ETV Bharat / sports

ರವಿ ಭಾಯ್​ ತಂಡದ ಕೋಚ್​​ ಆಗಿ ಮುಂದುವರಿದರೆ ನಮಗೆ ಸಂತೋಷ: ಕ್ಯಾಪ್ಟನ್​ ಕೊಹ್ಲಿ

author img

By

Published : Jul 29, 2019, 8:30 PM IST

ರವಿ ಭಾಯ್​ ತಂಡದ ಕೋಚ್​ ಆಗಿ ಮುಂದುವರಿದರೆ ನಮಗೆ ಸಂತೋಷ ಎಂದು ಟೀಂ ಇಂಡಿಯಾ ಕ್ಯಾಪ್ಟನ್​ ವಿರಾಟ್​ ಕೊಹ್ಲಿ ಮಾಹಿತಿ ನೀಡಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಂಡದ ಸದಸ್ಯರೊಂದಿಗೆ ಕೊಹ್ಲಿ ಉತ್ತಮ ಸಂಬಂಧ ಹೊಂದಿದ್ದಾರೆ ಎಂದರು.

ಕ್ಯಾಪ್ಟನ್​ ಕೊಹ್ಲಿ ಸುದ್ದಿಗೋಷ್ಠಿ

ನವದೆಹಲಿ: ವೆಸ್ಟ್​ ಇಂಡೀಸ್​ ವಿರುದ್ಧದ ಕ್ರಿಕೆಟ್​​ ಸರಣಿ ಮುಕ್ತಾಯಗೊಳ್ಳುತ್ತಿದ್ದಂತೆ ರವಿಶಾಸ್ತ್ರಿ ಕೋಚ್​ ಅವಧಿ ಮುಕ್ತಾಯಗೊಳ್ಳಲಿದ್ದು, ಭಾರತೀಯ ಕ್ರಿಕೆಟ್​ ತಂಡದ ಹೊಸ ಕೋಚ್​ ಹುದ್ದೆಗೆ ಈಗಾಗಲೇ ಬಿಸಿಸಿಐ ಅರ್ಜಿ ಆಹ್ವಾನ ಮಾಡಿದೆ.

ಇಂದು ರಾತ್ರಿ ವಿರಾಟ್​ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ವೆಸ್ಟ್​ ಇಂಡೀಸ್ ಪ್ರಯಾಣ ಬೆಳೆಸಲಿದ್ದು, ಅದಕ್ಕೂ ಮುಂಚಿತವಾಗಿ ಕ್ಯಾಪ್ಟನ್​ ಕೊಹ್ಲಿ ಹಾಗೂ ಕೋಚ್​ ರವಿಶಾಸ್ತ್ರಿ ಸುದ್ದೀಗೋಷ್ಠಿ ನಡೆಸಿದರು. ಇದೇ ವೇಳೆ ಪತ್ರಕರ್ತರೊಬ್ಬರು ಕೇಳಿರುವ ಪ್ರಶ್ನೆಗೆ ಉತ್ತರ ನೀಡಿದ ಕೊಹ್ಲಿ, ಮುಂದಿನ ಅವಧಿಗೆ ರವಿಶಾಸ್ತ್ರಿ ಕೋಚ್​ ಆಗಿ ಆಯ್ಕೆಗೊಂಡರೆ ನಿಜಕ್ಕೂ ನಾವು ಸಂತೋಷಗೊಳ್ಳುತ್ತೇವೆ. ಒಂದು ವೇಳೆ ಬಿಸಿಸಿಐ ನನ್ನ ಸಲಹೆ ಕೇಳಿದರೆ ಖಂಡಿತವಾಗಿ ಈ ವಿಚಾರ ತಿಳಿಸುವೆ ಎಂದರು.

ಕ್ಯಾಪ್ಟನ್​ ಕೊಹ್ಲಿ ಸುದ್ದಿಗೋಷ್ಠಿ

ಕೋಚ್​ ರವಿಶಾಸ್ತ್ರಿ ಅವರ ಅಡಿಯಲ್ಲಿ ನಾವು ಅದ್ಭುತ ಪ್ರದರ್ಶನ ನೀಡಿದ್ದು, ಒಂದು ವೇಳೆ ಸಿಎಸಿ ನನ್ನ ಸಲಹೆ ಕೇಳಿದರೆ ಖಂಡಿತವಾಗಿ ಮಾತನಾಡುವೆ. ರವಿ ಭಾಯ್​​ ಅವರೊಂದಿಗೆ ತಂಡ ಉತ್ತಮ ಹೊಂದಾಣಿಕೆ ಇದ್ದು,ಅವರೇ ತಂಡದ ಕೋಚ್ ಆಗಿ ಮುಂದುವರಿದರೆ ಉತ್ತಮ ಎಂದರು.

ನಮ್ಮ ತಂಡ ವಿಶ್ವಕಪ್​ ಫೈನಲ್​ಗೆ ಹೋಗಿಲ್ಲ ಎಂಬುದಕ್ಕೆ ಎಲ್ಲರಿಗೂ ನಿರಾಶೆ ಇದೆ. ಆದರೆ ಇದೀಗ ನಾವು ಮುಂದುವರಿಯಬೇಕಾಗಿದೆ. ವೆಸ್ಟ್​ ಇಂಡೀಸ್​ ವಿರುದ್ಧದ ಟಿ-20 ಸರಣಿಯಲ್ಲಿ ಆಯ್ಕೆ ಸಮಿತಿ ಕೆಲವೊಂದು ಹೊಸ ಪ್ರತಿಭೆಗಳಿಗೆ ಅವಕಾಶ ನೀಡಿದ್ದು, ಉತ್ತಮ ಪ್ರದರ್ಶನ ನೀಡುವ ವಿಶ್ವಾಸವಿದೆ ಎಂದರು. ಟೆಸ್ಟ್​ ತಂಡಕ್ಕೆ ರೋಹಿತ್​ ಶರ್ಮಾ ಸೇರ್ಪಡೆ ಹಾಗೂ ರಹಾನೆ ಮರಳಿರುವುದು ನಿಜಕ್ಕೂ ಉತ್ತಮ ಬೆಳವಣಿಗೆ ಎಂದು ತಿಳಿಸಿದರು.

