ETV Bharat / sports

ಮ್ಯಾಚ್​ ಫಿಕ್ಸಿಂಗ್​ಗೆ ಯತ್ನ... ಬಿಸಿಸಿಐಗೆ ದೂರು ನೀಡಿದ ಮಹಿಳಾ ಆಟಗಾರ್ತಿ

ಇಂಗ್ಲೆಂಡ್​ ವಿರುದ್ಧದ ಸರಣಿಯ ವೇಳೆ ಮ್ಯಾಚ್​ ಫಿಕ್ಸಿಂಗ್ ಮಾಡುವಂತೆ ಇಬ್ಬರು ವ್ಯಕ್ತಿಗಳು ತಮ್ಮನ್ನು ಸಂಪರ್ಕಿಸಿದ್ದರೆಂದು ಭಾರತ ಮಹಿಳಾ ಆಟಗಾರ್ತಿಯೊಬ್ಬರು ಬಿಸಿಸಿಐ ಭ್ರಷ್ಟಾಚಾರ ನಿಗ್ರಹ ಘಟಕಕ್ಕೆ ದೂರು ನೀಡಿದ್ದಾರೆ.

Indian Women Team Player
author img

By

Published : Sep 16, 2019, 11:40 PM IST

ಮುಂಬೈ: ಈ ವರ್ಷದ ಆರಂಭದಲ್ಲಿ ಮ್ಯಾಚ್​ ಫಿಕ್ಸಿಂಗ್ ಮಾಡುವಂತೆ ಇಬ್ಬರು ವ್ಯಕ್ತಿಗಳು ತಮ್ಮನ್ನು ಸಂಪರ್ಕಿಸಿದ್ದರೆಂದು ಭಾರತ ಮಹಿಳಾ ಆಟಗಾರ್ತಿಯೊಬ್ಬರು ಬಿಸಿಸಿಐ ಭ್ರಷ್ಟಾಚಾರ ನಿಗ್ರಹ ಘಟಕಕ್ಕೆ ದೂರು ನೀಡಿದ್ದಾರೆ.

ಒಡಿಸ್ಸಾ ಮೂಲಕ ರಾಕೇಶ್​ ಬಫ್ನ, ಹಾಗೂ ಜೇತೇಂದ್ರ ಕೊತಾರಿ​ ಎಂಬುವವರು ಭಾರತ ತಂಡದ ಮಹಿಳಾ ಆಟಗಾರ್ತಿಗೆ ಮ್ಯಾಚ್​ ಫಿಕ್ಸಿಂಗ್​ ಮಾಡುವಂತೆ ಒತ್ತಾಯಿಸಿದ್ದರು ಎಂದು ಆರೋಪಿಸಿ ಬೆಂಗಳೂರಿನಲ್ಲಿ ದೂರು ದಾಖಲಿಸಾಗಿದೆ. ಈ ವ್ಯಕ್ತಿಗಳ ಮೇಲೆ ಐಪಿಸಿ ಸೆಕ್ಷನ್​ 420, ಮೋಸ, ಅಪ್ರಮಾಣಿಕ ಆಸ್ತಿಯ ವಿತರಣೆಗೆ ಯತ್ನದ ಪ್ರಕರಣ ದಾಖಲಿಸಲಾಗಿದೆ.

"ಇಂದು ಬೆಂಗಳೂರಿನಲ್ಲಿ ಮ್ಯಾಚ್​ ಫಿಕ್ಸಿಂಗ್​ ಒತ್ತಾಯ ಮಾಡಿದ ಆರೋಪದ ಮೇಲೆ ನಾವು ಇಬ್ಬರು ವ್ಯಕ್ತಿಗಳ ಮೇಲೆ ಎಫ್ಐಆರ್​ ದಾಖಲಿಸಿದ್ದೇ" ಎಂದು ಬಿಸಿಸಿಐ ಭ್ರಷ್ಟಚಾರ ನಿಗ್ರಹ ಘಟಕದ ಮುಖ್ಯಸ್ಥ ಅಜಿತ್​ ಸಿಂಗ್​ ಶೇಖಾವತ್​ ಮಾಧ್ಯಮಕ್ಕೆ ತಿಳಿಸಿದ್ದಾರೆ.

ಜಿತೇಂದರ್​ ಕೊತಾರಿ ಮಹಿಳಾ ಆಟಗಾರ್ತಿಯ ಮ್ಯಾನೇಜರ್​ರೊಂದಿಗೆ ಕಳೆದ ಒಂದು ವರ್ಷದಿಂದ ಸಂಪರ್ಕದಲ್ಲಿದ್ದು, ಕೋರಿಯರ್​ ಮೂಲಕ ಆಟಗಾರ್ತಿಗೆ ಫಿಕ್ಸಿಂಗ್​ ಒಪ್ಪಂದಕ್ಕೆ ಬೇಡಿಕೆ ಇಟ್ಟಿದ್ದಾರೆ. ಮತ್ತೆ ಫೆಬ್ರವರಿಯಲ್ಲಿ ಕೊತಾರಿ, ಬಫ್ನ ಎಂಬುವವರನ್ನು ಬಿಟ್ಟು ಎನ್​ಸಿಎನಲ್ಲಿ ತರಬೇತಿ ಮಾಡುತ್ತಿದ್ದ ವೇಳೆ ಅದೇ ಆಟಗಾರ್ತಿಗೆ ಮ್ಯಾಚ್​ ಫಿಕ್ಸ್​ ಮಾಡಲು ಮತ್ತೆ ಸಂಪರ್ಕ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ವರದಿ ಪ್ರಕಾರ ಆ ಇಬ್ಬರು ಫಿಕ್ಸರ್​ಗಳು ಮಹಿಳಾ ಕ್ರಿಕೆಟರ್​ಗೆ ಫೆಬ್ರವರಿಯಲ್ಲಿ ನಡೆದಿದ್ದ ಇಂಗ್ಲೆಂಡ್​ ವಿರುದ್ಧದ ಸರಣಿಯಲ್ಲಿ ಒಂದು ಪಂದ್ಯಕ್ಕೆ ಒಂದು ಲಕ್ಷ ರೂಪಾಯಿ ಆಫರ್​ ನೀಡಿದ್ದರೆಂದು ಆರೋಪಿಸಲಾಗಿದೆ. ಜೊತೆಗೆ ತಂಡದ ನಾಯಕಿಯನ್ನು ಕೂಡ ಶಾಮೀಲು ಮಾಡುವಂತೆ ಕೋರಿದ್ದಾರು ಎಂದು ತಿಳಿದು ಬಂದಿದೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.