ಪುಣೆ : ಮೊದಲೆರಡು ಪಂದ್ಯಗಳಲ್ಲಿ ಭಾರತದ ಪರ ಅದ್ಭುತ ಬೌಲಿಂಗ್ ಪ್ರದರ್ಶನ ತೋರಿರುವ ಕನ್ನಡಿಗ ಪ್ರಸಿಧ್ ಕೃಷ್ಣ ಅವರ ಪೇಸ್ ಮತ್ತು ಸೀಮ್ ಬೌಲಿಂಗ್ ಹೊಂದಿರುವುದರಿಂದ ಅವರು ಟೆಸ್ಟ್ ಕ್ರಿಕೆಟ್ನಲ್ಲಿ ಆಡಲು ಅರ್ಹರಾಗಿದ್ದಾರೆ ಎಂದು ಲೆಜೆಂಡರಿ ಬ್ಯಾಟ್ಸ್ಮನ್ ಸುನೀಲ್ ಗವಾಸ್ಕರ್ ಹೇಳಿದ್ದಾರೆ.
25 ವರ್ಷದ ಕರ್ನಾಟಕದ ಬೌಲರ್ ಇಂಗ್ಲೆಂಡ್ ಎದುರಿನ ಮೊದಲ ಏಕದಿನ ಪಂದ್ಯದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಪದಾರ್ಪಣೆ ಮಾಡಿದ್ದರು. ಅವರು ಮೊದಲ ಪಂದ್ಯದಲ್ಲಿ ದಾಖಲೆಯ 4 ವಿಕೆಟ್ ಮತ್ತು 2ನೇ ಪಂದದ್ಯದಲ್ಲಿ 2 ವಿಕೆಟ್ ಪಡೆದಿದ್ದರು.
ಅವರ ಬೌಲಿಂಗ್ ಕೌಶಲ್ಯ ಟೆಸ್ಟ್ಗೆ ಸೂಕ್ತವಾಗಿದೆ. ಹಾಗಾಗಿ, 2018ರಲ್ಲಿ ಜಸ್ಪ್ರೀತ್ ಬುಮ್ರಾರನ್ನು ದೀರ್ಘ ಮಾದರಿ ಕ್ರಿಕೆಟ್ನಲ್ಲಿ ಪ್ರಯೋಗಿಸಿದ ರೀತಿ ಇವರನ್ನ ಪರಿಗಣಿಸಬೇಕು ಎಂದು ಗವಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ.
ಇದನ್ನು ಓದಿ: ನಮ್ಮ ತಂಡ ಉತ್ತಮವಾಗಿ ಬೌಲಿಂಗ್ ಮಾಡಬಹುದಿತ್ತು : ಪ್ರಸಿದ್ಧ್ ಕೃಷ್ಣ
"ನಾನು ನಿಮಗೆ ಹೇಳುವುದೇನೆಂದರೆ, ಬೌಲಿಂಗ್ನಲ್ಲಿ ಈ ರೀತಿ ಸೀಮ್ ಅಪ್ ಎಸೆತಗಳನ್ನು ಹೊಂದಿರುವ ಬೌಲರ್ರನ್ನು ಭಾರತೀಯ ಆಯ್ಕೆ ಸಮಿತಿಯು ರೆಡ್ಬಾಲ್ ಕ್ರಿಕೆಟ್ಗೆ(ಟೆಸ್ಟ್) ಗಂಭೀರವಾಗಿ ಪರಿಗಣಿಸಬೇಕು" ಎಂದು ಟಿವಿ ವೀಕ್ಷಕ ವಿವರಣೆ ವೇಳೆ ತಿಳಿಸಿದ್ದಾರೆ.
ಟಿ20 ಮತ್ತು ಏಕದಿನ ಕ್ರಿಕೆಟ್ನಲ್ಲಿ ಜಸ್ಪ್ರೀತ್ ಬುಮ್ರಾರನ್ನು ಪರಿಗಣಿಸಿದ ಹಾಗೆ ಇವರಿಗೂ ಅವಕಾಶ ನೀಡಬೇಕು, ಇದೀಗ ಬುಮ್ರಾ ಭಾರತದ ಪ್ರಮುಖ ಬೌಲರ್ ಆಗಿದ್ದಾರೆ. ಕೃಷ್ಣರ ಬೌಲಿಂಗ್ನಲ್ಲಿ ಪೇಸ್ ಮತ್ತು ಸೀಮ್ ಅಪ್ ಪೊಸಿಸನ್ ರೆಡ್ ಬಾಲ್ ಕ್ರಿಕೆಟ್ಗೆ ಅತ್ಯುತ್ತಮವಾಗಿದೆ ಎಂದು ಅವರು ಹೇಳಿದ್ದಾರೆ.
ಪ್ರಸಿಧ್ ಕೃಷ್ಣ ಕೇವಲ 9 ಪ್ರಥಮ ದರ್ಜೆ ಪಂದ್ಯಗಳಿಂದ 34 ವಿಕೆಟ್ ಪಡೆದಿದ್ದಾರೆ. 50 ಲಿಸ್ಟ್ ಎ ಪಂದ್ಯಗಳಿಂದ 87 ವಿಕೆಟ್ ಪಡೆದಿದ್ದಾರೆ.
ಇದನ್ನು ಓದಿ:ಪ್ರಸಿಧ್ ಕೃಷ್ಣ ಆಕ್ರಮಣಕಾರಿ, ಆಟದ ಬಗ್ಗೆ ಅದ್ಭುತ ಜ್ಞಾನ ಹೊಂದಿರುವ ಆಟಗಾರ: ಕೆ.ಎಲ್ ರಾಹುಲ್