Intro:Body:

ರವಿ ಭಾಯ್​ ತಂಡದ ಕೋಚ್​​ ಆಗಿ ಮುಂದುವರಿದರೆ ನಮಗೆ ಸಂತೋಷ: ಕ್ಯಾಪ್ಟನ್​ ಕೊಹ್ಲಿ

ನವದೆಹಲಿ: ವೆಸ್ಟ್​ ಇಂಡೀಸ್​ ವಿರುದ್ಧದ ಕ್ರಿಕೆಟ್​​ ಸರಣಿ ಮುಕ್ತಾಯಗೊಳ್ಳುತ್ತಿದ್ದಂತೆ ರವಿಶಾಸ್ತ್ರಿ ಕೋಚ್​ ಅವಧಿ ಮುಕ್ತಾಯಗೊಳ್ಳಲಿದ್ದು, ಭಾರತೀಯ ಕ್ರಿಕೆಟ್​ ತಂಡದ ಕೋಚ್​ ಹುದ್ದೆಗೆ ಈಗಾಗಲೇ ಬಿಸಿಸಿಐ ಅರ್ಜಿ ಆಹ್ವಾನ ಮಾಡಿದೆ. 

ಇಂದು ರಾತ್ರಿ ವಿರಾಟ್​ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ವೆಸ್ಟ್​ ಇಂಡೀಸ್ ಪ್ರಯಾಣ ಬೆಳೆಸಲಿದ್ದು, ಅದಕ್ಕೂ ಮುಂಚಿತವಾಗಿ ಕ್ಯಾಪ್ಟನ್​ ಕೊಹ್ಲಿ ಹಾಗೂ ಕೋಚ್​ ರವಿಶಾಸ್ತ್ರಿ ಸುದ್ದೀಗೋಷ್ಠಿ ನಡೆಸಿದರು. ಇದೇ ವೇಳೆ ಪತ್ರಕರ್ತರೊಬ್ಬರು ಕೇಳಿರುವ ಪ್ರಶ್ನೆಗೆ ಉತ್ತರ ನೀಡಿದ ಕೊಹ್ಲಿ, ಮುಂದಿನ ಅವಧಿಗೆ ರವಿಶಾಸ್ತ್ರಿ ಕೋಚ್​ ಆಗಿ ಆಯ್ಕೆಗೊಂಡರೆ ನಿಜಕ್ಕೂ ನಾವು ಸಂತೋಷಗೊಳ್ಳುತ್ತೇವೆ. ಒಂದು ವೇಳೆ ಬಿಸಿಸಿಐ ನನ್ನ ಸಲಹೆ ಕೇಳಿದರೆ ಖಂಡಿತವಾಗಿ ಈ ವಿಚಾರ ತಿಳಿಸುವೆ ಎಂದರು. 

ಕೋಚ್​ ರವಿಶಾಸ್ತ್ರಿ ಅವರ ಅಡಿಯಲ್ಲಿ ನಾವು ಅದ್ಭುತ ಪ್ರದರ್ಶನ ನೀಡಿದ್ದು, ಒಂದು ವೇಳೆ ಸಿಎಸಿ ನನ್ನ ಸಲಹೆ ಕೇಳಿದರೆ ಖಂಡಿತವಾಗಿ ಮಾತನಾಡುವೆ. ರವಿ ಭಾಯ್​​ ಅವರೊಂದಿಗೆ ತಂಡ ಉತ್ತಮ ಹೊಂದಾಣಿಕೆ ಇದ್ದು,ಅವರೇ ತಂಡದ ಕೋಚ್ ಆಗಿ ಮುಂದುವರಿದರೆ ಉತ್ತಮ ಎಂದರು. 

ನಮ್ಮ ತಂಡ ವಿಶ್ವಕಪ್​ ಫೈನಲ್​ ತಲುಪಿಲ್ಲ ಎಂಬುದಕ್ಕೆ ಎಲ್ಲರಿಗೂ ನಿರಾಶೆ ಇದೆ. ಆದರೆ ನಾವು ಮುಂದುವರಿಯಬೇಕಾಗಿದ್ದು, ವೆಸ್ಟ್​ ಇಂಡೀಸ್​ ವಿರುದ್ಧದ ಟಿ20 ಸರಣಿಯಲ್ಲಿ ಕೆಲವೊಂದು ಹೊಸ ಪ್ರತಿಭೆಗಳಿಗೆ ಅವಕಾಶ ನೀಡಿದ್ದು, ಉತ್ತಮ ಪ್ರದರ್ಶನ ನೀಡುವ ವಿಶ್ವಾಸವಿದೆ ಎಂದರು. ಟೆಸ್ಟ್​ ತಂಡಕ್ಕೆ ರೋಹಿತ್​ ಶರ್ಮಾ ಸೇರ್ಪಡೆ ಹಾಗೂ ರಹಾನೆ ಮರಳಿರುವುದು ನಿಜಕ್ಕೂ ಉತ್ತಮ ಬೆಳವಣಿಗೆ ಎಂದು ತಿಳಿಸಿದರು. 

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.