ETV Bharat / sports

ಮತ್ತೊಂದು ಬಯೋ ಬಬಲ್​ಗೆ ಸಿದ್ಧತೆ: ಜ. 27ರಂದು ಚೆನ್ನೈಗೆ ಬರಲಿದೆ ಟೀಂ ಇಂಡಿಯಾ - ಭಾರತ ತಂಡ ಕ್ವಾರಂಟೈನ್

ಈ ಸರಣಿಗಾಗಿ ದೇಶದ ವಿವಿಧ ನಗರಗಳಿಂದ ವಿವಿಧ ಬ್ಯಾಚ್​ಗಳಲ್ಲಿ ಆಟಗಾರರು ಚೆನ್ನೈಗೆ ಧಾವಿಸಲಿದ್ದಾರೆ. ಐಪಿಎಲ್, ಆಸ್ಟ್ರೇಲಿಯಾದ ನಂತರ ಮತ್ತೊಂದು ಬಯೋ ಬಬಲ್​ ಸಿದ್ಧವಾಗುತ್ತಿದ್ದು, ಅಲ್ಲಿ ಆಟಗಾರರು 7 ದಿನಗಳ ಕ್ವಾರಂಟೈನ್​ಗೆ ಒಳಪಡಲಿದ್ದಾರೆ. ಈ ಅವಧಿಯಲ್ಲಿ ಇಂಗ್ಲೆಂಡ್​ ವಿರುದ್ಧದ ಸರಣಿಗಾಗಿ ತಮ್ಮ ಯೋಜನೆಗಳನ್ನು ರೂಪಿಸಿಕೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ.

ಭಾರತ vs ಇಂಗ್ಲೆಂಡ್ ಟೆಸ್ಟ್​ ಸರಣಿ
ಭಾರತ vs ಇಂಗ್ಲೆಂಡ್ ಟೆಸ್ಟ್​ ಸರಣಿ
author img

By

Published : Jan 23, 2021, 7:23 PM IST

ನವದೆಹಲಿ: ಎಂ.ಚಿದಂಬರಂ ಸ್ಟೇಡಿಯಂನಲ್ಲಿ ಫೆಬ್ರವರಿ 5ರಿಂದ ಆರಂಭವಾಗಲಿರುವ ಮೊದಲ ಟೆಸ್ಟ್​ ಪಂದ್ಯಕ್ಕೂ ಮುನ್ನ ಭಾರತ ತಂಡದ ಎಲ್ಲಾ ಆಟಗಾರರು ಜನವರಿ 27ರಂದು ಚೆನ್ನೈಗೆ ಬಂದು ಸೇರಲಿದ್ದಾರೆ ಎಂದು ತಿಳಿದು ಬಂದಿದೆ.

ಈ ಸರಣಿಗಾಗಿ ದೇಶದ ವಿವಿಧ ನಗರಗಳಿಂದ ವಿವಿಧ ಬ್ಯಾಚ್​ಗಳಲ್ಲಿ ಆಟಗಾರರು ಚೆನ್ನೈಗೆ ಧಾವಿಸಲಿದ್ದಾರೆ. ಐಪಿಎಲ್, ಆಸ್ಟ್ರೇಲಿಯಾದ ನಂತರ ಮತ್ತೊಂದು ಬಯೋ ಬಬಲ್​ ಸಿದ್ಧವಾಗುತ್ತಿದ್ದು, ಅಲ್ಲಿ ಆಟಗಾರರು 7 ದಿನಗಳ ಕ್ವಾರಂಟೈನ್​ಗೆ ಒಳಪಡಲಿದ್ದಾರೆ. ಈ ಅವಧಿಯಲ್ಲಿ ಇಂಗ್ಲೆಂಡ್​ ವಿರುದ್ಧದ ಸರಣಿಗಾಗಿ ತಮ್ಮ ಯೋಜನೆಗಳನ್ನು ರೂಪಿಸಿಕೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ.

ಪ್ರಸ್ತುತ ಶ್ರೀಲಂಕಾ ವಿರುದ್ಧ 2ನೇ ಟೆಸ್ಟ್​ ಪಂದ್ಯವನ್ನಾಡುತ್ತಿರುವ ಇಂಗ್ಲೆಂಡ್ ತಂಡ 26ಕ್ಕೆ ಆ ಸರಣಿ ಮುಗಿಯುತ್ತಿದ್ದಂತೆ ಜನವರಿ 27ರಂದೇ ಭಾರತಕ್ಕೆ ಆಗಮಿಸಿ ಬಯೋ ಬಬಲ್ ಸೇರಿಕೊಳ್ಳಲಿದೆ. ಇನ್ನು ನೇರವಾಗಿ ಇಂಗ್ಲೆಂಡ್​ನಿಂದ ಭಾರತಕ್ಕೆ ಬರಲಿರುವ ಆಲ್​ರೌಂಡರ್​ ಬೆನ್​ ಸ್ಟೋಕ್ಸ್​, ಪೇಸರ್​ ಜೋಫ್ರಾ ಆರ್ಚರ್​ ಮತ್ತು ಆರಂಭಿಕ ಬ್ಯಾಟ್ಸ್​ಮನ್​ ರೋನಿ ಬರ್ನ್ಸ್​ ಇಂಗ್ಲೆಂಡ್​ ತಂಡಕ್ಕಿಂತ ಬೇಗನೆ ಭಾರತಕ್ಕೆ ಆಗಮಿಸಿಲಿದ್ದಾರೆ. ಅವರು ಶ್ರೀಲಂಕಾ ವಿರುದ್ಧದ ಸರಣಿಯಿಂದ ವಿಶ್ರಾಂತಿ ತೆಗೆದುಕೊಂಡಿದ್ದಾರೆ.

ಎರಡೂ ತಂಡದ ಆಟಗಾರರು ಮತ್ತು ಪಂದ್ಯದ ಅಧಿಕಾರಿಗಳು ಚೆನ್ನೈನ ಲೀಲಾ ಪ್ಯಾಲೇಸ್​ನಲ್ಲಿ ಉಳಿದುಕೊಳ್ಳಿದ್ದಾರೆ.

ಇದನ್ನು ಓದಿ:ಇಂಗ್ಲೆಂಡ್​ ವಿರುದ್ಧ ಪ್ರಾಬಲ್ಯ ಮುಂದುವರೆಸುವ ಆಲೋಚನೆಯಲ್ಲಿ ಕೊಹ್ಲಿ ಪಡೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.