ಲಂಡನ್: ಇಂಗ್ಲೆಂಡ್ನಲ್ಲಿ ನಡೆಯುತ್ತಿರುವ ಕಿಯಾ ಮಹಿಳೆಯ ಸೂಪರ್ ಲೀಗ್ನಲ್ಲಿ ಭಾರತದ ಟಿ20 ತಂಡದ ನಾಯಕಿ ಹರ್ಮನ್ ಪ್ರೀತ್ ಕೌರ್, ಉಪನಾಯಕಿ ಸ್ಮೃತಿ ಮಂಧಾನ ಹಾಗೂ 18 ವರ್ಷದ ಜೆಮೈಮಾ ರಾಡ್ರಿಗಸ್ ಭರ್ಜರಿ ಅರ್ಧಶತಕ ದಾಖಲಿಸಿ ಮಿಂಚಿದ್ದಾರೆ.
ಲಾಂಕಶೈರ್ ಥಂಡರ್ ತಂಡದ ಪರ ಬ್ಯಾಟಿಂಗ್ ನಡೆಸಿದ ಹರ್ಮನ್ ಪ್ರೀತ್ ಕೌರ್ ವೆಸ್ಟರ್ನ್ ಸ್ಟಾರ್ಮ್ ವಿರುದ್ಧ ಕೇವಲ 37 ಎಸೆತಗಳಲ್ಲಿ 6 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 50 ರನ್ಗಳಿಸಿದ್ದರು. ಕೌರ್ ಅರ್ಧಶತಕದ ನೆರವಿನಿಂದ ಲಾಂಕಶೈರ್ 160 ರನ್ಗಳ ಟಾರ್ಗೇಟ್ ನೀಡಿತ್ತು.
ಆದರೆ ಈ ಮೊತ್ತವನ್ನು ಬೆನ್ನೆತ್ತಿದ ವೆಸ್ಟರ್ನ್ ಸ್ಟಾರ್ಮ್ ತಂಡ ಮತ್ತೊಬ್ಬ ಭಾರತದ ಸ್ಫೋಟಕ ಆಟಗಾರ್ತಿ ಸ್ಮೃತಿ ಮಂಧಾನ ಅವರ ಅರ್ಧಶತಕದ ನೆರವಿನಿಂದ 5 ವಿಕೆಟ್ ಕಳೆದುಕೊಂಡು ಗುರಿ ತಲುಪಿತು. 43 ಎಸೆತಗಳನ್ನೆದುರಿಸಿದ ಮಂದಾನ 9 ಬೌಂಡರಿ ಹಾಗೂ 2 ಭರ್ಜರಿ ಸಿಕ್ಸರ್ ನೆರವಿನಿಂದ 72 ರನ್ಗಳಿಸಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.
-
72 from 43 balls!! What a performance from @mandhana_smriti!! 👍👍#StormTroopers pic.twitter.com/67xx2O3AK0
— Western Storm (@WesternStormKSL) August 18, 2019 " class="align-text-top noRightClick twitterSection" data="
">72 from 43 balls!! What a performance from @mandhana_smriti!! 👍👍#StormTroopers pic.twitter.com/67xx2O3AK0
— Western Storm (@WesternStormKSL) August 18, 201972 from 43 balls!! What a performance from @mandhana_smriti!! 👍👍#StormTroopers pic.twitter.com/67xx2O3AK0
— Western Storm (@WesternStormKSL) August 18, 2019
ಮಂಧಾನ,ಕೌರ್ ನಂತರ ಕಿಯಾ ಸೂಪರ್ ಲೀಗ್ನಲ್ಲಿ ಅವಕಾಶಗಿಟ್ಟಿಸಿಕೊಂಡಿರುವ 18 ವರ್ಷದ ಜೆಮೈಮಾ ರಾಡ್ರಿಗಸ್ ಕೂಡ ಯಾರ್ಕ್ಶೈರ್ ಡೈಮಂಡ್ ಪರ 40 ಎಸೆತಗಳಲ್ಲಿ 6 ಬೌಂಡರಿ ಸಹಿತ 58 ರನ್ಗಳಿಸಿ ಮಿಂಚಿದರು. ಆದರೆ ಡೈಮಂಡ್ 6 ವಿಕೆಟ್ಗಳ ಸೋಲುನಭವಿಸಿತು.
ಕೌರ್ ಹಾಗೂ ಜೆಮೈಮಾ ಅರ್ಧಶತಕ ಸೋಲಿನಿಂದ ವ್ಯರ್ಥವಾದರೆ, ಮಂಧಾನ ಅರ್ಧಶತಕ ಗೆಲುವಿನ ಕೊಡುಗೆಯಾಯಿತು. ಮಂಧಾನ ಪ್ರತಿನಿಧಿಸುವ ವೆಸ್ಟರ್ನ್ ಸ್ಟಾರ್ಮ್ ತಂಡ ಸತತ 6 ಗೆಲುವು ಪಡೆದು ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ.