ETV Bharat / sports

ಅಭ್ಯಾಸದ ವೇಳೆ ರೋಹಿತ್​ಗೆ ಗಾಯ... ವಿಶ್ವಕಪ್​ಗೆ ತಂಡ ಆಯ್ಕೆಗೂ ಮುನ್ನ ಬಿಗ್​ ಶಾಕ್​!?

ಟೀಂ ಇಂಡಿಯಾ ಏಕದಿನ ತಂಡದ ಉಪನಾಯಕ ರೋಹಿತ್​ ಶರ್ಮಾ ಗಾಯಗೊಂಡಿರುವುದಾಗಿ ತಿಳಿದು ಬಂದಿದೆ.

author img

By

Published : Apr 10, 2019, 5:42 PM IST

ರೋಹಿತ್​ ಶರ್ಮಾ

ಮುಂಬೈ: ವಿಶ್ವಕಪ್​ ಮಹಾಸಮರಕ್ಕೆ ಟೀಂ ಇಂಡಿಯಾ ಬರುವ ಏಪ್ರಿಲ್​ 15ರಂದು ಆಯ್ಕೆಯಾಗಲಿದೆ. ಅದಕ್ಕೂ ಮುನ್ನವೇ ತಂಡಕ್ಕೆ ದೊಡ್ಡ ಹೊಡೆತವೊಂದು ಬಿದ್ದಿರುವ ಹಾಗೇ ಕಾಣಿಸುತ್ತಿದ್ದು, ಇದು ಆಯ್ಕೆ ಸಮಿತಿಗೆ ದೊಡ್ಡ ತಲೆನೋವಾಗಿ ಪರಿಣಮಿಸುವ ಸಾಧ್ಯತೆ ಇದೆ.

Mumbai Indians
ಮುಂಬೈ ಇಂಡಿಯನ್ಸ್​​

ಟೀಂ ಇಂಡಿಯಾ ಏಕದಿನ ತಂಡದ ಉಪನಾಯಕ ರೋಹಿತ್​ ಶರ್ಮಾ ಗಾಯಗೊಂಡಿರುವುದಾಗಿ ತಿಳಿದು ಬಂದಿದೆ. ಪಂಜಾಬ್​ ವಿರುದ್ಧದ ಪಂದ್ಯಕ್ಕಾಗಿ ನೆಟ್​ನಲ್ಲಿ ಅಭ್ಯಾಸ ನಡೆಸುತ್ತಿದ್ದ ವೇಳೆ ಮುಂಬೈ ತಂಡದ ಕ್ಯಾಪ್ಟನ್​ ರೋಹಿತ್​ ಶರ್ಮಾ ಗಾಯಗೊಂಡಿದ್ದಾಗಿ ತಿಳಿದು ಬಂದಿದೆ. ಅವರಿಗೆ ನೋವಾಗಿರುವ ಸಂಗತಿ ಫಿಜಿಯೋ ನಿತೀಶ್​ ಪಟೇಲ್​ಗೆ ಗೊತ್ತಾಗುತ್ತಿದ್ದಂತೆ ಅವರನ್ನ ಡ್ರೆಸ್ಸಿಂಗ್ ರೂಂಗೆ ಕರೆತಂದು ಚಿಕಿತ್ಸೆ ನೀಡಿದ್ದಾರೆ. ಇದಾದ ಬಳಿಕ ಅವರು ಪ್ರ್ಯಾಕ್ಟೀಸ್​ಗಾಗಿ ಮೈದಾನಕ್ಕಿಳಿದಿಲ್ಲ.

ಈಗಾಗಲೇ ಮುಂಬೈ ಇಂಡಿಯನ್ಸ್​ ತಂಡದ ವೇಗದ ಬೌಲರ್​ ಜಸ್​ಪ್ರೀತ್ ಬುಮ್ರಾ ಗಾಯದ ಸಮಸ್ಯೆಗೆ ಒಳಗಾಗಿ ತದನಂತರ ಚೇತರಿಸಿಕೊಂಡಿದ್ದಾರೆ. ಒಂದು ವೇಳೆ ರೋಹಿತ್​​ ಶರ್ಮಾ ಗಂಭೀರವಾಗಿ ಗಾಯಗೊಂಡಿದ್ದರೆ, ವಿಶ್ವಕಪ್​ಗೆ ಅವರ ಆಯ್ಕೆ ಅನುಮಾನ ಎನ್ನಲಾಗುತ್ತಿದೆ. ಜತೆಗೆ ಇದು ಟೀಂ ಇಂಡಿಯಾಗೆ ದೊಡ್ಡ ಆಘಾತವಾಗಲಿದೆ.

Intro:Body:

ಈಗಾಗಲೇ ಮುಂಬೈ ಇಂಡಿಯನ್ಸ್​ ತಂಡದ ವೇಗದ ಬೌಲರ್​ ಜಸ್​ಪ್ರೀತ್ ಬುಮ್ರಾ ಗಾಯದ ಸಮಸ್ಯೆಗೆ ಒಳಗಾಗಿ ತದನಂತರ ಚೇತರಿಸಿಕೊಂಡಿದ್ದಾರೆ. ಒಂದು ವೇಳೆ ರೋಹಿತ್​​ ಶರ್ಮಾ ಗಂಭೀರವಾಗಿ ಗಾಯಗೊಂಡಿದ್ದರೆ, ವಿಶ್ವಕಪ್​ಗೆ ಅವರ ಆಯ್ಕೆ ಅನುಮಾನ ಎನ್ನಲಾಗುತ್ತಿದೆ. ಜತೆಗೆ ಇದು ಟೀಂ ಇಂಡಿಯಾಗೆ ದೊಡ್ಡ ಅಘಾತವಾಗಲಿದೆ. 

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.