ETV Bharat / sports

ಐಪಿಎಲ್​ ಬಹುಮಾನ ಮೊತ್ತ ಶೇ.50ರಷ್ಟು ಕಡಿತಗೊಳಿಸಿದ ಬಿಸಿಸಿಐ!! - ಕೋವಿಡ್​ 19 ಕಾರಣ ಬಹುಮಾನ ಮೊತ್ತದಲ್ಲಿ ಇಳಿಕೆ

ಐಪಿಎಲ್​ನ ಬಹುಮಾನ ಮೊತ್ತ ಈಗಲೂ ವಿಶ್ವದ ಇತರೆ ಲೀಗ್​ಗಳಿಗೆ ಹೋಲಿಸಿದ್ರೆ ಹೆಚ್ಚಿದೆ. ಐಪಿಎಲ್ ಬಿಟ್ಟರೆ ಪಾಕಿಸ್ತಾನ ಪ್ರೀಮಿಯರ್​ ಲೀಗ್​ 2020ರ ಆವೃತ್ತಿಯಲ್ಲಿ ಬಹುಮಾನ ಮೊತ್ತವನ್ನು ಹೆಚ್ಚಿಸಿದ್ದು ಸುಮಾರು ₹7ಕೋಟಿ ನೀಡಲಿದೆ. ಆಸ್ಟ್ರೇಲಿಯಾದ ಬಿಗ್​ಬ್ಯಾಶ್​ ಲೀಗ್​ 3 ಕೋಟಿ 31 ಲಕ್ಷ ರೂ. ನೀಡುತ್ತಿದೆ..

ಐಪಿಎಲ್​ ಬಹುಮಾನ ಮೊತ್ತದಲ್ಲಿ ಕುಸಿತ
ಐಪಿಎಲ್​ ಬಹುಮಾನ ಮೊತ್ತದಲ್ಲಿ ಕುಸಿತ
author img

By

Published : Sep 15, 2020, 4:32 PM IST

ಹೈದರಾಬಾದ್ ​: ಟಿ20 ಕ್ರಿಕೆಟ್​ ಜಗತ್ತಿನಲ್ಲಿ ಅತ್ಯಂತ ಹೆಚ್ಚು ಶ್ರೀಮಂತ ಲೀಗ್ ಆಗಿರುವ ಇಂಡಿಯನ್​ ಪ್ರೀಮಿಯರ್​ ಲೀಗ್​ನ 2020 ಆವೃತ್ತಿಯ ಬಹುಮಾನ ಮೊತ್ತವನ್ನು ಶೇ.50ರಷ್ಟನ್ನು ಕಡಿತ ಮಾಡಲಾಗಿದೆ.

ಐಪಿಎಲ್​ ಹರಾಜು ಹಲವಾರು ಅಂತಾರಾಷ್ಟ್ರೀಯ, ದೇಶೀಯ ಕ್ರಿಕೆಟಿಗರ ವೃತ್ತಿ ಜೀವನ ಹಾಗೂ ಬ್ಯಾಂಕ್​ ಬ್ಯಾಲೆನ್ಸ್‌ ರಾತ್ರೋ ರಾತ್ರಿ ಬದಲಾಯಿಸಿದೆ. ಟೂರ್ನಿಗಾಗಿ ಸಾಕಷ್ಟು ಮುಂಜಾಗೃತಾ ಕ್ರಮಗಳನ್ನು ತೆಗೆದುಕೊಂಡು ನಡೆಸುತ್ತಿರುವ ಬಿಸಿಸಿಐ ಕೋವಿಡ್-19ನ ಅಸಾಮಾನ್ಯ ಸನ್ನಿವೇಶದಲ್ಲಿ ಬಹುಮಾನ ಮೊತ್ತ ಕಡಿತ ಮಾಡುವುದಕ್ಕೆ ನಿರ್ಧರಿಸಿದೆ.

2020ರ ಐಪಿಎಲ್​ನ ಬಹುಮಾನ ಮೊತ್ತವೆಷ್ಟು?: 2019ಕ್ಕೆ ಹೋಲಿಸಿದ್ರೆ ಮಿಲಿಯನ್​ ಡಾಲರ್​ ಟೂರ್ನಮೆಂಟ್​ನ ಬಹುಮಾನ ಮೊತ್ತ ಶೇ.50ರಷ್ಟನ್ನು ಕಡಿತ ಮಾಡಿದೆ. ಬಿಸಿಸಿಐ ಎಲ್ಲಾ ಐಪಿಎಲ್ ಪ್ರಾಂಚೈಸಿಗಳಿಗೆ ಕಳುಹಿಸಿದ ಸುತ್ತೋಲೆಯಲ್ಲಿ ಬಹುಮಾನದ ಮೊತ್ತವನ್ನು 20 ಕೋಟಿ ರೂ.ಗೆ ಬದಲಾಗಿ 10 ಕೋಟಿ ರೂ. ಮಾತ್ರ ಪಡೆಯಲಿದೆ ಎಂದು ತಿಳಿಸಿದೆ.

