ETV Bharat / sports

ಟಿ20 ಪಂದ್ಯದ ವೇಳೆ ತಲೆ ಮೇಲೆ ಕೈಯಿಟ್ಟು ಕುಳಿತ ಮಿಸ್ಬಾ.. ಅದು ತಂಡಕ್ಕೆ ಅನಿಷ್ಠ ಎಂದ ಇಂಜಮಾಮ್​!! - ಪಾಕ್​ ಕೋಚ್​ ಮಿಸ್ಬಾ ಉಲ್​ ಹಕ್

ಪಂದ್ಯ ಏನಾದರೂ ಆಗಲಿ. ಆದರೆ, ಡ್ರೆಸ್ಸಿಂಗ್​ ರೂಮಿನಲ್ಲಿ ಧನಾತ್ಮಕ ಕಂಪನಗಳು ಮಾತ್ರ ಇರಬೇಕು. ಇದು ಬಹಳ ಮುಖ್ಯ. ನಾವು ಟಿ20 ಚಾಂಪಿಯನ್​, ಆ ಮಾದರಿಯಲ್ಲಿ ಸೋತರೆ ನಿಜಕ್ಕೂ ಆತಂಕಕ್ಕೆ ಕಾರಣವಾಗಲಿದೆ..

ಇಂಜಮಾಮ್​ ಉಲ್​ ಹಕ್​
ಇಂಜಮಾಮ್​ ಉಲ್​ ಹಕ್​
author img

By

Published : Sep 1, 2020, 8:38 PM IST

ಲಾಹೋರ್ ​: 2ನೇ ಟಿ20 ಪಂದ್ಯದ ಚೇಸಿಂಗ್​ ವೇಳೆ ಪಾಕಿಸ್ತಾನ ತಂಡದ ಮುಖ್ಯ ಕೋಚ್​ ಹಾಗೂ ಆಯ್ಕೆ ಸಮಿತಿ ಮುಖ್ಯಸ್ಥ ಮಿಸ್ಬಾ ಉಲ್​ ತಮ್ಮ ತಲೆ ಮೇಲೆ ಕೈಯಿಟ್ಟು ಬೇಸರದಿಂದ ಕುಳಿತಿರೋದನ್ನು ಟೀಕಿಸಿರುವ ಮಾಜಿ ನಾಯಕ ಇಂಜಮಾಮ್​ ಉಲ್ ಹಕ್​, ಈ ವರ್ತನೆ ಸರಿಯಾದದ್ದಲ್ಲ ಎಂದಿದ್ದಾರೆ.

ಮೊದಲ ಟಿ20 ಪಂದ್ಯ ಮಳೆಗೆ ರದ್ದಾದರೆ, ಎರಡನೇ ಟಿ20 ಪಂದ್ಯದಲ್ಲಿ ಪಾಕಿಸ್ತಾನ ತಂಡ 195 ರನ್​ಗಳಿಸಿಯೂ 5 ವಿಕೆಟ್​ಗಳಿಂದ ಸೋಲು ಕಂಡಿತ್ತು. ಇಂಗ್ಲೆಂಡ್​ ನಾಯಕ ಮಾರ್ಗನ್​ ಹಾಗೂ ಅನುಭವಿ ಬ್ಯಾಟ್ಸ್​ಮನ್​ ಡೇವಿಡ್​ ಮಲನ್​ ಅರ್ಧಶತಕ ಸಿಡಿಸಿ ಪಂದ್ಯ ಗೆಲ್ಲಲು ಪ್ರಮುಖ ಪಾತ್ರವಹಿಸಿದ್ದರು. ಆದರೆ, ಈ ಪಂದ್ಯದ ವೇಳೆ ಮಿಸ್ಬಾ ಉಲ್​ ಹಕ್​ ತಲೆ ಮೇಲೆ ಕೈಯಿಟ್ಟು ಕುಳಿತಿದ್ದರು. ಇದನ್ನು ವಾಸಿಂ​ ಅಕ್ರಮ್​ ಹಾಗೂ ಇಂಜಮಾಮ್​ ಉಲ್​ಹಕ್​ ಟೀಕಿಸಿದ್ದಾರೆ.

