ETV Bharat / sports

2021, 22ರ IPL ಟೈಟಲ್‌ ಪ್ರಾಯೋಜಕತ್ವದ 'ಡ್ರೀಮ್'ಗೆ‌ ನಿರಾಶೆ: ಬಿಸಿಸಿಐ ಕೊಟ್ಟ ಕಾರಣ ಇಲ್ಲಿದೆ

13ನೇ ಆವೃತ್ತಿಯ ಇಂಡಿಯನ್​ ಪ್ರೀಮಿಯರ್ ಲೀಗ್​ ಟೈಟಲ್​ ಪ್ರಾಯೋಜಕತ್ವ ಹಕ್ಕು ಪಡೆದುಕೊಳ್ಳುವಲ್ಲಿ ಭಾರತೀಯ ಕಂಪನಿ ಡ್ರೀಮ್​ 11 ಯಶಸ್ವಿಯಾಗಿದೆ. ಆದ್ರೆ ಇದು ಒಂದು ವರ್ಷಕ್ಕೆ ಟೂರ್ನಿಗೆ ಮಾತ್ರ ಸೀಮಿತವಾಗಿದೆ.

Dream11 as title sponsor
Dream11 as title sponsor
author img

By

Published : Aug 19, 2020, 9:24 PM IST

ಮುಂಬೈ: ಪ್ರಸಕ್ತ ಸಾಲಿನ ಇಂಡಿಯನ್​ ಪ್ರೀಮಿಯರ್​ ಲೀಗ್​ನ ಟೈಟಲ್​ ಪ್ರಾಯೋಜಕತ್ವ ಪಡೆದುಕೊಳ್ಳಲು ಭಾರತೀಯ ಕಂಪನಿ ಡ್ರೀಮ್​ 11 ಯಶಸ್ವಿಯಾಗಿದೆ. ಬರೋಬ್ಬರಿ 222 ಕೋಟಿ ರೂ. ನೀಡಿ ಈ ಹರಾಜು ತನ್ನದಾಗಿಸಿಕೊಂಡಿದೆ. ಇದಕ್ಕೆ ಸಂಬಂಧಿಸಿದಂತೆ ಇದೀಗ ಐಪಿಎಲ್​ ಮುಖ್ಯಸ್ಥ ಬ್ರಿಜೇಶ್​ ಪಟೇಲ್​ ಅಧಿಕೃತ ಮಾಹಿತಿ ನೀಡಿದ್ದಾರೆ.

Brijesh Patel, Chairman, IPL
ಬ್ರಿಜೇಶ್​ ಪಟೇಲ್​

ಆದರೆ ಇದೀಗ ಲಭ್ಯವಾಗಿರುವ ಮಾಹಿತಿ ಪ್ರಕಾರ, ಡ್ರೀಮ್​ 11, 2020ರ ಪ್ರಾಯೋಜಕತ್ವ ಹಕ್ಕುಗಳ ಜತೆಗೆ 2021 ಹಾಗೂ 2022ರ ಐಪಿಎಲ್​ ಟೈಟಲ್​ ಪ್ರಾಯೋಜಕತ್ವ ಪಡೆದುಕೊಳ್ಳಲು ನಿರ್ಧಾರ ಮಾಡಿತ್ತು ಎಂಬ ಮಾಹಿತಿ ಲಭ್ಯವಾಗಿದೆ. ಚೀನಾ ಮೊಬೈಲ್​ ಕಂಪನಿ ಒಂದು ವೇಳೆ ಮುಂದಿನ ಪ್ರಾಯೋಜಕತ್ವದ ವೇಳೆಗೆ ಕಮ್​ಬ್ಯಾಕ್​ ಮಾಡದೇ ಹೋದರೆ ತಾವು 240 ಕೋಟಿ ರೂ. ನೀಡಿ ಬಿಡ್​​ ಪಡೆದುಕೊಳ್ಳುವುದಾಗಿ ಹೇಳಿದ್ದಾಗಿ ತಿಳಿದು ಬಂದಿದೆ.

ವಿವೋ ಟೈಟಲ್‌ ಪ್ರಾಯೋಜಕತ್ವಕ್ಕೆ ವಾರ್ಷಿಕವಾಗಿ ಬಿಸಿಸಿಐಗೆ 440 ಕೋಟಿ ರೂ ನೀಡುತ್ತಿದೆ. ಹಾಗಾಗಿ, ನಾವೇಕೆ ನಿಮಗೆ (ಡ್ರೀಮ್‌ 11) 240 ಕೋಟಿ ರೂಗೆ ಪ್ರಾಯೋಜಕತ್ವ ಹಕ್ಕು ನೀಡಬೇಕು ಎಂದು ಪ್ರಶ್ನೆ ಮಾಡಿದೆ ಎನ್ನಲಾಗಿದೆ.

Dream 11
ಡ್ರೀಮ್​ 11

ಕೇವಲ ಒಂದು ವರ್ಷದಲ್ಲಿ ಡ್ರೀಮ್​ 11 ಒಟ್ಟು 19 ಲೀಗ್​ಗಳಲ್ಲಿ ಪ್ರಾಯೋಜಕತ್ವ ಹೊಂದಿದ್ದು, ಅದರಲ್ಲಿ ಆರು ಇಂಡಿಯನ್​ ಪ್ರೀಮಿಯರ್​​ ಲೀಗ್ ಫ್ರಾಂಚೈಸಿಗಳಿವೆ. ಐಪಿಎಲ್​ ಪ್ರಾಯೋಜಕತ್ವಕ್ಕಾಗಿ ಅನ್ ಅಕಾಡೆಮಿ 210 ಕೋಟಿ ರೂ., ಟಾಟಾ ಸಂಸ್ಥೆ (180 ಕೋಟಿ), ಬೈಜುಸ್​​ (125 ಕೋಟಿ) ರೂ.ಗೆ ಬಿಡ್ ಮಾಡಿದ್ದವು. ಆದರೆ ಡ್ರೀಮ್​ 11 222 ಕೋಟಿ ರೂ. ಬಿಡ್​ ಸಲ್ಲಿಕೆ ಮಾಡಿ ಪ್ರಾಯೋಜಕತ್ವ ಪಡೆದುಕೊಂಡಿದೆ. ಡ್ರೀಮ್​ 11 ಪಡೆದುಕೊಂಡಿರುವ ಪ್ರಾಯೋಜಕತ್ವದ ಹಕ್ಕುಗಳು 4 ತಿಂಗಳು 13 ದಿನಗಳವರೆಗೆ ಇರಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.