ಐಪಿಎಲ್​ 2020
ಐಪಿಎಲ್​ 2020

ವೆಚ್ಚವನ್ನು ಕಡಿತಗೊಳಿಸುವ ಕ್ರಮಗಳ ಭಾಗವಾಗಿ ಬಹುಮಾನದ ಮೊತ್ತವನ್ನು ಪುನರ್​ ರಚಿಸಲಾಗಿದೆ. ಈ ಬಾರಿ ₹20 ಕೋಟಿ ಬದಲಾಗಿ ₹10 ಕೋಟಿ ಸಿಗಲಿದೆ. ರನ್ನರ್ಸ್​ ಅಪ್ ತಂಡ ₹12.5 ಕೋಟಿ ಬದಲಾಗಿ ₹6.25 ಕೋಟಿ ಪಡೆಯಲಿದೆ ಎಂದು ಬಿಸಿಸಿಐ ಅಧಿಸೂಚನೆ ಹೊರಡಿಸಿದೆ.

ಪಾಕಿಸ್ತಾನ ಸೂಪರ್​ ಲೀಗ್​
ಪಾಕಿಸ್ತಾನ ಸೂಪರ್​ ಲೀಗ್​

ಪ್ಲೇಆಫ್​ನಲ್ಲಿ ಸೋತು ಹೊರಬೀಳುವ ಎರಡು ತಂಡಗಳು ₹4.375 ಕೋಟಿ ಪಡೆಯಲಿವೆ ಎಂದು ತಿಳಿದು ಬಂದಿದೆ. ಎಲ್ಲಾ ಫ್ರಾಂಚೈಸಿಗಳು ಹಣಕಾಸಿನ ವಿಚಾರದಲ್ಲಿ ಉತ್ತಮ ಆರೋಗ್ಯ ಸ್ಥಿತಿಯಲ್ಲಿವೆ. ಅವರ ಆದಾಯವನ್ನು ಹೆಚ್ಚಿಸಲು ಪ್ರಾಯೋಜಕತ್ವದಂತಹ ಅನೇಕ ಮಾರ್ಗಗಳಿವೆ. ಆದ್ದರಿಂದ ಬಹುಮಾನ ಹಣದ ಕಡಿತದ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಬಿಸಿಸಿಐ ಮೂಲಗಳಿಂದ ತಿಳಿದು ಬಂದಿದೆ.

ಆದರೂ ಐಪಿಎಲ್​ನ ಬಹುಮಾನ ಮೊತ್ತ ಈಗಲೂ ವಿಶ್ವದ ಇತರೆ ಲೀಗ್​ಗಳಿಗೆ ಹೋಲಿಸಿದ್ರೆ ಹೆಚ್ಚಿದೆ. ಐಪಿಎಲ್ ಬಿಟ್ಟರೆ ಪಾಕಿಸ್ತಾನ ಪ್ರೀಮಿಯರ್​ ಲೀಗ್​ 2020ರ ಆವೃತ್ತಿಯಲ್ಲಿ ಬಹುಮಾನ ಮೊತ್ತವನ್ನು ಹೆಚ್ಚಿಸಿದ್ದು ಸುಮಾರು ₹7ಕೋಟಿ ನೀಡಲಿದೆ. ಆಸ್ಟ್ರೇಲಿಯಾದ ಬಿಗ್​ಬ್ಯಾಶ್​ ಲೀಗ್​ 3 ಕೋಟಿ 31 ಲಕ್ಷ ರೂ. ನೀಡುತ್ತಿದೆ.

ಬಿಗ್ ಬ್ಯಾಶ್​ ಟಿ20 ಲೀಗ್​
ಬಿಗ್ ಬ್ಯಾಶ್​ ಟಿ20 ಲೀಗ್​

ಈ ಹಿಂದಿನ ಐಪಿಎಲ್​ಗಳಲ್ಲಿ ಬಹುಮಾನದ ಮೊತ್ತವನ್ನು ನೋಡುವುದಾದ್ರೆ, 2008ರಲ್ಲಿ ₹4.8 ಕೋಟಿ ನೀಡಲಾಗಿತ್ತು. ಈ ಮೊತ್ತವನ್ನು 2014ರಲ್ಲಿ 3 ಪಟ್ಟು ಹೆಚ್ಚಿಸಲಾಗಿತ್ತು. 2014 ಮತ್ತು 15ರ ವಿಜೇತ ತಂಡಗಳು ₹15 ಕೋಟಿ ಸ್ವೀಕರಿಸಿದ್ದವು. 2016ರಲ್ಲಿ 20 ಕೋಟಿ ರೂಗೆ ಹೆಚ್ಚಾಗಿದ್ದ ಈ ಮೊತ್ತ 2017ರಲ್ಲಿ ಮತ್ತೆ 15ಕೋಟಿ ರೂಗೆ ಕುಸಿದಿತ್ತು. ಕಳೆದ ಎರಡು ಆವೃತ್ತಿಗಳಲ್ಲಿ ₹20 ಕೋಟಿ ನೀಡಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.