ಇಂಗ್ಲೆಂಡ್​ ಇನ್ನಿಂಗ್ಸ್​ನ 5ನೇ ಓವರ್​ ವೇಳೆಯಲ್ಲಿ, ಪಾಕ್​ ತಂಡ ಪವರ್​ ಪ್ಲೇನಲ್ಲಿ 40-45 ರನ್​ ಬಿಟ್ಟುಕೊಟ್ಟಿತ್ತು. ಈ ವೇಳೆ ಕ್ಯಾಮೆರಾ ತಲೆ ಮೇಲೆ ಕೈಯಿಟ್ಟು ಕುಳಿತಿದ್ದ ಮಿಸ್ಬಾರನ್ನು ತೋರಿಸಿತ್ತು. ಇದು ನಿಜಕ್ಕೂ ತಂಡಕ್ಕೆ ಕೆಟ್ಟ ಸಂದೇಶ ತೋರುತ್ತಿತ್ತು ಎಂದು ಇಂಜಮಾಮ್​ ಉಲ್​ ಹಕ್​ ತಮ್ಮ ಯೂಟ್ಯೂಬ್​ ಚಾನೆಲ್​ನಲ್ಲಿ ತಿಳಿಸಿದ್ದಾರೆ.

ಮಿಸ್ಬಾ ಉಲ್​ ಹಕ್​
ಮಿಸ್ಬಾ ಉಲ್​ ಹಕ್​

ಆ ಸಂದರ್ಭದಲ್ಲಿ ಇನ್ನೂ ಇಂಗ್ಲೆಂಡ್​ಗೆ ಗೆಲ್ಲಲು 155 ರಿಂದ 160 ರನ್​ಗಳ ಅಗತ್ಯವಿತ್ತು. ಪಂದ್ಯ ಯಾರ ಕಡೆಯಾದರೂ ವಾಲಬಹುದಾಗುವ ಸಂಭವವಿತ್ತು. ಆದರೆ, ನೀವು(ಮಿಸ್ಬಾ) ಆ ರೀತಿ ಬೇಸರದಿಂದ ವರ್ತಿಸುವ ಮೂಲಕ ತಂಡಕ್ಕೆ ನೀವು ತಪ್ಪು ಮಾಡಿದ್ದೀರಿ ಎಂಬ ಸಂದೇಶವನ್ನು ಕಳುಹಿಸುತ್ತಿದ್ದೀರಿ. ನೀವು ಆಟದ ಬಗ್ಗೆ ಕ್ರಮವಾದ ಮಾತುಕತೆ ನಡೆಸಿ. ಆದರೆ, ಪಂದ್ಯದ ನಡುವೆ ಆ ರೀತಿ ವರ್ತಿಸುವುದರಿಂದ ತಂಡದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ಅವರು ಟೀಕಿಸಿದ್ದಾರೆ.

ಪಂದ್ಯ ಏನಾದರೂ ಆಗಲಿ. ಆದರೆ, ಡ್ರೆಸ್ಸಿಂಗ್​ ರೂಮಿನಲ್ಲಿ ಧನಾತ್ಮಕ ಕಂಪನಗಳು ಮಾತ್ರ ಇರಬೇಕು. ಇದು ಬಹಳ ಮುಖ್ಯ. ನಾವು ಟಿ20 ಚಾಂಪಿಯನ್​, ಆ ಮಾದರಿಯಲ್ಲಿ ಸೋತರೆ ನಿಜಕ್ಕೂ ಆತಂಕಕ್ಕೆ ಕಾರಣವಾಗಲಿದೆ ಎಂದು ಹೇಳಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.