ಶಾರ್ಜಾ: ಟಿ20 ಕ್ರಿಕೆಟ್ನಲ್ಲಿ 20ನೇ ಓವರ್‌ನಲ್ಲಿ ಸಾಮಾನ್ಯವಾಗಿ ಬ್ಯಾಟ್ಸ್ಮನ್ಗಳು ಅತಿ ಹೆಚ್ಚು ರನ್ಗಳಿಕೆ ಮಾಡಲು ಬಯಸುತ್ತಾರೆ. ಅದು 13ನೇ ಆವೃತ್ತಿಯಲ್ಲೂ ಭಿನ್ನವಾಗಿಲ್ಲ. ಈ ವರ್ಷ ಮುಗಿದಿರುವ 8 ಪಂದ್ಯಗಳಲ್ಲಿ 13 ಇನ್ನಿಂಗ್ಸ್ಗಳಲ್ಲಿ 20 ಓವರ್ಗಳ ಆಟ ಕಂಡು ಬಂದಿದ್ದು, ಇದರಲ್ಲಿ ವಿವಿಧ ತಂಡಗಳು 14.54ರ ಸರಾಸರಿಯಲ್ಲಿ ರನ್ಗಳಿಸಿವೆ.
ಹಿರಿಯ ಕ್ರಿಕೆಟ್ ಅಂಕಿ ಅಂಶ ತಜ್ಞ ಮೋಹನ್ ದಾಸ್ ಮೆನನ್ ಅವರ ಪ್ರಕಾರ, 8 ಪಂದ್ಯಗಳಿಂದ ಕೊನೆಯ ಓವರ್ನ 78(13 ಓವರ್) ಎಸೆತಗಳಲ್ಲಿ ಬ್ಯಾಟ್ಸ್ಮನ್ಗಳು 189 ರನ್ ಸೂರೆಗೈದಿದ್ದಾರೆ. ಈ ಓವರ್ ಹೊರತು ಪಡಿಸಿದ್ರೆ ಅತಿ ಹೆಚ್ಚು ರನ್ ಕಂಡು ಬಂದಿರುವುದು 18ನೇ ಓವರ್‌ನಲ್ಲಿ. ಈ ಓವರ್‌ನಲ್ಲಿ 11.80 ಸರಾಸರಿ ರನ್ ಕಂಡು ಬಂದಿದೆ. 17 ನೇ ಓವರ್‌ನಲ್ಲಿ 10.44 ಸರಾಸರಿಯಲ್ಲಿ ರನ್ ಬರುತ್ತಿದೆ.
ಸ್ಲಾಗ್ ಓವರ್ಗಳಲ್ಲಿ ನೋಡುವುದಾದ್ರೆ 19ನೇ ಓವರ್‌ನಲ್ಲಿ ಬೌಲರ್ಗಳಲ್ಲಿ ಉತ್ತಮವಾಗಿ ಬೌಲಿಂಗ್ ಮಾಡಿದ್ದಾರೆ. ಈ ಓವರ್‌ನಲ್ಲಿ 9.14 ಸರಾಸರಿಯಲ್ಲಿ ರನ್ ದಾಖಲಾಗಿದೆ ಎಂದು ಮೆನನ್ ಮಾಧ್ಯಮಕ್ಕೆ ಹೇಳಿದ್ದಾರೆ.
ಬೌಲಿಂಗ್ ಪರ ನೋಡುವುದಾದ್ರೆ 16 ಮತ್ತು 20ನೇ ಓವರ್ಗಳಲ್ಲಿ ಅತಿ ಹೆಚ್ಚು ವಿಕೆಟ್ ಬಿದ್ದಿವೆ. ಈ ಎರಡು ಓವರ್ಗಳಲ್ಲಿ ಕಳೆದ 8 ಪಂದ್ಯಗಳಿಂದ ತಲಾ 11 ಬ್ಯಾಟ್ಸ್ಮನ್ಗಳು ಔಟಾಗಿದ್ದಾರೆ. 13ನೇ ಐಪಿಎಲ್ನ 2ನೇ ಓವರ್‌ನಲ್ಲಿ 6ಕ್ಕಿಂತ ಹೆಚ್ಚು ಬ್ಯಾಟ್ಸ್ಮನ್ಗಳು ಔಟಾಗಿದ್ದಾರೆ.
ಮೊದಲ ಓವರ್‌ನಲ್ಲಿ ಕೇವಲ 2 ವಿಕೆಟ್ ಮಾತ್ರ ಬಿದ್ದಿವೆ ಎಂದು ಮೋಹನ್ ಹೇಳಿದ್ದಾರೆ. 1 ,8 ಹಾಗೂ 13 ನೇ ಓವರ್ಗಳಲ್ಲಿ ಅತ್ಯಂತ ಕಡಿಮೆ ಅಂದ್ರೆ ಕೇವಲ 2 ವಿಕೆಟ್ ಮಾತ್ರ ಬೌಲರ್ಗಳು ಪಡೆಯುವಲ್ಲಿ ಸಫಲರಾಗಿದ್ದಾರೆ.