ETV Bharat / sports

ಮತ್ತಿಬ್ಬರು ವಾಂಖೆಡೆ ಸ್ಟೇಡಿಯಂ ಸಿಬ್ಬಂದಿ, 6 ಬಿಸಿಸಿಐ ಇವೆಂಟ್ ಮ್ಯಾನೇಜರ್​ಗಳಿಗೆ ಕೊರೊನಾ - ಇಂಡಿಯನ್ ಪ್ರೀಮಿಯರ್ ಲೀಗ್

ಏಪ್ರಿಲ್ 10ರಂದು ದೆಹಲಿ ಕ್ಯಾಪಿಟಲ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪಂದ್ಯ ಸೇರಿ ವೇಳಾಪಟ್ಟಿಯಂತೆ ಮುಂಬೈನಲ್ಲಿನ ಎಲ್ಲಾ ಐಪಿಎಲ್ ಪಂದ್ಯಗಳು ನಡೆಯಲಿವೆ ಎಂಬ ವಿಶ್ವಾಸವಿದೆ" ಎಂದಿರುವ ಅವರು, ಪರಿಸ್ಥಿತಿ ಕೈಮೀರಿದರೆ ಹೈದರಾಬಾದ್ ಮತ್ತು ಇಂದೋರ್ ನಮ್ಮ ಮುಂದಿರುವ ಆಯ್ಕೆ..

ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ಕೊರೊನಾ
ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ಕೊರೊನಾ
author img

By

Published : Apr 3, 2021, 5:56 PM IST

ಮುಂಬೈ : ನಗರದಲ್ಲಿ ಕೋವಿಡ್​-19 ಪ್ರಕರಣ ಭಾರಿ ಏರಿಕೆಯಾಗುತ್ತಿದ್ದರೂ ಮತ್ತು ವಾಂಖೆಡೆ ಸ್ಟೇಡಿಯಂ 10 ಸಿಬ್ಬಂದಿಗೆ ಮಾರಣಾಂತಿಕ ವೈರಸ್‌ಗೆ ತಗುಲಿರುವ ಹೊರತಾಗಿಯೂ ಏಪ್ರಿಲ್ 10-25ರಂದು ಮುಂಬೈನಲ್ಲಿ ನಿಗದಿತ ಐಪಿಎಲ್ ಪಂದ್ಯಗಳನ್ನು ನಡೆಸುವ ಭರವಸೆಯನ್ನು ಬಿಸಿಸಿಐ ಹೊಂದಿದೆ.

ಆದರೆ, ಕೋವಿಡ್-19 ಪರಿಸ್ಥಿತಿ ನಿಯಂತ್ರಣಕ್ಕೆ ಬಾರದಿದ್ದರೆ ಹೈದರಾಬಾದ್​ ಮತ್ತು ಇಂದೋರ್​ ನಗರಗಳನ್ನು ಹೆಚ್ಚುವರಿ ಸ್ಥಳಗಳಾಗಿ ಸೇರಿಸಿಕೊಳ್ಳಲು ಬಿಸಿಸಿಐ ಚಿಂತಿಸುತ್ತಿದೆ. ಮುಂಬೈ ಈ ವರ್ಷದ ಲೀಗ್​ನಲ್ಲಿ 10 ಪಂದ್ಯಗಳಿಗೆ ಆತಿಥ್ಯ ನೀಡಬೇಕಿತ್ತು.

ಶುಕ್ರವಾರ ಮಹಾರಾಷ್ಟ್ರದಲ್ಲಿ 47,000 ಹೊಸ ಕೋವಿಡ್ ಪ್ರಕರಣ ದಾಖಲಾಗಿವೆ. ಹಾಗಾಗಿ, ಅಲ್ಲಿನ ಸರ್ಕಾರ ಸಣ್ಣ ಪ್ರಮಾಣದ ಲಾಕ್​ಡೌನ್​ ಘೋಷಿಸಲು ಚಿಂತಿಸುತ್ತಿದೆ. ಜೊತೆಗೆ ಶುಕ್ರವಾರ ಖಾಂಖೆಡೆಯ 8 ಸಿಬ್ಬಂದಿಗೆ ತಗುಲಿದ್ದ ಸೋಂಕು ಇಂದು ಕೂಡ ಮತ್ತಿಬ್ಬರಿಗೆ ತಗುಲಿದೆ. ಅಷ್ಟೇ ಅಲ್ಲ, ಬಿಸಿಸಿಐ ಆಯೋಜಿಸಿದ್ದ 6 ಮಂದಿ ಇವೆಂಟ್ ಮ್ಯಾನೇಜರ್​ಗಳಿಗೂ ಕೂಡ ಪಾಸಿಟಿವ್ ಬಂದಿದೆ. ಪ್ರಸ್ತುತ ಅವರನ್ನು ಐಸೋಲೇಟ್​ ಮಾಡಲಾಗಿದೆ.

