ಆಂಟಿಗುವಾ: ಪ್ರತಿಯೊಂದು ಪಂದ್ಯದಲ್ಲೂ ದಾಖಲೆಯನ್ನು ನಿರ್ಮಿಸುತ್ತಲೇ ಬರುತ್ತಿರುವ ಟೀಂ ಇಂಡಿಯಾ ಕಪ್ತಾನ ವಿರಾಟ್ ಕೊಹ್ಲಿ ಗುರುವಾರದಿಂದ ಆರಂಭವಾಗಲಿರುವ ಟೆಸ್ಟ್ ಪಂದ್ಯದಲ್ಲಿ ಆಸೀಸ್ ಮಾಜಿ ನಾಯಕ ರಿಕಿ ಪಾಂಟಿಂಗ್ ದಾಖಲೆ ಮೇಲೆ ಕಣ್ಣಿಟ್ಟಿದ್ದಾರೆ.
ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್ನಲ್ಲಿ ಈವರೆಗೆ 25 ಶತಕ ಸಿಡಿಸಿದ್ದಾರೆ. ನಾಯಕನಾಗಿ 18 ಸೆಂಚುರಿ ಬಾರಿಸಿದ್ದು, ಇನ್ನೊಂದು ಸೆಂಚುರಿ ಬಾರಿಸಿದಲ್ಲಿ ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ಶತಕಗಳ ಸಂಖ್ಯೆಯನ್ನು ಸರಿಗಟ್ಟಲಿದ್ದಾರೆ. ಪಾಂಟಿಂಗ್ ನಾಯಕನಾಗಿ 19 ಸೆಂಚುರಿ ಸಿಡಿಸಿದ್ದಾರೆ.
ಕೊಹ್ಲಿ ಇನ್ನೊಂದು ಸೆಂಚುರಿಯ ಮೂಲಕ ನಾಯಕನಾಗಿ ಟೆಸ್ಟ್ನಲ್ಲಿ ಅತೀ ಹೆಚ್ಚು ಶತಕ ಬಾರಿಸಿದ ಯಾದಿಯಲ್ಲಿ ಜಂಟಿಯಾಗಿ ಎರಡನೇ ಸ್ಥಾನ ಪಡೆಯಲಿದ್ದಾರೆ. ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಗ್ರೇಮ್ ಸ್ಮಿತ್ ಈ ಲಿಸ್ಟ್ನಲ್ಲಿ ಅಗ್ರಸ್ಥಾನದಲ್ಲಿದ್ದಾರೆ.
ವಿರಾಟ್ ಕೊಹ್ಲಿ ಟೆಸ್ಟ್ನಲ್ಲಿ ಒಟ್ಟಾರೆ 25 ಶತಕ ಹಾಗೂ ಆರು ದ್ವಿಶತಕ ಸಿಡಿಸಿದ್ದಾರೆ. ಭಾರತ ಹಾಗೂ ವಿಂಡೀಸ್ ನಡುವಿನ ಎರಡು ಟೆಸ್ಟ್ ಪಂದ್ಯಗಳ ಸರಣಿ ಗುರುವಾರ ಆಂಟಿಗುವಾದಲ್ಲಿ ಆರಂಭವಾಗಲಿದೆ.