಿರ್ವಹಿಸಬೇಕಷ್ಟೇ ಎಂದು ರಾಹುಲ್ ಹೇಳಿದ್ದಾರೆ.
ವಿಶೇಷವೆಂದರೆ ನಾಯಕ ಕೆಎಲ್ ರಾಹುಲ್ ಜೊತೆಗೆ ಮಯಾಂಕ್ ಅಗರ್ವಾಲ್, ಕರುಣ್ ನಾಯರ್ ಸೇರಿದಂತೆ ಕಿಂಗ್ಸ್ ಇಲೆವೆನ್ ತಂಡವೂ ಸಾಕಷ್ಟು ಕರ್ನಾಟಕ ಆಟಗಾರರನ್ನು ಹೊಂದಿದ್ದಾರೆ. ಕೋಚ್ ಕೂಡ ಕರ್ನಾಟಕದವರಾಗಿರುವುದರಿಂದ ಮೈದಾನದ ಹೊರಗೆ ಮತ್ತು ಒಳಗೆ ಅನಿಲ್ ಕುಂಬ್ಳೆ ಜೊತೆಗೆ ಉತ್ತಮ ಸಂಬಂಧ ಹೊಂದಿರುವುದಾಗಿ ಅವರು ತಿಳಿಸಿದ್ದಾರೆ.
ಅನಿಲ್ ಕುಂಬ್ಳೆ ಇದೇ ಮೊದಲ ಬಾರಿಗೆ ಸಂಪೂರ್ಣವಾಗಿ ಕೋಚ್ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ಈ ಹಿಂದೆ ಭಾರತ ತಂಡದಲ್ಲಿ ಮುಖ್ಯಕೋಚ್ ಆಗಿ ಯಶಸ್ವಿಯಾಗಿದ್ದ ಅವರು ಇದೇ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಲು ಹಲವು ರೂಪುರೇಷೆಗಳನ್ನು ರೂಪಿಸಲಿದ್ದಾರೆ. ಜೊತೆಗೆ ತಂಡದಲ್ಲಿ ಹೆಚ್ಚಿನ ಕನ್ನಡಿಗರಿರುವುದು ಅವರಿಗೆ ಪ್ಲಸ್ ಪಾಯಿಂಟ್ ಆಗಿದೆ.
ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದಲ್ಲಿ ಕ್ರಿಸ್ ಗೇಲ್, ಮ್ಯಾಕ್ಸ್ವೆಲ್ ನಿಕೋಲಸ್ ಪೂರನ್ರಂತಹ ಸ್ಫೋಟಕ ಬ್ಯಾಟ್ಸ್ಮನ್ಗಳ ಜೊತೆಗೆ ಮಯಾಂಕ್, ರಾಹುಲ್ ಹಾಗೂ ಕರುಣ್ ನಾಯರ್ ಅವರಂತಹ ಉತ್ತಮ ಸ್ಥಿರತೆಯುಳ್ಳ ಬ್ಯಾಟಿಂಗ್ ಬಳಗವನ್ನು ಹೊಂದಿದೆ.
ಬೌಲಿಂಗ್ನಲ್ಲಿ ಜೋರ್ಡನ್, ಕಾಟ್ರೆಲ್ ಹಾಗೂ ಶಮಿ ಅಂತಹ ಅನುಭವಿಗಳನ್ನು ಇಶಾನ್ ಪೊರೆಲ್ಮ ಅರ್ಶದೀಪ್ ಸಿಂಗ್ ನಂತಹ ಯುವ ವೇಗಿಗಳನ್ನು ಹೊಂದಿದೆ. ಜೊತೆಗೆ ಜೇಮ್ಸ್ ನಿಶಾಮ್ ಹಾಗೂ ಹಾರ್ಡಸ್ ವಿಜೋಯಿನ್ ಕೂಡ ತಂಡದಲ್ಲಿದ್ದಾರೆ.
ಒಟ್ಟಾರೆ ಸಮತತೋಲನದಿಂದ ಕೂಡಿರುವ ಪಂಜಾಬ್ ಬಾರಿ ಇತರೆ ತಂಡಗಳಿಗೂ ಪೈಪೋಟಿ ನೀಡಿ ಪ್ಲೇ ಆಪ್ ತಲುಪಬಲ್ಲಿ ತಂಡಗಳಲ್ಲಿ ಒಂದು ಎನ್ನುವುದರಲ್ಲಿ ಎರಡು ಮಾತಿಲ್ಲ.