ಹೈದರಾಬಾದ್ : ಆಸ್ಟ್ರೇಲಿಯಾ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ 2ನೇ ಹಂತದ ಗಾಯಕ್ಕೊಳಗಾದ್ರೂ ಸುಮಾರು ಎರಡುವರೆ ಗಂಟೆಗಳ ಕಾಲ ಬ್ಯಾಟಿಂಗ್ ಮಾಡಿ ಭಾರತ ತಂಡವನ್ನು ಸೋಲಿನ ದವಡೆಯಿಂದ ತಪ್ಪಿಸಿದ್ದ ಹನುಮ ವಿಹಾರಿಯವರನ್ನು ತೆಲಂಗಾಣ ಮಾಹಿತಿ ತಂತ್ರಜ್ಞಾನ ಸಚಿವರು ಭೇಟಿ ಮಾಡಿ ಸನ್ಮಾನಿಸಿದ್ದಾರೆ.
-
It was a pleasure meeting you and having a conversation about cricket sir.@KTRTRS pic.twitter.com/SyYB64HAGG
— Hanuma vihari (@Hanumavihari) January 18, 2021 " class="align-text-top noRightClick twitterSection" data="
">It was a pleasure meeting you and having a conversation about cricket sir.@KTRTRS pic.twitter.com/SyYB64HAGG
— Hanuma vihari (@Hanumavihari) January 18, 2021It was a pleasure meeting you and having a conversation about cricket sir.@KTRTRS pic.twitter.com/SyYB64HAGG
— Hanuma vihari (@Hanumavihari) January 18, 2021
ಜನವರಿ 11 ರಂದು ಮುಕ್ತಾಯಗೊಂಡಿದ್ದ ಸಿಡ್ನಿ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ 250ಕ್ಕೆ 4 ವಿಕೆಟ್ ಕಳೆದುಕೊಂಡಿದ್ದ ವೇಳೆ ವಿಹಾರಿ ಕ್ರೀಸ್ಗೆ ಆಗಮಿಸಿದ್ದರು. ಅವರು ಕೆಲವೇ ಎಸೆತಗಳನ್ನು ಎದುರಿಸಿದ್ದ ಸಂದರ್ಭದಲ್ಲಿ ಹ್ಯಾಮ್ಸ್ಟಿಂಗ್ ನೋವಿನಿಂದ ಬಳಲಿದ್ದರು. ಆದರೂ ಅವರು 80ನೇ ಓವರ್ನಿಂದ 131ನೇ ಓವರ್ ಮುಗಿಯುವವರೆಗೂ ಮೈದಾನದಲ್ಲಿ ಭಾರತ ತಂಡವನ್ನು ಸೋಲಿನ ದವಡೆಯಿಂದ ತಪ್ಪಿಸಿದ್ದರು. ವಿಹಾರಿ 161 ಎಸೆತಗಳನ್ನು ಎದುರಿಸಿ 23 ರನ್ಗಳಿಸಿದ್ದರು.
ವಿಹಾರಿ 3ನೇ ಪಂದ್ಯದ ನಂತರ ತವರಿಗೆ ಮರಳಿದ್ದು, ಹೈದರಾಬಾದ್ಗೆ ಬಂದೊಡನೆ ತೆಲಂಗಾಣ ಮಾಹಿತಿ ತಂತ್ರಜ್ಞಾನ ಸಚಿವ ಕೆ ಟಿ ರಾಮ ರಾವ್ ಪ್ರಗತಿ ಭವನಕ್ಕೆ ಕರೆಯಿಸಿ ಸನ್ಮಾನಿಸಿದ್ದಾರೆ. ಈ ಸಂದರ್ಭದಲ್ಲಿ ಅವರು ಕ್ರಿಕೆಟ್ ಬಗ್ಗೆ ಕೆಲವು ಸಮಯ ಚರ್ಚಿಸಿದ್ದಾರೆ ಎಂದು ತಿಳಿದು ಬಂದಿದೆ.
ಕೆಟಿಆರ್ ತಮ್ಮನ್ನು ಸನ್ಮಾನಿಸುತ್ತಿರುವ ಫೋಟೋವನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹನುಮ ವಿಹಾರಿ ಶೇರ್ ಮಾಡಿಕೊಂಡಿದ್ದಾರೆ. "ನಿಮ್ಮನು ಭೇಟಿ ಮಾಡಿದ್ದು ಮತ್ತು ಕ್ರಿಕೆಟ್ ಬಗ್ಗೆ ಮಾತನಾಡಿದ್ದಕ್ಕೆ ತುಂಬಾ ಸಂತೋಷವಾಗುತ್ತಿದೆ ಸರ್" ಎಂದು ವಿಹಾರಿ ಬರೆದುಕೊಂಡಿದ್ದಾರೆ.