ETV Bharat / sports

ಎನ್​ಸಿಎನಲ್ಲಿ ದ್ರಾವಿಡ್​, ಜೋಶಿ ಎದುರಿಗೆ ಬೌಲಿಂಗ್ ಪರೀಕ್ಷೆ ಎದುರಿಸಿದ ಇಶಾಂತ್​ ಶರ್ಮಾ - ishant fitness test

ಡಿಸೆಂಬರ್​ 17ರಂದು ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ ಡೇ ಅಂಡ್​ ನೈಟ್ ಟೆಸ್ಟ್​ ಮೂಲಕ ಟೆಸ್ಟ್​ ಸರಣಿ ಆರಂಭಿಸಲಿದೆ. ಈ ಸರಣಿಗೆ ಐಪಿಎಲ್​ ವೇಳೆ ಗಾಯಕ್ಕೊಳಗಾಗಿರುವ ಭಾರತ ತಂಡ ಅನುಭವಿ ಬೌಲರ್​ ಇಶಾಂತ್​ ಶರ್ಮಾ ಖಚಿತತೆ ಇನ್ನೂ ನಿಗೂಢವಾಗಿ ಉಳಿದಿದೆ. ಸದ್ಯಕ್ಕೆ ಅವರು ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್​ ಅಕಾಡೆಮಿಯಲ್ಲಿ ಪುನರ್​ ವಸತಿಯಲ್ಲಿದ್ದು, ಫಿಟ್​ನೆಸ್​ ತರಬೇತಿ ಪಡೆಯುತ್ತಿದ್ದಾರೆ.

ಇಶಾಂತ್​ ಶರ್ಮಾ
ಇಶಾಂತ್​ ಶರ್ಮಾ
author img

By

Published : Nov 18, 2020, 9:44 PM IST

ನವದೆಹಲಿ: ಗಾಯದ ಕಾರಣ ಆಸ್ಟ್ರೇಲಿಯಾ ಪ್ರವಾಸಕ್ಕೆ ಆಯ್ಕೆಯಾಗದೆ ಉಳಿದಿರುವ ಇಶಾಂತ್​ ಶರ್ಮಾ ಬಾಗಶಃ ಫಿಟ್​ ಆಗಿದ್ದು, ಇಂದು ಆಯ್ಕೆ ಸಮಿತಿ ಅಧ್ಯಕ್ಷ ಸುನೀಲ್ ಜೋಶಿ ಮತ್ತು ಎನ್​ಸಿಎ ಮುಖ್ಯಸ್ಥ ರಾಹುಲ್ ದ್ರಾವಿಡ್​ ಮುಂದೆ ಬೌಲಿಂಗ್​ ಮಾಡುವ ಮೂಲಕ ಫಿಟ್​ನೆಸ್​ ಪರೀಕ್ಷೆ ಎದುರಿಸಿದ್ದಾರೆಂದು ತಿಳಿದು ಬಂದಿದೆ.

ಡಿಸೆಂಬರ್​ 17ರಂದು ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ ಡೇ ಅಂಡ್​ ನೈಟ್ ಟೆಸ್ಟ್​ ಮೂಲಕ ಟೆಸ್ಟ್​ ಸರಣಿ ಆರಂಭಿಸಲಿದೆ. ಈ ಸರಣಿಗೆ ಐಪಿಎಲ್​ ವೇಳೆ ಗಾಯಕ್ಕೊಳಗಾಗಿರುವ ಭಾರತ ತಂಡ ಅನುಭವಿ ಬೌಲರ್​ ಇಶಾಂತ್​ ಶರ್ಮಾ ಖಚಿತತೆ ಇನ್ನೂ ನಿಗೂಢವಾಗಿ ಉಳಿದಿದೆ. ಸದ್ಯಕ್ಕೆ ಅವರು ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್​ ಅಕಾಡೆಮಿಯಲ್ಲಿ ಪುನರ್​ ವಸತಿಯಲ್ಲಿದ್ದು, ಫಿಟ್​ನೆಸ್​ ತರಬೇತಿ ಪಡೆಯುತ್ತಿದ್ದಾರೆ.

ಭಾರತ ತಂಡದ ವೇಗಿಗಳು
ಭಾರತ ತಂಡದ ವೇಗಿಗಳು

ಸೈಡ್​ ಸ್ಟ್ರೈನ್​ ಬೌಲರ್​ಗಳಲ್ಲಿ ಸಾಮಾನ್ಯವಾಗಿದೆ. ಇಶಾಂತ್​ ಎನ್​ಸಿಎ ನಿರ್ದೇಶಕ ದ್ರಾವಿಡ್​ ಮತ್ತು ಪಿಸಿಯೋ ಆಶಿಶ್ ಕೌಶಿಕ್​ ಕಣ್ಗಾವಲಿನಲ್ಲಿ ತರಬೇತಿ ಕಾರ್ಯದಲ್ಲಿದ್ದಾರೆ.

ಎನ್​ಸಿಎ ಕೋಚ್ ಆಗಿರುವ ಪರಾಸ್​ ಮಾಂಬ್ರೆ ಮತ್ತು ಮನ್ಸೂರ್ ಆಲಿಖಾನ್​ ಅವರೊಂದಿಗೆ ಇಶಾಂತ್​ ಸಿಂಗಲ್​ ಸ್ಟಂಪ್​ಗೆ ಗುರಿಯಾಗಿಸಿ ಬೌಲಿಂಗ್ ಮಾಡಿದ್ದಾರೆ. ಈ ವೇಳೆ ದ್ರಾವಿಡ್​ ಹಾಗೂ ಆಯ್ಕೆ ಸಮಿತಿ ಅಧ್ಯಕ್ಷ ಸುನೀಲ್ ಜೋಶಿ ಕೂಡ ಹಾಜರಿದ್ದರೆಂದು ತಿಳಿದು ಬಂದಿದೆ.

ಈಗಾಗಲೇ ಬಿಸಿಸಿಐ ಅಧ್ಯಕ್ಷ ಸೌರವ್​ ಗಂಗೂಲಿ ಕೂಡ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್​ ಸರಣಿ ವೇಳೆಗೆ ಇಶಾಂತ್​ ಫಿಟ್​ ಆಗಲಿದ್ದಾರೆ ಎಂಬ ನಿರೀಕ್ಷೆಯಲ್ಲಿದ್ದೇವೆ. ಅವರ ಲಭ್ಯತೆ ತಂಡಕ್ಕೆ ಅಗತ್ಯವಾಗಿದೆ. ಆದರೆ ಬಿಸಿಸಿಐ ಪ್ರೋಟೋಕಾಲ್​ಗಳ ಪ್ರಕಾರ ತಂಡ ಸೇರಿಕೊಳ್ಳುವ ಮುನ್ನ ಇಶಾಂತ್ ಆಸ್ಟ್ರೇಲಿಯಾದಲ್ಲಿ ಎರಡು ಪ್ರಥಮ ದರ್ಜೆ ಪಂದ್ಯಗಳನ್ನಾಡಬೇಕಿದೆ ಎಂದು ಗಂಗೂಲಿ ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.