ನವದೆಹಲಿ: ಸ್ನಾಯು ಸೆಳೆತಕ್ಕೊಳಗಾಗಿ ಕಳೆದೆರಡು ಐಪಿಎಲ್ ಪಂದ್ಯಗಳಿಂದ ಹೊರಗುಳಿದಿದ್ದ ಮುಂಬೈ ಇಂಡಿಯನ್ಸ್ ತಂಡದ ನಾಯಕ ಭಾನುವಾರ ಬಿಸಿಸಿಐ ಪ್ರಕಟಿಸಿರುವ ಆಸಿಸ್ ಪ್ರವಾಸದ ಎಲ್ಲಾ ಮಾದರಿಯ ತಂಡದಿಂದಲೂ ಹೊರಬಿದ್ದಿದ್ದಾರೆ. ಆದರೆ ಅವರು ಚೇತರಿಸಿಕೊಳ್ಳುತ್ತಿದ್ದು ನವೆಂಬರ್ 3 ರಂದು ಮುಂಬೈ ತಂಡಕ್ಕೆ ಮರಳಲಿದ್ದಾರೆ ಎನ್ನಲಾಗಿದೆ.
ರೋಹಿತ್ ಗೈರಿನಲ್ಲಿ ವಿರಾಟ್ ಕೊಹ್ಲಿ ಜೊತೆ ಉಪನಾಯಕನಾಗಿ ಕನ್ನಡಿಗ ಕೆ.ಎಲ್.ರಾಹುಲ್ ಆಯ್ಕೆಯಾಗಿದ್ದಾರೆ. ರೋಹಿತ್ ಅನುಪಸ್ಥಿತಿಯಲ್ಲಿ ರಾಹುಲ್ ಟೆಸ್ಟ್ ತಂಡದ ಆರಂಭಿಕನಾಗಿ ಎರಡು ವರ್ಷಗಳ ಬಳಿಕ ಮತ್ತೆ ತಂಡ ಸೇರಿಕೊಂಡಿದ್ದಾರೆ. ಆದರೆ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ರಿಷಭ್ ಪಂತ್ ಟೆಸ್ಟ್ ತಂಡದಲ್ಲಿದ್ದು, ಸೀಮಿತ ಓವರ್ಗಳ ತಂಡದಿಂದ ಹೊರಬಿದ್ದಿದ್ದಾರೆ.
ಅನುಭವಿ ಹಾಗೂ ಭಾರತ ತಂಡದ ಸೀಮಿತ ಓವರ್ಗಳ ಉಪನಾಯಕನಾಗಿದ್ದ ರೋಹಿತ್ ಶರ್ಮಾ ಹಾಗೂ ಇಶಾಂತ್ ಶರ್ಮಾ ಬಿಸಿಸಿಐ ವೈದ್ಯಕೀಯ ತಂಡದ ವೀಕ್ಷಣೆಯಲ್ಲಿರಲಿದ್ದಾರೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಬಿಸಿಸಿಐನ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
-
4️⃣5️⃣ seconds of RO 4️⃣5️⃣ in full flow!🔥#OneFamily #MumbaiIndians #MI #Dream11IPL @ImRo45 pic.twitter.com/65ajVQcEKc
— Mumbai Indians (@mipaltan) October 26, 2020 " class="align-text-top noRightClick twitterSection" data="
">4️⃣5️⃣ seconds of RO 4️⃣5️⃣ in full flow!🔥#OneFamily #MumbaiIndians #MI #Dream11IPL @ImRo45 pic.twitter.com/65ajVQcEKc
— Mumbai Indians (@mipaltan) October 26, 20204️⃣5️⃣ seconds of RO 4️⃣5️⃣ in full flow!🔥#OneFamily #MumbaiIndians #MI #Dream11IPL @ImRo45 pic.twitter.com/65ajVQcEKc
— Mumbai Indians (@mipaltan) October 26, 2020
ಇತ್ತ ಬಿಸಿಸಿಐ ಆಸ್ಟ್ರೇಲಿಯಾ ವಿರುದ್ಧ ಸರಣಿಯಲ್ಲಿ ರೋಹಿತ್ ಹೆಸರನ್ನು ಬಿಟ್ಟ ವಿಚಾರ ತಿಳಿಯುತ್ತಿದ್ದಂತೆ ಅತ್ತ ರೋಹಿತ್ ಶರ್ಮಾ ನೆಟ್ನಲ್ಲಿ ಅಭ್ಯಾಸ ಆರಂಭಿಸಿದ್ದಾರೆ. ಮೂಲಗಳ ಪ್ರಕಾರ ರೋಹಿತ್ ನವೆಂಬರ್ 3 ರಂದು ಮುಂಬೈನ ಕೊನೆಯ ಲೀಗ್ ಪಂದ್ಯದಲ್ಲಿ ಆಡುವ ಸಾಧ್ಯತೆಯಿದೆ.
ಒಂದು ವೇಳೆ ರೋಹಿತ್ ಐಪಿಎಲ್ನಲ್ಲಿ ಫಿಟ್ ಆಗಿ ಮುಂದುವಿರಿದರೆ ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ಆಯ್ಕೆಯಾಗುವ ಸಾಧ್ಯತೆಯಿದೆ.
ಆಸ್ಟ್ರೇಲಿಯಾ ಪ್ರವಾಸದಲ್ಲಿ ಭಾರತ ತಂಡ 3 ಟಿ20 , 3 ಏಕದಿನ ಹಾಗೂ 4 ಟೆಸ್ಟ್ ಪಂದ್ಯಗಳನ್ನು ಆಡಲಿದೆ.