ಸಿಡ್ನಿ: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯಬೇಕಿರುವ ನಾಲ್ಕನೇ ಟೆಸ್ಟ್ ಪಂದ್ಯದ ಬಗ್ಗೆ ಇದ್ದ ಎಲ್ಲ ಅನುಮಾನಗಳು ಬಗೆಹರಿದಿದ್ದು, ಸರಣಿಯ ಅಂತಿಮ ಟೆಸ್ಟ್ ಪಂದ್ಯಕ್ಕಾಗಿ ಭಾರತ ತಂಡ ಬ್ರಿಸ್ಬೇನ್‌ಗೆ ಪ್ರಯಾಣಿಸುವುದು ಖಚಿತವಾಗಿದೆ.
ಬ್ರಿಸ್ಬೇನ್‌ನಲ್ಲಿನ ಕಠಿಣ ಕ್ವಾರಂಟೈನ್ ನಿಯಮಗಳ ಬಗ್ಗೆ ಭಾರತೀಯ ತಂಡ ಕೋಪಗೊಂಡಿದ್ದು, ಅಂತಿಮ ಟೆಸ್ಟ್‌ಗಾಗಿ ಬ್ರಿಸ್ಬೇನ್‌ಗೆ ಹೋಗಲು ನಿರಾಕರಿಸುತ್ತಿದೆ ಎಂದು ಆಸೀಸ್ ಮಾಧ್ಯಮಗಳು ವರದಿ ಮಾಡಿದ್ದವು. ಸಿಡ್ನಿಯಲ್ಲಿ ಹೆಚ್ಚುತ್ತಿರುವ ಕೊರೊನಾ ಪ್ರಕರಣಗಳ ದೃಷ್ಟಿಯಿಂದ, ಕ್ವೀನ್ಸ್‌ಲ್ಯಾಂಡ್ ರಾಜ್ಯವು ಸಿಡ್ನಿಯಿಂದ ಬ್ರಿಸ್ಬೇನ್‌ಗೆ ಬರುವವರು ಕಠಿಣ ಪ್ರೊಟೋಕಾಲ್‌ಗಳನ್ನು ಅನುಸರಿಸಬೇಕಾಗುತ್ತದೆ ಎಂದು ಸ್ಪಷ್ಟಪಡಿಸಿತ್ತು.
ಮುನ್ನೆಚ್ಚರಿಕೆಯಾಗಿ ಕ್ವೀನ್ಸ್‌ಲ್ಯಾಂಡ್ ರಾಜ್ಯವು ತನ್ನ ಗಡಿಗಳನ್ನು ಮುಚ್ಚಿತ್ತಾದರೂ, ಆದರೆ ಕಠಿಣ ಕೋವಿಡ್ ಪ್ರೋಟೋಕಾಲ್‌ಗಳನ್ನು ಅನುಸರಿಸಿ ಭಾರತೀಯ ತಂಡವನ್ನು ಸ್ವಾಗತಿಸಲು ಸಿದ್ಧವಾಗಿತ್ತು.
ಬ್ರಿಸ್ಬೇನ್‌ನಲ್ಲಿ ರೂಪಾಂತರ ಕೊರೊನಾ ವೈರಸ್ ಪ್ರಕರಣಗಳು ಕಂಡುಬಂದಿದ್ದ ಕಾರಣ ಅಲ್ಲಿ ಸಂಪೂರ್ಣ ಲಾಕ್‌ಡೌನ್ ಮಾಡಲಾಗಿತ್ತು. ಮೂರು ದಿನಗಳ ಈ ಲಾಕ್‌ಡೌನ್ ಸೋಮವಾರ ರಾತ್ರಿ ಕೊನೆಗೊಳ್ಳಲಿದೆ. ಜೊತೆಗೆ ಕೊರೊನಾ ವೈರಸ್ ಪ್ರಕರಣಗಳೂ ಈಗ ಕಡಿಮೆಯಾಗಿವೆ.
ಭಾರತ ತಂಡವು ಲಿಖಿತವಾಗಿ ಕೆಲ ಬೇಡಿಕೆಗಳನ್ನು ಕೇಳಿದೆ ಹಾಗೂ ಸದ್ಯ ತಂಡವು ಸಂಪೂರ್ಣ ಪ್ರಕ್ರಿಯೆಯಿಂದ ತೃಪ್ತಿಗೊಂಡಿದೆ ಎಂದು ಹೇಳಲಾಗಿದ್ದು. ಪೂರ್ವ ನಿರ್ಧರಿತ ವೇಳಾಪಟ್ಟಿಯಂತೆ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ನಾಲ್ಕನೇ ಟೆಸ್ಟ್ ಜನವರಿ 15 ರಿಂದ 19 ರವರೆಗೆ ಬ್ರಿಸ್ಬೇನ್‌ನಲ್ಲಿ ನಡೆಯಲಿದೆ.