ಇದನ್ನು ಓದಿ:ಮಹಾರಾಷ್ಟ್ರದಲ್ಲಿ ಲಾಕ್​ಡೌನ್​ ಭೀತಿ.. ಐಪಿಎಲ್​ಗೆ ನಿಗದಿಪಡಿಸಿದ ಸ್ಥಳಗಳ ಪಟ್ಟಿಗೆ ಹೈದರಾಬಾದ್​ ಸೇರ್ಪಡೆ ಸಾಧ್ಯತೆ

ನಿನ್ನೆ 8 ಮೈದಾನ ಸಿಬ್ಬಂದಿಗೆ ಪಾಸಿಟಿವ್ ಪ್ರಕರಣ ದಾಖಲಾಗಿದ್ದವು. ಇಂದು ಮತ್ತೆರಡು ಪ್ರಕರಣ ಬೆಳಕಿಗೆ ಬಂದಿದೆ. ಒಟ್ಟಾರೆ 10 ಮಂದಿಗೆ ಸೋಂಕು ತಗುಲಿದೆ. ಎಲ್ಲರನ್ನು ಮನೆಗೆ ಕಳುಹಿಸಲಾಗಿದೆ. ಅವರೆಲ್ಲರೂ ಐಸೋಲೇಟ್​ನಲ್ಲಿದ್ದಾರೆ.

ಸಿದ್ಧತೆಗಾಗಿ ನಾವು ಮುಂಬೈನ ಸಿಎ ಮೈದಾನದ ಸಿಬ್ಬಂದಿಯನ್ನು ಕರೆಸಿಕೊಂಡಿದ್ದೇವೆ. ಅಲ್ಲದೆ, ಬಿಸಿಸಿಐ ನೇಮಕ ಮಾಡಿದ್ದ 6 ರಿಂದ 7 ಇವೆಂಟ್ ಮ್ಯಾನೇಜ್ಮೆಂಟ್ ಸಿಬ್ಬಂದಿಗೂ ಸಹ ಪಾಸಿಟಿವ್​ ದೃಢಪಟ್ಟಿದೆ ಎಂದು ಮುಂಬೈ ಕ್ರಿಕೆಟ್ ಅಸೋಸಿಯೇಷನ್​ನ ಹಿರಿಯ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ

ಹಿರಿಯ ಬಿಸಿಸಿಐ ಅಧಿಕಾರಿಯನ್ನು ಇಲ್ಲಿನ ಪರಿಸ್ಥಿತಿಯ ಬಗ್ಗೆ ಕೇಳಿದಾಗ, ಬಿಸಿಸಿಐ ನಿಜಕ್ಕೂ ಇದರ(ಸಿಬ್ಬಂದಿಗೆ ಕೊರೊನಾ) ಬಗ್ಗೆ ಕಾಳಜಿ ಹೊಂದಿದೆ ಎಂದು ತಿಳಿಸಿದ್ದಾರೆ. "ನೋಡಿ, ಲಾಕ್‌ಡೌನ್ ಇದ್ದರೂ, ತಂಡಗಳು ಬಯೋ-ಬಬಲ್‌ನಲ್ಲಿವೆ ಮತ್ತು ಐಪಿಎಲ್ ಮುಚ್ಚಿದ ಸ್ಟೇಡಿಯಂನಲ್ಲಿ ನಡೆಯಲಿದೆ.

ಏಪ್ರಿಲ್ 10ರಂದು ದೆಹಲಿ ಕ್ಯಾಪಿಟಲ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪಂದ್ಯ ಸೇರಿ ವೇಳಾಪಟ್ಟಿಯಂತೆ ಮುಂಬೈನಲ್ಲಿನ ಎಲ್ಲಾ ಐಪಿಎಲ್ ಪಂದ್ಯಗಳು ನಡೆಯಲಿವೆ ಎಂಬ ವಿಶ್ವಾಸವಿದೆ" ಎಂದಿರುವ ಅವರು, ಪರಿಸ್ಥಿತಿ ಕೈಮೀರಿದರೆ ಹೈದರಾಬಾದ್ ಮತ್ತು ಇಂದೋರ್ ನಮ್ಮ ಮುಂದಿರುವ ಆಯ್ಕೆ ಎಂದು ಪಿಟಿಐಗೆ ತಿಳಿಸಿದ್ದಾರೆ.

ಇದನ್ನು ಓದಿ:ಐಪಿಎಲ್ 2021.. ಅಕ್ಷರ್ ಪಟೇಲ್​ಗೆ ಕೊರೊನಾ ಪಾಸಿಟಿವ್​, ಆತಂಕದಲ್ಲಿ ಕ್ಯಾಪಿಟಲ್ಸ್​!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.